ಮಡಿಕೇರಿ, ಸೆ. ೮: ಪಾಲಿಬೆಟ್ಟದ ಮಸ್ಕಲ್ ತೋಟದ ಮಹಿಳೆ ಕೋವಿಡ್‌ನಿಂದ ಮೃತಪಟ್ಟಿದ್ದು, ನಿಯಮದಂತೆ ಮಾಧ್ಯಮ ಸ್ಪಂದನ ತಂಡ ಅಂತ್ಯಕ್ರಿಯೆ ನೆರವೇರಿಸಿದೆ.
ತಂಡದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪುತ್ತಂ ಪ್ರದೀಪ್, ಪುತ್ತರಿರ ಪಪ್ಪು ತಿಮ್ಮಯ್ಯ, ಕುಟ್ಟಂಡ ಅಜಿತ್ ಕರುಂಬಯ್ಯ, ಸಾಮಾಜಿಕ ಕಾರ್ಯಕರ್ತರಾದ ಎನ್. ವಿನಯ್, ಬಿ.ಪಿ. ಸುನೀಲ್ ಪಿಪಿಇ ಕಿಟ್ ಧರಿಸಿ ಮೃತರ ಶರೀರವನ್ನು ಪಾಲಿಬೆಟ್ಟ ಹಿಂದೂ ರುದ್ರಭೂಮಿವರೆಗೂ ಹೊತ್ತು ಸಾಗಿ ಅಂತ್ಯಸAಸ್ಕಾರ ನೆರವೇರಿಸಿದ್ದಾರೆ.