ಸೋಮವಾರಪೇಟೆ, ಸೆ. ೭: ತಾಲೂಕಿನ ಬೆಟ್ಟದಳ್ಳಿ ಸಿದ್ದಾರ್ಥನಗರದ ಮಾನವತಾ ಯುವಕ ಸಂಘದ ವತಿಯಿಂದ ಬೆಟ್ಟದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಇದೇ ಸಂದರ್ಭ ಮಕ್ಕಳಿಗೆ ಮಾಸ್ಕ್ ವಿತರಿಸಲಾಯಿತು. ಸಂಘದ ಅಧ್ಯಕ್ಷ ಬಿ.ಕೆ. ನವೀನ್ ಕುಮಾರ್, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಂ.ದಿನೇಶ್ ಮತ್ತು ಸಂಘದ ಸದಸ್ಯರು ಇದ್ದರು.