ಮಡಿಕೇರಿ : ಕರಡ ಗ್ರಾಮದ ಕೀಮಲೆಕಾಡು ನಿವಾಸಿ ಎಂ.ಪಿ ನಾಣಯ್ಯ ಅವರ ಪತ್ನಿ ಎಂ.ಎಸ್ ಸುಮಲತಾ (೨೭) ಅವರು ಕಾಣೆಯಾಗಿರುವುದಾಗಿ ನಾಣಯ್ಯ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಗಸ್ಟ್ ೩೧ ರಂದು ಕರಡ ಪ್ರಾಥಮಿಕ ಶಾಲೆಯಲ್ಲಿ ಸಭೆ ಇರುವುದಾಗಿ ನಾಣಯ್ಯ ಅವರಿಗೆ ತಿಳಿಸಿದ ಸುಮಲತಾ, ಆಕೆಯ ತಾಯಿ ಸುಬ್ಬಮ್ಮ ಅವರೊಂದಿಗೆ ಈ ಸಭೆಗೆ ಹೋಗುವುದಾಗಿ ತಿಳಿಸಿ ತೆರಳಿದ್ದಾರೆ.
ಬಳಿಕ ಫೋನ್ ಸ್ವಿಚ್ ಆಫ್ ಮಾಡಿದ ಸುಮಲತಾ ಅವರು ಮನೆಗೆ ಹಿಂತಿರುಗಿ ಬಾರದೆ ಇರುವುದಾಗಿ ನಾಣಯ್ಯ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ಪತ್ತೆಯಾದಲ್ಲಿ ವೀರಾಜಪೇಟೆ ಗ್ರಾಮಾಂತರ ಠಾಣೆ - ದೂ. ೦೮೨೭೪-೨೫೭೪೬೨ ಸಂಪರ್ಕಿಸುವAತೆ ಕೋರಿದೆ.