ಮಡಿಕೇರಿ, ಸೆ. ೫: ಅದೊಂದು ಬಡ ಕುಟುಂಬ, ಹುಟ್ಟಿನಿಂದ ಕಷ್ಟಗಳನ್ನೇ ನೋಡಿಕೊಂಡು ಹೇಗೋ ಜೀವನ ನಡೆಸುತ್ತಿದ್ದರು. ಮನೆಮಂದಿಗೆ ಕಳೆದ ೫೦ ವರ್ಷಗಳಿಂದ ಆಸರೆಯಾಗಿದ್ದು ಆ ಪುಟ್ಟ ಮನೆ. ಕಷ್ಟದ ನಡುವೆ ನೆಮ್ಮದಿಯ ನಿದ್ದೆ ಮಾಡುತ್ತಿದ್ದ ಆ ಮನೆ ಅವರ ಎದುರೇ ನಾಶವಾಯಿತು. ಪ್ರಾಕೃತಿಕ ವಿಕೋಪದಿಂದ ಮನೆ ನಾಶವಾಗಿಲ್ಲ. ಕೆಲವರ ಷಡ್ಯಂತ್ರದಿAದ ಮನೆ ಧ್ವಂಸವಾಯಿತು. ಇದೀಗ ಆ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದೆ.

ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪ ಸಮೀಪದ ದೇವರಪುರದ ಕನ್ನಂಬಾಡಿಯಲ್ಲಿ ಪಂಜರಿಯರವರ ಕುಂಜಿ ಮತ್ತು ಅವರ ಕುಟುಂಬದವರು ಕಳೆದ ಸುಮಾರು ೫೦ ವರ್ಷಗಳಿಂದ ಮನೆ ನಿರ್ಮಿಸಿ ಕೊಂಡು ವಾಸಿಸುತ್ತಿದ್ದರು. ಮೊದಲು ಗುಡಿಸಲಾಗಿದ್ದ ಮನೆಗೆ ಕೆಲ ವರ್ಷಗಳ ಹಿಂದೆ ಶೀಟ್ ಅಳವಡಿಸ ಲಾಗಿತ್ತು. ಆಗಸ್ಟ್ ೨೦ ರಂದು ಏಕಾಏಕಿ ಸುಶ್ಮಾ ಎಂಬವರು ಕುಂಜಿ ಮನೆಗೆ ಬಂದು ನ್ಯಾಯಾಲಯದ ನೋಟೀಸ್ ತೋರಿಸಿ ಮನೆಯಲ್ಲಿದ್ದ ವಸ್ತುಗಳನ್ನು ಹೊರಹಾಕಿ ಮನೆಯನ್ನು ನಾಶಪಡಿಸಿದರು ಎಂದು ಕುಂಜಿಯ ಪರಿವಾರದವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಯಾವುದೇ ಮುನ್ಸೂಚನೆ, ಗಡುವು ನೀಡದೆ ಏಕಾಏಕಿ ಬಂದು ಈ ರೀತಿ ವರ್ತಿಸಿ ಮನೆಕೆಡವಿದರೂ ಕೂಡ ಕುಂಜಿ ಕುಟುಂಬ ಏನೂ ಮಾಡ ಲಾಗದೆ ಅಸಹಾಯಕರಾಗಿ ನಿಂತಿತ್ತು.

ಏನಿದು ಪ್ರಕರಣ.?

ಕಳೆದ ೫೦ ವರ್ಷಗಳ ಹಿಂದೆ ಆಂಗ್ಲೋ ಇಂಡಿಯನ್ ಕುಟುಂಬವೊAದು ಕುಂಜಿಯ ಅಜ್ಜನಿಗೆ ೨೧೫/೮ ಸರ್ವೆ ನಂಬರ್‌ನ ಜಾಗವನ್ನು ಕೊಡುಗೆಯಾಗಿ ನೀಡಿತ್ತು. ಅಂದಿನಿAದ ಇಂದಿನ ತನಕ ಕುಂಜಿಯ ಪರಿವಾರ ಅಲ್ಲಿಯೇ ನೆಲೆ ಕಂಡುಕೊAಡಿತ್ತು. ಆದರೆ, ಅವರಿದ್ದ ಮನೆ ಈಗ ನೆಲಸಮವಾಗಿದೆಯಲ್ಲದೆ, ಅವರಿಗೆ ಈಗ ನೆಲೆಯಿಲ್ಲದಾಗಿದೆ. ದಿಢೀರ್ ಆಗಿ ದೇವರಪುರ ಗ್ರಾಮದ ಮಹಿಳೆ ಯೊಬ್ಬರು ಕೋರ್ಟ್ ನೋಟೀಸ್ ಎಂದು ದಾಖಲೆ ತೋರಿಸಿ ಮನೆಯನ್ನು ಏಕಾಏಕಿ ನಾಶಪಡಿಸಿದ್ದಾರೆ.