ಕೇರಳದಲ್ಲಿ ನಿಫಾ ವೈರಸ್

ಕೋಳಿಕೋಡ್, ಸೆ. ೫: ಕೇರಳದ ರಾಜ್ಯದ ಕೋಳಿಕೋಡಿನಲ್ಲಿ ‘ನಿಫಾ ವೈರಸ್’ ಸೋಂಕನ್ನು ಹೋಲುವ ಲಕ್ಷಣಗಳನ್ನು ಹೊಂದಿದ್ದ ೧೩ ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಭಾನುವಾರ ತಿಳಿಸಿವೆ. ಸೋಂಕಿಗೊಳಗಾಗಿರುವ ಬಾಲಕ ಛತಮಂಗಳA ಬಳಿಯಿರುವ ಚುಲೂರ್ ಮೂಲದವನಾಗಿದ್ದಾನೆಂದು ತಿಳಿದುಬಂದಿದೆ. ನಿಫಾ ಸೋಂಕಿನ ಶಂಕೆ ವ್ಯಕ್ತವಾಗಿರುವ ಮಾಹಿತಿಯ ನಂತರ ರಾಜ್ಯ ಸರ್ಕಾರ ಶನಿವಾರ ತಡರಾತ್ರಿ ಆರೋಗ್ಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ಬಾಲಕ ಅತೀವ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದ. ಪ್ರಾಥಮಿಕ ಪರೀಕ್ಷೆಗಳಿಂದ ಬಾಲಕನಿಗೆ ನಿಫಾ ವೈರಸ್ ಸೋಂಕು ಇರುವ ಶಂಕೆಗಳು ವ್ಯಕ್ತವಾಗಿವೆ ಎಂದು ತಿಳಿದುಬಂದಿದೆ.

ಅಫ್ಘಾನಿಸ್ತಾನ : ಅಧಿಕಾರಕ್ಕಾಗಿ ಹಕ್ಕಾನಿ, ಬರದರ್ ನಡುವೆ ಪೈಪೋಟಿ

ಕಾಬೂಲ್, ಸೆ. ೫: ಅಫ್ಘಾನಿಸ್ತಾನದಲ್ಲಿ ಯಾರು ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಮುಲ್ಲಾ ಬರದಾರ್ ಜೊತೆ ಸರ್ಕಾರ ಹಂಚಿಕೊಳ್ಳಲು ಹಕ್ಕಾನಿ ನೆಟ್‌ವರ್ಕ್ ಸಿದ್ಧವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹಕ್ಕಾನಿ ಗುಂಪನ್ನು ಪಾಕಿಸ್ತಾನ ಬೆಂಬಲಿಸುತ್ತಿದೆ. ಈ ಗುಂಪು ಅತ್ಯಂತ ಸಾಂಪ್ರಾದಾಯಿಕ ಸುನ್ನಿ ಪಶ್ತೂನ್ ಸರ್ಕಾರ ರಚನೆಯಾಗಬೇಕು ಎಂದು ಹಠ ಹಿಡಿದಿದೆ. ದೋಹಾ ಶಾಂತಿ ಮಾತುಕತೆಯ ವೇಳೆ ತಾಲಿಬಾನ್ ಸಹ ಸಂಸ್ಥಾಪಕ, ರಾಜಕೀಯ ವಿಭಾಗದ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರದರ್ ಕೈಗೊಂಡ ನಿರ್ಣಯದ ವಿರುದ್ಧ ಅದು ವ್ಯವಹರಿಸುತ್ತಿದೆ. ಅಂತರರಾಷ್ಟಿçÃಯ ಸಮುದಾಯದ ಮಾನ್ಯತೆ ಪಡೆಯಬೇಕೆಂದರೆ, ಅಲ್ಪಸಂಖ್ಯಾತರು ಸರ್ಕಾರದ ಭಾಗವಾಗಬೇಕೆಂದು ಬರದರ್ ಬಯಸಿದ್ದಾರೆ. ಆದರೆ ಹಕ್ಕಾನಿ ಮುಖ್ಯಸ್ಥ, ತಾಲಿಬಾನ್ ಉಪನಾಯಕ ಸಿರಾಜುದ್ದೀನ್ ಹಾಗೂ ಅವರ ಬಂಡಕೋರ ಮಿತ್ರರು ಮಾತ್ರ ಯಾರೊಂದಿಗೂ ಸರ್ಕಾರ ಹಂಚಿಕೊಳ್ಳಲು ಬಯಸುತ್ತಿಲ್ಲ. ನೂರಕ್ಕೆ ನೂರರಷ್ಟು ತಾಲಿಬಾನ್ ಸರ್ಕಾರ ರಚನೆಯಾಗಬೇಕು ಎಂದು ಹೇಳುತ್ತಿದ್ದಾರೆ. ತಾವು ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದೇವೆ. ಅಫ್ಘಾನ್ ರಾಜಧಾನಿಯ ಮೇಲೆ ತಮ್ಮ ಪ್ರಾಬಲ್ಯವಿದೆ ಹಾಗಾಗಿ ಉಳಿದರವರು ಹಿಂದೆ ಸರಿಯಬೇಕು ಎಂದು ಬರದರ್ ಕೋರಿದ್ದಾರೆ. ಶನಿವಾರವೇ ಬರದರ್ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಬೇಕಿತ್ತು ಆದರೆ, ಈ ಸಂಬAಧ ಮಾತುಕತೆ ಇನ್ನೂ ಪೂರ್ಣಗೊಳ್ಳದ ಕಾರಣ ಮುಂದಿನ ವಾರ ಸರ್ಕಾರ ಸ್ಥಾಪಿಸುವುದಾಗಿ ತಾಲಿಬಾನ್ ಸ್ಪಷ್ಟಪಡಿಸಿದೆ.

ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೋಂಕು

ಬೆAಗಳೂರು, ಸೆ. ೫: ಹೊರಮಾವು ನರ್ಸಿಂಗ್ ಕಾಲೇಜು ಬಳಿಕ ನಗರದ ದಾಸರಹಳ್ಳಿ ನರ್ಸಿಂಗ್ ಕಾಲೇಜಿನಲ್ಲೂ ಕ್ಲಸ್ಟರ್ ಮಾದರಿಯ ಮತ್ತೊಂದು ಕೇಸ್ ಶನಿವಾರ ಪತ್ತೆಯಾಗಿದೆ. ದಾಸರಹಳ್ಳಿಯ ಧನ್ವಂತರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬರಿಗೆ ಆಗಸ್ಟ್ ೩೦ ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಕಾಲೇಜಿನಲ್ಲಿ ಒಟ್ಟು ೪೫೦ ವಿದ್ಯಾರ್ಥಿಗಳಿದ್ದು, ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ಸಿಬ್ಬಂದಿಗಳೂ ಸೇರಿ ಕಾಲೇಜಿನಲ್ಲಿ ಒಟ್ಟು ೪೭೦ ಮಂದಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ೧೪ ಮಂದಿ ವಿದ್ಯಾರ್ಥಿನಿಯರು ಹಾಗೂ ೭ ಮಂದಿ ವಿದ್ಯಾರ್ಥಿಗಳು, ಮೂವರು ಶಿಕ್ಷಕರಲ್ಲಿ ಕೋವಿಡ್ ಸೋಂಕು ತಗಲುರುವುದು ದೃಢಪಟ್ಟಿದೆ. ಈ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಕಾಲೇಜು ಹಾಸ್ಟೆಲ್‌ನ ವಿದ್ಯಾರ್ಥಿಗಳ ೧೮ ಹಾಗೂ ವಿದ್ಯಾರ್ಥಿನಿಯರ ೧೧ ಕೊಠಡಿಗಳನ್ನು ಕಂಟೈನ್ಮೆAಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ. ಸೋಂಕಿಗೆ ಅಂತರ್ ರಾಜ್ಯ ಸಂಪರ್ಕ ಇರುವ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ಸ್ಥಳೀಯ ಮಾರುಕಟ್ಟೆ ಹಾಗೂ ಅಂಗಡಿಗಳಿಗೆ ತೆರಳಿದ್ದು, ಈ ವೇಳೆ ಸೋಂಕು ತಗುಲಿರುವ ಸಾಧ್ಯತೆಗಳಿವೆ. ಕಾಲೇಜಿನ ಶೇ.೯೦ರಷ್ಟು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಮೊದಲ ಡೋಸ್ ಲಸಿಕೆ ಹಾಗೂ ಶೇ.೧೦ರಷ್ಟು ಸಿಬ್ಬಂದಿಗಳು ಎರಡು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆAದು ತಿಳಿಸಿದ್ದಾರೆ.

ರೈತ ವಿದ್ಯಾನಿಧಿ ಯೋಜನೆಗೆ ಚಾಲನೆ

ಬೆಂಗಳೂರು, ಸೆ. ೫: ತಾವು ಮುಖ್ಯಮಂತ್ರಿಯಾದ ಕೂಡಲೇ ಬಸವರಾಜ ಬೊಮ್ಮಾಯಿಯವರು ಘೋಷಿಸಿದ್ದ ಮಹಾತ್ವಾಕಾಂಕ್ಷಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾನುವಾರ ಚಾಲನೆ ನೀಡಲಾಗಿದೆ. ರೈತ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳಿಗೆ ರಾಜ್ಯ ಸರ್ಕಾರ ಶಿಷ್ಯ ವೇತನ ನೀಡಲಿದ್ದು, ಇಂದು ಸಾಂಕೇತಿಕವಾಗಿ ಕೆಲವು ರೈತರ ಮಕ್ಕಳಿಗೆ ಚೆಕ್ ವಿತರಣೆ ಮಾಡಲಾಗಿದೆ. ಯೋಜನೆಗೆ ಬಟನ್ ಒತ್ತುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ವಿದ್ಯಾರ್ಥಿಗಳ ಖಾತೆಗೆ ವಿದ್ಯಾನಿಧಿ ಹಣವನ್ನು ಸಾಂಕೇತಿಕವಾಗಿ ವರ್ಗಾವಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಚಿವರಾದ ಮುನಿರತ್ನ, ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್, ಸಂಸದರು, ಶಾಸಕರು ಭಾಗಿಯಾಗಿದ್ದರು. ಈ ಯೋಜನೆಯಿಂದ ಸುಮಾರು ೧೭ ಲಕ್ಷ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಪಿಯುಸಿ, ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರೂ. ೨,೫೦೦ ಮತ್ತು ವಿದ್ಯಾರ್ಥಿನಿಯರಿಗೆ ರೂ. ೩ ಸಾವಿರ ಸರ್ಕಾರ ನೀಡಲಿದೆ. ಇನ್ನು ಪದವೀಧರ ವಿದ್ಯಾರ್ಥಿಗಳಿಗೆ ರೂ. ೫ ಸಾವಿರ, ವಿದ್ಯಾರ್ಥಿನಿಗಳಿಗೆ ರೂ. ೫,೫೦೦ ಸರ್ಕಾರ ನೀಡಲಿದೆ. ಎಲ್.ಎಲ್.ಬಿ., ಪ್ಯಾರಾಮೆಡಿಕಲ್, ಬಿ ಫಾರ್ಮ್, ನರ್ಸಿಂಗ್, ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ರೂ. ೭,೫೦೦ ನೀಡಿದರೆ, ವಿದ್ಯಾರ್ಥಿನಿಯರಿಗೆ ರೂ. ೮ ಸಾವಿರ ರಾಜ್ಯ ಸರ್ಕಾರ ನೀಡುತ್ತದೆ. ಎಂಬಿಬಿಎಸ್, ಬಿಇ, ಬಿ. ಟೆಕ್ ಸ್ನಾತಕೋತ್ತರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೂ. ೧೦ ಸಾವಿರ, ವಿದ್ಯಾರ್ಥಿನಿಯರಿಗೆ ರೂ. ೧೧,೦೦೦ ಶಿಷ್ಯವೇತನ ನೀಡಲಾಗುವುದು. ನೋಂದಣಿಯಾದ ಶಿಕ್ಷಣ ಸಂಸ್ಥೆಗಳಲ್ಲಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆವರಿಗೆ ರಾಜ್ಯ ಸರ್ಕಾರ ಶಿಷ್ಯವೇತನ ನೀಡುತ್ತದೆ.

ಕಡಿಮೆ ತೀವ್ರತೆಯ ಭೂಕಂಪನ

ಬೆAಗಳೂರು, ಸೆ. ೫: ವಿಜಯಪುರ, ಬಾಗಲಕೋಟೆಯಲ್ಲಿ ತಾ. ೪ ರ ಮಧ್ಯರಾತ್ರಿ ಕಡಿಮೆ ತೀವ್ರತೆಯ ಭೂಕಂಪನ ವರದಿಯಾಗಿದೆ. ಕರ್ನಾಟಕ ರಾಜ್ಯ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು ಕೊಲ್ಹಾಪುರ ಜಿಲ್ಲೆಯಲ್ಲಿ ೩.೯ ತೀವ್ರತೆ ದಾಖಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕಡಿಮೆ ತೀವ್ರತೆಯ ಕಂಪನ ಅನುಭವಕ್ಕೆ ಬಂದಿದೆ. ವಿಜಯಪುರ ನಗರ, ಬಸವನ ಬಾಗೇವಾಡಿ, ಟಿಕೊಟಾ, ಇಂಡಿ, ಸಿಂಧಗಿಯಲ್ಲಿನ ಜನರು ರಾತ್ರಿ ೧೧:೩೦ಕ್ಕೆ ಕಂಪನವಾಗುತ್ತಿದ್ದAತೆಯೇ ಮನೆಯಿಂದ ಹೊರಬರಲಾರಂಭಿಸಿದರು. ಆದರೆ ಯಾವುದೇ ಆಸ್ತಿ ಹಾನಿಯಾದ ಬಗ್ಗೆ ಮಾಹಿತಿ ಬಂದಿಲ್ಲ.

ಅAಗರಕ್ಷಕ ಸಾವಿನ ಪ್ರಕರಣ:ಸುವೇಂದುಗೆ ಸಮನ್ಸ್

ಕೊಲ್ಕತ್ತಾ, ಸೆ. ೫: ಅಂಗರಕ್ಷಕ ಸಾವಿನ ಪ್ರಕರಣದ ತನಿಖೆಗೆ ಸಂಬAಧಿಸಿದAತೆ ಪಶ್ಚಿಮ ಬಂಗಾಳ ವಿಧಾನಸಭೆ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿಗೆ ಸಿಐಡಿ ಸಮನ್ಸ್ ಜಾರಿ ಮಾಡಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಕೊಲ್ಕತ್ತಾದಲ್ಲಿನ ಭವಾನಿ ಭವನ್‌ನಲ್ಲಿರುವ ಸಿಐಡಿ ಕೇಂದ್ರ ಕಚೇರಿಯಲ್ಲಿ ವಿಚಾರಣಾಧಿಕಾರಿಗಳ ಮುಂದೆ ಹಾಜರಾಗುವಂತೆ ನಂದಿಗ್ರಾಮದ ಭಾರತೀಯ ಜನತಾ ಪಾರ್ಟಿ ಶಾಸಕರಾಗಿರುವ ಸುವೇಂದುಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸುವೇಂದು ಅಧಿಕಾರಿ ಅಂಗರಕ್ಷಕ ಸುಬಾಭ್ರತಾ ಚಕ್ರವರ್ತಿ ತನ್ನ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದ. ಈ ಪ್ರಕರಣದ ತನಿಖೆಗಾಗಿ ತಂಡವೊAದನ್ನು ಸಿಐಡಿ ರಚಿಸಿತ್ತು. ತನ್ನ ಪತಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಚಕ್ರವರ್ತಿ ಪತ್ನಿ ಕಾಂಟೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ಭಾಗವಾಗಿ ಈವರೆಗೆ ೧೧ ಪೊಲೀಸರು ಸೇರಿದಂತೆ ೧೫ ಮಂದಿಯನ್ನು ಸಿಐಡಿ ವಿಚಾರಣೆ ನಡೆಸಿದೆ. ಈ ಹಿಂದೆ ಪೂರ್ವ ಮಿಡ್ನಾಪುರದಲ್ಲಿರುವ ಅಧಿಕಾರಿಯ ನಿವಾಸ ಶಾಂತಿ ಕುಂಜ್‌ಗೂ ಸಿಐಡಿ ತಂಡ ಭೇಟಿ ನೀಡಿತ್ತು. ಪಶ್ಚಿಮ ಬಂಗಾಳ ರಾಜ್ಯ ಸಶಸ್ತç ಪೊಲೀಸ್ ಸಿಬ್ಬಂದಿಯಾಗಿದ್ದ ಚಕ್ರವರ್ತಿ, ಅಧಿಕಾರಿ ಟಿಎಂಸಿಯ ಸಂಸದರಾಗಿದ್ದ ಅವಧಿಯಲ್ಲಿ ಭದ್ರತಾ ತಂಡದಲ್ಲಿದ್ದರು. ೨೦೧೫ರಲ್ಲಿ ಅಧಿಕಾರಿ ಸಚಿವರಾದಾಗಲೂ ಭದ್ರತಾ ಸಿಬ್ಬಂದಿಯಾಗಿ ಮುಂದುವರೆದಿದ್ದರು.