ಕೂಡಿಗೆ. ಸೆ. ೮: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನ ಮುಂಭಾಗದ ಆವರಣದಲ್ಲಿ ಕೆಲ ಪುಂಡರು ಮದ್ಯ ಸೇವಿಸಿ ತಿಂದು ಕಾಲೇಜಿನ ಆವರಣವನ್ನು ಹಾಳು ಮಾಡುತ್ತಿರುವುದು ಕಂಡುಬAದಿದೆ.

ಕೆಲ ದಿನಗಳಿಂದ ಕೃಷಿ ಕ್ಷೇತ್ರದ ಮುಖ್ಯ ರಸ್ತೆಯಲ್ಲಿರುವ ಕಾಲೇಜು ಆವರಣದಲ್ಲಿ ಪುಂಡರು ಮದ್ಯದ ಬಾಟಲಿ ತಂದು ಕುಡಿದು ನಂತರ ಅಲ್ಲಿಯೇ ಒಡೆದು ಕಾಲೇಜಿನ ಆವರಣವನ್ನು ಹಾಳು ಮಾಡಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಕಾಲೇಜು ಸಮಿತಿ ವತಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.