ಕಡಂಗ, ಸೆ. ೫: ಸ್ವಾತಂತ್ರö್ಯ ದೊರೆತು ೭೫ ವರ್ಷಗಳಾದರೂ ಈಗಲೂ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಪರಿಶಿಷ್ಟ ಜಾತಿ ಪಂಗಡಕ್ಕೆ ಒಳಪಟ್ಟ ಬಡವರ್ಗದ ಹಲವು ಕುಟುಂಬಗಳು ಕೀಮಲೆ ಕಾಡಿನ ಮಧ್ಯೆ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿವೆ.

ಆ ಪೈಕಿ ೧೨ ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ದಿನದೂಡುತ್ತಿವೆ. ಕಾಡಾನೆಗಳ ಹಾವಳಿಯಂತೂ ಹೇಳತೀರದ ಸಮಸ್ಯೆಯಾಗಿ ಉಳಿದುಕೊಂಡಿದೆ.

ಸAಜೆಯಾಗುತ್ತಲೇ ಕಾಡಾನೆಗಳ ಹಿಂಡು ರಸ್ತೆಯನ್ನು ಆವರಿಸಿಕೊಳ್ಳುತ್ತವೆ. ಜೊತೆಗೆ ಸೂಕ್ತವಾದ ಸಂಪರ್ಕ ರಸ್ತೆಯ ಸೌಕರ್ಯವಿಲ್ಲದೆ ಇಲ್ಲಿನ ಹಾಡಿ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಇಲ್ಲಿರುವ ರಸ್ತೆಯಲ್ಲಿ ಮಳೆಗಾಲದ ಸಂದರ್ಭ ಸಂಚಾರ ಅಸಾಧ್ಯದ ಮಾತು. ಆದರೂ ಕೂಡ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತಿತರ ಉದ್ಯೋಗಾರ್ಥಿಗಳು ಅನಿವಾರ್ಯವಾಗಿ ಬೇರೆ ದಾರಿಯಿಲ್ಲದೆ ಈ ರಸ್ತೆಯನ್ನೇ ಅವಲಂಭಿಸಬೇಕಾಗಿದೆ.

ಚುನಾವಣೆ ಸಂದರ್ಭಗಳಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಸ್ಪರ್ಧಾಳುಗಳು ಮತ ಪಡೆದು ಬಳಿಕ ಹಾಡಿ ನಿವಾಸಿಗಳನ್ನು ನಿರ್ಲಕ್ಷಿಸುವುದು ಮಾಮೂಲಿಯಾಗಿದ್ದು, ವಿದ್ಯುತ್ ಸಂಪರ್ಕಕ್ಕೆ ಹಲವಾರು ಬಾರಿ ಚೆಸ್ಕಾಂ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಇನ್ನಾದರೂ ಸಂಬAಧಿಸಿದವರು ಎಚ್ಚೆತ್ತು ಹಾಡಿ ನಿವಾಸಿಗಳ ಕ್ಷೇಮಾಭಿವೃದ್ಧಿಗೆ ಪೂರಕ ಕ್ರಿಯಾಯೋಜನೆ ರೂಪಿಸಲು ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಮುಂಬರುವ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಮಸ್ಯೆ ಪರಿಹಾರಕ್ಕಾಗಿ ಗ್ರಾಮಸ್ಥರನ್ನು ಒಗ್ಗೂಡಿಸಿ ಜಿಲ್ಲಾ ಕೇಂದ್ರದಲ್ಲಿ ಹೋರಾಟವನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಪಂಚಾಯಿತಿ ಸದಸ್ಯ ವಿಲಿನ್ ತಿಳಿಸಿದ್ದಾರೆ.

-ನೌಫಲ್