ಮಡಿಕೇರಿ, ಸೆ. ೭: ಕೊಡವರು ಹಾಗೂ ಜಮ್ಮಾ ಹಿಡುವಳಿಗೆ ಸಂಬAಧಿಸಿದAತೆ ಇರುವ ಕೋವಿ ವಿನಾಯಿತಿ ಹಕ್ಕನ್ನು ಪ್ರಶ್ನಿಸಿ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬAಧಿಸಿದAತೆ ರಾಜ್ಯ ಹಾಗೂ ಕೇಂದ್ರ ಸರಕಾರದ ಮೂಲಕ ಇಂದು ಆಕ್ಷೇಪಣೆ ಸಲ್ಲಿಸಲಾಗಿದೆ.

ನಿವೃತ್ತ ಕ್ಯಾಪ್ಟನ್ ಜಿಲ್ಲೆಯವರೇ ಆದ ಯಾಲದಾಳು ಚೇತನ್ ಎಂಬವರು ಈ ವಿನಾಯಿತಿಯ ಕುರಿತು ಪ್ರಶ್ನಿಸಿ ಇತ್ತೀಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಸಂಬAಧಿಸಿದAತೆ ತಮ್ಮನ್ನೂ ಪ್ರತಿವಾದಿಗಳಾಗಿ ಪರಿಗಣಿಸುವಂತೆ ಕೋರಿ, ಫೆಡರೇಷನ್ ಆಫ್ ಕೊಡವ ಸಮಾಜ, ಅಖಿಲ ಕೊಡವ ಸಮಾಜ, ಬೆಂಗಳೂರು ಕೊಡವ ಸಮಾಜ, ಸಿಎನ್‌ಸಿ ಸೇರಿದಂತೆ ವಿವಿಧ ಸಂಘಟನೆಗಳು ತಮ್ಮ ವಕೀಲರ ತಂಡದ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಇಂದು ನಡೆದಿದ್ದು, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬAಧಿಸಿದAತೆ ಆಕ್ಷೇಪಣೆಯನ್ನು ಸಲ್ಲಿಸಿವೆ. ಇದರ ವಿಚಾರಣೆ ಇದೀಗ ತಾ. ೧೬ಕ್ಕೆ ಮುಂದೂಡಲ್ಪಟ್ಟಿದೆ. ವಿಚಾರಣೆ ಸಂದರ್ಭ ವಕೀಲರುಗಳಾದ ಸಜನ್ ಪೂವಯ್ಯ, ಎ. ಎಸ್. ಪೊನ್ನಣ್ಣ, ಧ್ಯಾನ್‌ಚಂಗಪ್ಪ, ರಾಲಿ ಮುದ್ದಪ್ಪ, ಗಗನ್ ಗಣಪತಿ ಮತ್ತಿತರರು ಪಾಲ್ಗೊಂಡಿದ್ದರು.