ಶನಿವಾರಸಂತೆ, ಸೆ. ೨: ಸಮೀಪದ ಕೊಡ್ಲಿಪೇಟೆಯ ಕೆ.ಪಿ.ಸಿ.ಎ. ಪ್ರಧಾನ ಕಚೇರಿಯಲ್ಲಿ ನಡೆದ ಕೊಡಗು ಪ್ರೊಟೆಸ್ಟಂಟ್ ಚರ್ಚಸ್ ಅಸೋಸಿಯೇಷನ್ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಪಾಸ್ಟರ್ ಪಿ.ಸಿ. ಫ್ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು.

ಪಾಸ್ಟರ್ ಕುಮಾರ್ ಮಹಾದೇವ್ ಅವರು ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ವಿಸರ್ಜಿಸಿದ ನಂತರ ಚುನಾವಣಾಧಿಕಾರಿ ಸ್ಟೆನ್ಸನ್ ಅವರು ಪ್ರತಿಸ್ಪರ್ಧಿಗಳಿಲ್ಲದ ಕಾರಣ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿದರು.

ಸಂಘದ ಉಪಾಧ್ಯಕ್ಷರಾಗಿ ಜಾನ್, ಕಾರ್ಯದರ್ಶಿಯಾಗಿ ಅಬ್ರಹಾಂ ಕೊಶಿ, ಜಂಟಿ ಕಾರ್ಯದರ್ಶಿಯಾಗಿ ಸಿದ್ದು, ಖಜಾಂಚಿಯಾಗಿ ಸುನಿಲ್ ಬೆನೆಡಿಕ್ಸ್, ಸದಸ್ಯರಾಗಿ ರವಿ, ಇಮ್ಯಾನುವೆಲ್, ಶ್ರೀಧರನ್, ದೀಪಕ್ ಆಯ್ಕೆಯಾಗಿದ್ದಾರೆ.