ಮಡಿಕೇರಿ, ಸೆ. ೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಸಂಯುಕ್ತ ಆಶ್ರಯದಲ್ಲಿ ಸಂತ ಮೈಕಲರ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೇವೆಯಿಂದ ನಿವೃತ್ತರಾದ ಡಿಡಿಪಿಐ ಪೆರಿಗ್ರಿನ್ ಎಸ್. ಮಚ್ಚಾಡೋ, ಪ್ರಥಮ ದರ್ಜೆ ಸಹಾಯಕ ಪಿ.ಎಸ್. ರವಿ, ದ್ವಿತೀಯ ದರ್ಜೆ ಸಹಾಯಕರಾದ ಡಿ.ಎ. ಲಲಿತಾ, ಎಂ.ಬಿ. ವಸಂತಿ, ಪದವೀಧರ ಮುಖ್ಯ ಶಿಕ್ಷಕರಾದ ಎಂ.ಬಿ. ಕುಸುಮಾವತಿ, ಮುಖ್ಯ ಶಿಕ್ಷಕರುಗಳಾದ ಕೆ.ಎ. ರಾಮಚಂದ್ರ, ವೈ.ಎ. ತಂಗಮ್ಮ, ಪಿ.ಜಿ. ಸುರೇಶ್ ಕುಮಾರ್, ಪಿ. ಸೀತಮ್ಮ, ಬಿ.ಕೆ. ಸರೋಜ, ಎನ್.ಯು. ನೀಲಮ್ಮ, ಸಿ.ಇ. ಕುಸುಮಕುಮಾರಿ, ಟಿ.ಪಿ. ಸರೋಜಿನಿ, ಬಿ.ವಿ. ಸುಗುಣ, ಬಿ. ದೊಡ್ಡಣ್ಣ, ಸಹ ಶಿಕ್ಷಕರುಗಳಾದ ಬಿ.ಎನ್. ಚಂಪಕ, ಕೆ.ಎಸ್. ಡಾಟಿ, ಡಿ.ಡಿ. ಪದ್ಮಾವತಿ, ಡಿ.ಸೆಲಿನಾ, ಎಂ.ಎಸ್. ಜಾನಕಿ, ಎಂ.ಪಿ.ಅಕ್ಕಮ್ಮ, ಕೆ.ಎಲಿಯಾ, ಕೆ.ಯು. ರೇಣಾ, ಎಂ.ಎಸ್. ಯಶೋಧ, ಕೆ. ಬೇಬಿ, ಕೆ.ಸುರೇಶ್ ಹೆಗ್ಗಡೆ, ಕೆ.ಎಸ್. ದಮಯಂತಿ, ಎ.ಬಿ. ಜಾನಕಿ, ಬಿ. ಗಾಯತ್ರಿದೇವಿ, ಎಂ.ಯು. ಶಾರದ, ದಿ.ಎ.ಯು. ಶಾರದ ಇವರುಗಳು ಸನ್ಮಾನಕ್ಕೆ ಭಾಜನರಾದರು.
ದಿ. ಎ.ಯು. ಶಾರದ ಅವರ ಪರವಾಗಿ ಅವರ ಪುತ್ರಿ ಸನ್ಮಾನ ಸ್ವೀಕರಿಸಿದರು.
ಇವರುಗಳೊಂದಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದ ಹೆಚ್.ಎಸ್. ಚೇತನ್, ಕಳೆದ ಬಾರಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ರೇವತಿ ರಮೇಶ್ ಅವರುಗಳನ್ನು ಸನ್ಮಾನಿಸಲಾಯಿತು.