ಮಡಿಕೇರಿ, ಸೆ. ೭: ಪಡಿತರ ಚೀಟಿಗೆ ಸಂಬAಧಿಸಿದAತೆ ಇಕೆವೈಸಿ ನೀಡುವ ಪ್ರಕ್ರಿಯೆಗೆ ಆಹಾರ ಇಲಾಖೆ ತಾ. ೧೦ರ ವರೆಗೆ ಅವಕಾಶ ನೀಡಿದ್ದು, ಕಾಲಾವಕಾಶ ಕಡಿಮೆ ಇರುವುದರಿಂದ ಅವಧಿಯನ್ನು ವಿಸ್ತರಿಸುವಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮಡಿಕೇರಿ ನಗರ ಸಮಿತಿ ಜಿಲ್ಲಾಡಳಿತ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಉಳಿದಿರುವ ಮೂರು ದಿನಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ನ್ಯಾಯಬೆಲೆ ಅಂಗಡಿ ಎದುರು ನೂರಾರು ಮಂದಿ ಸಾಲುಗಟ್ಟಿ ನಿಂತರೆ ಕೋವಿಡ್ ಸೋಂಕು ವ್ಯಾಪಿಸುವ ಆತಂಕ ಎದುರಾಗಿದೆ. ದಿನಕ್ಕೆ ೫೦ ರಿಂದ ೬೦ ಮಂದಿಯ ಮಾಹಿತಿ ಮಾತ್ರ ಪಡೆಯಲು ಸಾಧ್ಯವಾಗುತ್ತಿದೆ. ಇದರಿಂದಾಗಿ ಸಾವಿರಾರು ಮಂದಿ ಬಯೋಮೆಟ್ರಿಕ್ ನಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಸರ್ವರ್ ಸಮಸ್ಯೆಯೂ ಅಡಚಣೆ ಉಂಟು ಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಒಂದು ತಿಂಗಳು ಕಾಲಾವಕಾಶ ನೀಡಬೇಕೆಂದು ಎಸ್‌ಡಿಪಿಐ ನಗರಾಧ್ಯಕ್ಷ ಖಲೀಲ್, ಉಪಾಧ್ಯಕ್ಷ ಮೈಕಲ್ ವೇಗಸ್, ಕಾರ್ಯದರ್ಶಿ ಜಂಷೀರ್ ಹಾಗೂ ತನುಜಾವತಿ ಮನವಿ ಸಲ್ಲಿಸಿದ್ದಾರೆ.