ಚೆಟ್ಟಳ್ಳಿ, ಸೆ. ೮ : ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ತಡೆಯಾದ ಜೊತೆಗೆ ಕೆಲವೇ ನಿಮಿಷಗಳಲ್ಲಿ ಖಾಸಗಿ ಬಸ್ ಹಾಗೂ ವ್ಯಾನು ಅಪಾಯದಿಂದ ಪಾರಾದ ಘಟನೆ ಚೆಟ್ಟಳ್ಳಿ ಸಮೀಪದ ಅಬ್ಯಾಲದಲ್ಲಿ ನಡೆದಿದೆ.

ಪೂರ್ವಾಹ್ನ ೮.೩೦ ಗಂಟೆಗೆ ಬೃಹತ್ ಗಾತ್ರದ ಮರವೊಂದು ಅಬ್ಯಾಲದ ಸೂರ್ಯೋದಯ ತೋಟದ ಸಮೀಪ ಮುಖ್ಯರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಕೆಲವೇ ಸೆಕೆಂಡುಗಳಲ್ಲಿ ವ್ಯಾನ್ ದಾಟಿದ್ದು, ಹಿಂದೆ ಬರುತಿದ್ದ ವಿನಾಯಕ ಬಸ್ ಕೂಡ ತಡವಾಗಿ ಬಂದಿದ್ದರಿAದ ಭಾರೀ ಅನಾಹುತ ದಿಂದ ಪಾರಾದ ಬಗ್ಗೆ ಪ್ರತ್ಯಕ್ಷದರ್ಶಿಗಳಾದ ಸ್ಥಳೀಯ ಬೆಳೆಗಾರ ಕಾಡ್ಯಮಾಡ ವಿನ್ಸಿಅಪ್ಪಯ್ಯ ತಿಳಿಸಿದ್ದಾರೆ.

ಚೆಟ್ಟಳ್ಳಿಯ ಪೊಲೀಸ್ ಠಾಣೆ, ವಿದ್ಯುತ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ ಮೇರೆಗೆ ಚೆಟ್ಟಳ್ಳಿ ಪೊಲೀಸ್ ಸಿಬ್ಬಂದಿಗಳು, ಮೀನುಕೊಲ್ಲಿ ಹಾಗೂ ಮೂರ್ನಾಡು ವಲಯದ ಅರಣ್ಯ ಸಿಬ್ಬಂದಿಗಳು, ವಿದ್ಯುತ್ ಇಲಾಖಾ ಸಿಬ್ಬಂದಿಗಳು ಸ್ಥಳೀಯರೊಂದಿಗೆ ಸೇರಿ ಮಧ್ಯಾಹ್ನ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.

ಚೆಟ್ಟಳ್ಳಿ ಹಾಗೂ ಕತ್ತಲೆಕಾಡುವಿನಲ್ಲಿ ಪೊಲೀಸ್ ಬ್ಯಾರಿಕೇಡನ್ನು ಹಾಕಲಾಗಿದ್ದರೂ ಕೆಲವು ವಾಹನ ಸವಾರರು ಹಾಗೂ ಪ್ರವಾಸಿಗರು ಬ್ಯಾರಿಕೇಡನ್ನು ದಾಟಿ ಬಂದು ರಸ್ತೆ ಸಂಚಾರವಿಲ್ಲದೆ ಪರದಾಡುತಿದ್ದದ್ದು ಕಂಡುಬAತು. ಮಧ್ಯಾಹ್ನದವರೆಗೆ ಬಸ್ ಹಾಗೂ ವಾಹನಗಳು ಚೆಟ್ಟಳ್ಳಿಯಿಂದ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿಗೆ ತೆರಳಿದವು.

-ಕರುಣ್ ಕಾಳಯ್ಯ