ಸುಂಟಿಕೊಪ್ಪ, ಸೆ. ೭: ಶಾಲಾ-ಕಾಲೇಜು ಇಲ್ಲದೆ ಪರಿತಪಿಸುತ್ತಿರುವ ವಿದ್ಯಾರ್ಥಿಗಳು ಆನ್‌ಲೈನ್ ಪಾಠಗಳಿಂದಲೂ ವಂಚಿತರಾಗಿರುವ ವಿದ್ಯಾರ್ಥಿಗಳು. ಸುಂಟಿಕೊಪ್ಪ ಸಮೀಪದ ಕಾಂಡನ ಕೊಲ್ಲಿ ಮತ್ತು ಹಾಲೇರಿ ಭಾಗದಲ್ಲಿ ಬಹುತೇಕ ಕೂಲಿ ಕಾರ್ಮಿಕರಿದ್ದು, ಇವರ ಮಕ್ಕಳು ವಿದ್ಯಾಬ್ಯಾಸಕ್ಕಾಗಿ ಆನ್‌ಲೈನ್ ಕ್ಲಾಸ್ ಪಾಠ ತೆಗೆದು ಕೊಳ್ಳುತ್ತಿದ್ದು, ಈ ಭಾಗದಲ್ಲಿ ನೆಟ್‌ವರ್ಕ್ ಕೊರತೆಯಿಂದ ಪರಿತಪಿಸುವಂತಾಗಿದೆ.

ಖಾಸಗಿ ಸಂಸ್ಥೆಯವರು ಕೆದಕÀಲ್ ಗ್ರಾಮದಲ್ಲಿ ನೂತನ ಟವರ್ ನಿರ್ಮಾಣ ಮಾಡಿದ್ದು, ಕೆಲವೊಂದು ಸಮಯದಲ್ಲಿ ನೆಟ್‌ವರ್ಕ್ ಸಿಗುತ್ತಿರುವುದನ್ನು ಮನಗಂಡು ಕೆÀಲ ಕಾರ್ಮಿಕರು ತನ್ನ ಮಕ್ಕಳ ವಿದ್ಯಾಭ್ಯಾಸದ ಒಳಿತಿಗಾಗಿ ಆ ಸಂಸ್ಥೆಯ ಸಿಮ್ ಖರೀದಿಸಿ ಈ ಮುಖಾಂತರ ವಿದ್ಯಾಭ್ಯಾಸ ಮುಂದುವರಿಯುವAತೆ ಮಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಸ್ಥೆಯ ನೆಟ್‌ವರ್ಕ್ ಕೂಡ ಸಿಗದೆ ಇದೀಗ ಆಕಾಶ ನೋಡುವಂತಾಗಿದೆ. ಸಂಬAಧಪಟ್ಟ ಸಂಸ್ಥೆಯವರು ಇತ್ತ ಗಮನ ಹರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿ ಮಕ್ಕಳ ಮುಂದಿನ ಭವಿಷ್ಯಕ್ಕೆ ಸಹಕರಿಸುವಂತೆ ಕಾಂಡನಕೊಲ್ಲಿ ಮತ್ತು ಹಾಲೇರಿ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.