*ಗೋಣಿಕೊಪ್ಪ, ಸೆ. ೮: ಕೋವಿ, ಕತ್ತಿ, ನೇಗಿಲು, ನೋಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಕೊಡಗು ಹೆಗ್ಗಡೆ ಸಮಾಜ ವತಿಯಿಂದ ಕೈಲ್‌ಪೊಳ್ದ್ ನಮ್ಮೆ ಆಚರಿಸಲಾಯಿತು.

ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ಜನಾಂಗದ ಹಿರಿಯರಾದ ಮೂರಿರ ಕುಶಾಲಪ್ಪ, ಪಾರ್ವತಿ ದಂಪತಿಗಳು ಕೈಲ್‌ಪೊಳ್ದ್ ಆಚರಣೆಗೆ ಚಾಲನೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಪಡಿಞರಂಡ ಪ್ರಭುಕುಮಾರ್ ಮಾತನಾಡಿ ಸಮಾಜಗಳಲ್ಲಿ ಅಚರಿಸುವ ಕೈಲ್ ಪೊಳ್ದ್ ಹಬ್ಬ ನಮ್ಮ ಕೃಷಿ ಬದುಕಿನ ಮತ್ತು ವೀರ ಪರಂಪರೆಗಳನ್ನು ಯುವ ಪೀಳಿಗೆ ನೆನಪಿಸುವ ಹಬ್ಬವಾಗಿ ಪಾಳುಬಿಟ್ಟ ಭತ್ತದ ಗದ್ದೆಗಳಲ್ಲಿ ಮತ್ತೆ ಉಳುಮೆಮಾಡಲು ಪ್ರೇರಣೆ ನೀಡುವಂತಾಗಿದೆ ಎಂದು ತಿಳಿಸಿದರು.

ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ ಕೊಡವರ ಸಂಪ್ರಾದಾಯಿಕ ಆಯುಧ ಪೂಜೆಯನ್ನು÷ ಕೈಲ್‌ಪೊಳ್ದ್ ದಿನದಂದು ಆಚರಿಸಲಾಗುತ್ತದೆ. ಕೊಡವರ ಸಾಂಪ್ರಾದಾಯಿಕ ಸಂಸ್ಕöÈತಿಯ ಬಿಂಬವಾಗಿರುವ ಕೋವಿ, ಇನ್ನಿತರ ವಸ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧಗಳ ಮೇಲೆ ನಮಗಿರುವ ಹಕ್ಕುಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದುಡಿಕೊಟ್ಟ್ ಪಾಟನ್ನು ಮಾಜಿ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ತೊರೇರ ಮುದ್ದಯ್ಯನವರೊಂದಿಗೆ ಸಮಾಜದ ನಿರ್ದೇಶಕರುಗಳಾದ ಕೊಪ್ಪಡ ಪಟ್ಟು ಪಳಂಗಪ್ಪ, ಪಾನಿಕುಟ್ಟೀರ ಕುಟ್ಟಪ್ಪ, ತಂಬAಡ ಮಂಜು, ನೆರವೇರಿಸಿದರು.

ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಚಂಗಚAಡ ಕಟ್ಟಿ ಕಾವೇರಪ್ಪ, ಕೊಂಗೆಪAಡ ರವಿ, ಪಂದಿಕAಡ ಸುನ, ಮೂರಿರ ಶಾಂತಿ, ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ, ವಿಂಗ್ ಕಮಾಂಡರ್ ಚಂಗಚAಡ ಪ್ರವೀಣ್ ಮತ್ತಿತರರು ಹಾಜರಿದ್ದರು.