ಮಡಿಕೇರಿ, ಸೆ. ೮: ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸಮರ್ಥ ಕನ್ನಡಿಗ ಸಂಸ್ಥೆ ವತಿಯಿಂದ ಗೌರಿಗಣೇಶ ಹಬ್ಬದ ಪ್ರಯುಕ್ತ ನಗರದ ಬಾಲಕಿಯರ ಬಾಲ ಮಂದಿರದ ೪೪ ಬಾಲಕಿಯರಿಗೆ ಸಂಯುಕ್ತ ಯೋಜನೆಯಡಿ ರೂ. ೩೦ ಸಾವಿರ ವೆಚ್ಚದಲ್ಲಿ ಹೊಸ ಬಟ್ಟೆ ಮತ್ತು ಗಾಜಿನ ಬಳೆಗಳನ್ನು ವಿತರಿಸಲಾಯಿತು.

ಹೊಸ ಬಟ್ಟೆಗಳನ್ನು ವಿತರಿಸಿ ಮಾತನಾಡಿದ ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ಪ್ರತೀಯೋರ್ವರಿಗೂ ಕೋವಿಡ್ ಸಂಕಷ್ಟದ ದಿನಗಳು ಖರ್ಚು ವೆಚ್ಚದ ಇತಿ ಮಿತಿ ತಿಳಿಸಿದೆ. ಹೀಗಾಗಿ ಎಷ್ಟು ಸೂಕ್ಷö್ಮವೋ ಅಷ್ಟು ಮಾತ್ರ ಸೂಕ್ಷö್ಮವಾಗಿ ವೆಚ್ಚ ಮಾಡಿ ಉಳಿದ ಹಣವನ್ನು ಸಾಮಾಜಿಕ ಸೇವೆಗೆ ಬಳಸಿಕೊಳ್ಳಬೇಕು. ಸಮಾಜದಲ್ಲಿ ಅನೇಕರಿಗೆ ವಿವಿಧ ಅಗತ್ಯತೆಗಳಿರುತ್ತದೆ. ಇದನ್ನು ಪ್ರತೀ ಯೋರ್ವರೂ ಮನಸ್ಸಿ ನಲ್ಲಿರಿಸಿಕೊಂಡು ಜೀವನಾಗತ್ಯಗಳನ್ನು ಪೂರೈಸಬೇಕೆಂದು ಕರೆ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಗೌರಿಹಬ್ಬದ ಪ್ರಯುಕ್ತ ಬಾಲಕಿಯರಿಗೆ ಹೊಸ ಬಟ್ಟೆ ಮತ್ತು ಬಳೆಗಳನ್ನು ನೀಡುವ ಮೂಲಕ ರೋಟರಿ ಮಿಸ್ಟಿ ಹಿಲ್ಸ್ ವಿಶೇಷ ರೀತಿಯಲ್ಲಿ ಉತ್ಸವ ಆಚರಿಸಿದ ಸಾರ್ಥಕತೆ ಪಡೆದಿದೆ ಎಂದರು. ಮುಂದಿನ ದಿನಗಳಲ್ಲಿಯೂ ಬಾಲಕಿಯರ ಬಾಲಮಂದಿರಕ್ಕೆ ಅಗತ್ಯ ನೆರವನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೀಡುವುದಾಗಿ ಅನಿತಾ ಭರವಸೆ ನೀಡಿದರು.

ಸಮರ್ಥ ಕನ್ನಡಿಗ ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷಿö್ಮ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರಾದ ಸಮರ್ಥ ಕನ್ನಡಿಗ ಸಂಸ್ಥೆಯು ಹಬ್ಬದ ಪ್ರಯುಕ್ತ ಮುಂಬೈನ ಬಾಂಡೂಪ್ದಾನಿ ಯದಲ್ಲಿರುವ ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ನ ದಾನಿ ಶ್ರೀದೇವಿ ಅವರ ಮೂಲಕ ರೂ. ೧೦ ಸಾವಿರ ವೆಚ್ಚದಲ್ಲಿ ಹೊಸ ಬಟ್ಟೆಗಳನ್ನು ಇಲ್ಲಿನ ಮಕ್ಕಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬಾಲಕಿಯರ ಬಾಲಮಂದಿರದ ಮುಖ್ಯಸ್ಥೆ ವನಿತಾ, ಸಮರ್ಥ ಕನ್ನಡಿಗ ಸಂಸ್ಥೆಯ ನಿರ್ದೇಶಕ ಪ್ರತಾಪ್, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್. ರಾಜೇಶ್, ದಾನಿಗಳಾದ ಡಾ. ಪುಚ್ಚಿಮಾಡ ಟೀನಾ ಬೊಳ್ಳಮ್ಮ, ಗೀತಾ ಗಿರೀಶ್ ಹಾಜರಿದ್ದರು.