ಪೊನ್ನಂಪೇಟೆ, ಸೆ. ೫: ಯುವನಾಯಕರ ಮತ್ತು ಉದ್ಯಮಶೀಲರ ವಿಶ್ವವ್ಯಾಪ್ತಿ ಒಕ್ಕೂಟವಾಗಿರುವ ಜೆಸಿಐ ವಿಶ್ವದಲ್ಲೇ ವಿಭಿನ್ನವಾದ ಛಾಪು ಮೂಡಿಸಿದೆ. ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಶತಮಾನದ ಇತಿಹಾಸವಿರುವ ಜೆಸಿಐ ಸಂಸ್ಥೆಯ ಪಾತ್ರ ಮಹತ್ವದ್ದು ಎಂದು ಜೆಸಿಐ ಭಾರತದ ೨೦೨೧ನೇ ಸಾಲಿನ ರಾಷ್ಟಾçಧ್ಯಕ್ಷೆ ರಾಖಿ ಜೈನ್ ಹೇಳಿದ್ದಾರೆ.

ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಆತಿಥ್ಯದಲ್ಲಿ ಪೊನ್ನಂಪೇಟೆ ಸಮೀಪದ ಬೇಗೂರಿನಲ್ಲಿ ನಡೆದ ಜೆಸಿಐ ಭಾರತದ ವಲಯ ೧೪ರ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನ-೨೦೨೧ 'ಮಹೋನ್ನತ'ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಜೇಸಿಸ್ ಅಸ್ತಿತ್ವಕ್ಕೆ ಬಂದ ನಂತರ ಸಾಕಷ್ಟು ಸ್ವಯಂ ಸೇವಾ ಸಂಘಟನೆಗಳು ಹುಟ್ಟಿಕೊಂಡರೂ, ಜೇಸಿಸ್‌ನ ಘನತೆ ಮತ್ತು ಹಿರಿಮೆಗೆ ಯಾವುದೇ ಧಕ್ಕೆಯಾಗಿಲ್ಲ. ಇಡೀ ವಿಶ್ವದಾದ್ಯಂತ ಲಕ್ಷಾಂತರ ನಾಯಕರನ್ನು ಪರಿಪೂರ್ಣನಾಯಕರನ್ನಾಗಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಜೇಸಿಸ್‌ಗೆ ಸಲ್ಲುತ್ತದೆ. ಕೋಫಿ ಅನ್ನಾನ್ ಸೇರಿದಂತೆ ಜಗತ್ತಿನ ಹಲವು ತತ್ವಜ್ಞಾನಿಗಳು ಜೇಸಿಸ್ ಉತ್ಪಾದಿತ ವ್ಯಕ್ತಿತ್ವಗಳು ಎಂದು ಹೇಳಿಕೊಳ್ಳಲು ಅಭಿಮಾನವಿದೆ ಎಂದು ರಾಖಿ ಜೈನ್ ಅವರು ಇದೇ ವೇಳೆ ಸ್ಮರಿಸಿದರು.

ಜೆಸಿಐ ಕೇವಲ ಸೇವಾಕಾರ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಆದ್ಯತೆಯೂ ಅಲ್ಲ. ಸಮಾಜ ಸೇವೆಗಾಗಿ ಪರಿಪೂರ್ಣತೆ ಹೊಂದಿರುವ ಯುವ ನಾಯಕರನ್ನು ಸೃಷ್ಟಿಸುವುದು ಜೇಸಿಸ್‌ನ ಪ್ರಮುಖ ಉದ್ದೇಶವಾಗಿದೆ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ಜೆಸಿಐ ಭಾರತ ವಲಯದ ೧೪ರ ಅಧ್ಯಕ್ಷ ಭರತ್ ಎನ್. ಆಚಾರ್ಯ ಮಾತನಾಡಿ, ಜೆಸಿಐ ಎಂಬುದು ಜೀವನ ಪಾಠ ಕಲಿಸುವ ಮಹಾ ವಿಶ್ವವಿದ್ಯಾಲಯವಿದ್ದಂತೆ. ಜೆಸಿಐ ಎಂಬುದು ಮನುಷ್ಯ ಪ್ರೇಮ ಸಾರುವ ಬಹುದೊಡ್ಡ ಜಾಗತಿಕ ಆಂದೋಲನವೂ ಹೌದು. ಯುವ ಸಮೂಹವನ್ನು ಪ್ರಧಾನ ಲಕ್ಷö್ಯವಾಗಿಸಿ ಕಾರ್ಯನಿರ್ವಹಿಸುತ್ತಿರುವ ಜೆಸಿಐ ಸಂಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಈ ಆಂದೋಲನದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರೆ ಮಾತ್ರ ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಭಾರತದ ವಲಯ ೧೪ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಲಯ ನಿರ್ದೇಶಕ ರಫೀಕ್ ತೂಚಮಕೇರಿ ಮಾತನಾಡಿದರು.

‘ಮಹೋನ್ನತ' ಎಂಬ ವಿಶೇಷ ಸಂಚಿಕೆಯನ್ನು ಈ ಸಮ್ಮೇಳನದಲ್ಲಿ ರಾಖಿ ಜೈನ್ ಅವರು ಅನಾವರಣ ಗೊಳಿಸಿದರು. ಇದೇ ಸಂದರ್ಭದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಲಯಾಡಳಿತ ಮಂಡಳಿ ಪದಾಧಿಕಾರಿಗಳಿಗೆ, ವಲಯದ ವಿವಿಧ ಘಟಕದ ಘಟಕಾಧ್ಯಕ್ಷರಿಗೆ, ಹಿರಿಯ ಜೇಸಿಗಳಿಗೆ ವಿಶೇಷ ಪಿನ್ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಜೇಸಿಸ್ ವಲಯ ೧೪ರ ‘ಎ' ಪ್ರಾಂತ್ಯದ ವಲಯ ಉಪಾಧ್ಯಕ್ಷ ಬಾಬು ಎಂ. ಗೌಡ, ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಿಶೇಷಾಧಿಕಾರಿ ದೇವನಹಳ್ಳಿ ನರಸಿಂಹಮೂರ್ತಿ, ಜೆಸಿಐ ಪೊನ್ನಂಪೇಟೆ ನಿಸರ್ಗದ ಘಟಕಾಧ್ಯಕ್ಷರಾದ ಎಂ.ಎನ್. ವನಿತ್ ಕುಮಾರ್, ಸಮ್ಮೇಳನ ನಿರ್ದೇಶಕ ಬಿ.ಈ. ಕಿರಣ್, ವಲಯಾಡಳಿತ ಮಂಡಳಿ ಕಾರ್ಯದರ್ಶಿ ಗುರುಮೂರ್ತಿ ಉಪಸ್ಥಿತರಿದ್ದರು.

ಪೂರ್ವ ವಲಯಾಧ್ಯಕ್ಷರಾದ ಲಕ್ಷಿö್ಮÃಶ್ ಪಿ. ಶಿರಹಟ್ಟಿ, ವಲಯದ ಹಿರಿಯ ಜೇಸಿಗಳಾದ ಎ.ಎಸ್. ನರೇನ್ ಕಾರ್ಯಪ್ಪ, ಕೆ.ಎಸ್. ಕುಮಾರ್, ಬಿ.ಎನ್. ಪ್ರಕಾಶ್ ಬಿ.ಕೆ. ನವನೀಶ್, ನಾಗೇಶ ಮೈಸೂರು, ಎ.ಆರ್. ಮಮತಾ, ಮಧುಸುದನ್, ವಲಯಾಡಳಿತ ಮಂಡಳಿ ಪದಾಧಿಕಾರಿಗಳು, ವಲಯದ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿ ಗಳು, ಸೇರಿದಂತೆ ನೂರಾರು ಜೇಸಿಸ್ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ರಾಷ್ಟಾçಧ್ಯಕ್ಷೆ ಸೆನೆಟರ್ ರಾಖಿ ಜೈನ್, ವಲಯಾಧ್ಯಕ್ಷ ಭರತ್ ಎನ್. ಆಚಾರ್ಯ ಹಾಗೂ ಸಮ್ಮೇಳನದ ಅಧ್ಯಕ್ಷರಾಗಿದ್ದ ರಫೀಕ್ ತೂಚಮಕೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆರಂಭದಲ್ಲಿ ಕ್ಷೀರ ಮೊಣ್ಣಪ್ಪ ಜೇಸಿವಾಣಿ ವಾಚಿಸಿದರು. ವನಿತ್ ಕುಮಾರ್ ಸ್ವಾಗತಿಸಿದರು. ವಲಯಾಡಳಿತ ಮಂಡಳಿ ಕಾರ್ಯದರ್ಶಿ ಗುರುಮೂರ್ತಿ ವಂದಿಸಿದರು. ಸಮ್ಮೇಳನದಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಹಾಗೂ ನಾಲ್ಕೇರಿ ಕೋಲ್ ಮಂದ್ ಪೊಮ್ಮಕ್ಕ ತಂಡದಿAದ ವಿವಿಧ ಸಾಂಪ್ರದಾಯಿಕ ಜಾನಪದ ಕಲಾ ಪ್ರದರ್ಶನ ಜರುಗಿತು.