ಸುಂಟಿಕೊಪ್ಪ, ಸೆ. ೭: ಇಲ್ಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ‘ಚಡ್ಡಿ ದೊಸ್ತ್’ ಸಂಘದ ವತಿಯಿಂದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಅಂಕಿತ ಸುರೇಶ್ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಸಂಘದ ಅಧ್ಯಕ್ಷ ನವೀನ್, ಉಪಾಧ್ಯಕ್ಷ ಉಮ್ಮರ್, ಸ್ಥಾಪಕಾಧ್ಯಕ್ಷ ಮೋಹನ್ ಬಾಳೆಕಾಡು, ಕಾರ್ಯದರ್ಶಿ ಕೆ.ಎಂ. ವಿನೋದ್, ಖಜಾಂಚಿ ಹರೀಶ್ ಕೊಡಗರಹಳ್ಳಿ, ಪದಾಧಿಕಾರಿಗಳಾದ ಕರುಣಾಕರ, ರಾಘವೇಂದ್ರ ಚಾಮರಾಜನಗರ ಕೆ.ಕೆ. ಹರೀಶ್ ಮಾದಾಪುರ, ಅರುಣ್ ಬೆಂಗಳೂರ ಧನಂಜಯ, ಹೇಮಂತ್, ಹೊನ್ನಂಪಾಡಿ ಸುರೇಶ್ ಸೇರಿದಂತೆ ಇತರರು ಇದ್ದರು.