ಮಡಿಕೇರಿ, ಸೆ. ೫: ನಗರದ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸ ಲಾಯಿತು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಹೂಗುಚ್ಚದ ಮೂಲಕ ಅಭಿನಂದನೆ ಗಳನ್ನು ಸಲ್ಲಿಸಲಾಯಿತು.

ಶಾಲೆಯ ಕಾರ್ಯದರ್ಶಿ ಜನಾಬ್ ಜಿ.ಹೆಚ್. ಮೊಹಮ್ಮದ್ ಹನೀಫ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಾಂಶುಪಾಲೆ ಜೋಯಿಸಿ ವಿನಯ, ಹಿರಿಯ ಶಿಕ್ಷಕಿ ಅಲ್ಫೋನ್ಸ ಮತ್ತು ದೈಹಿಕ ಶಿಕ್ಷಕ ನಾಗಯ್ಯ ಶೆಟ್ಟಿ ಉಪಸ್ಥಿತರಿದ್ದರು. ಲೀನಾ ಸ್ವಾಗತಿಸಿ, ಶಾಹಿನಾ ನಿರೂಪಿಸಿ, ಶಾಕಿರ ವಂದಿಸಿದರು.