ಮಡಿಕೇರಿ, ಸೆ. ೧: ಕೊಡವರು ತಮ್ಮ ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯಲು ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹೊರ ವಲಯದ ಕ್ಯಾಪಿಟಲ್ ವಿಲೇಜ್ನಲ್ಲಿ ಸಿಎನ್ಸಿ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೧ನೇ ವರ್ಷದ ಸಾರ್ವತ್ರಿಕ ಕೈಲ್ಪೋಳ್ದ್ ಹಬ್ಬಾಚರಣೆಗೆ ಬಂದೂಕು ಪೂಜೆ ಸಲ್ಲಿಸಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿ, ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಾಚಪ್ಪ, ಸಿಎನ್ಸಿ ಸಂಘಟನೆ ದೇಶದ ಸಂವಿಧಾನಕ್ಕೆ ಬದ್ದವಾಗಿ ಕೊಡವರ ಹಕ್ಕುಗಳಿಗಾಗಿ ನಿರಂತರ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದೆ.
ಕೊಡವ ಕುಲಶಾಸ್ತç ಅಧ್ಯಯನ ಮತ್ತು ಎಸ್.ಟಿ. ಸ್ಥಾನಮಾನ ಹಾಗೂ ನ್ಯಾಯಯುತ ಸಂವಿಧಾನದ ಹಕ್ಕನ್ನು ತಪ್ಪಿಸಲು ಕೆಲವರು ಪಿತೂರಿ ಮಾಡುತ್ತಿದ್ದು, ಅಂತವರ ಬಗ್ಗೆ ಕೊಡವ ಸಮುದಾಯ ಪಕ್ಷ ಭೇದ ಮರೆತು ಜಾಗೃತರಾಗಬೇಕು ಎಂದು ನಾಚಪ್ಪ ಕರೆ ನೀಡಿದರು.
ಕೈಲ್ಪೊಳ್ದ್ ಹಬ್ಬಾಚರಣೆ ಸಿಎನ್ಸಿ ಪಾಲಿಗೆ ಸಂಭ್ರಮವಲ್ಲ, ಅದೊಂದು ಯುದ್ಧ ಎಂದು ಬಣ್ಣಿಸಿದ ನಾಚಪ್ಪ, ಜನಾಂಗದ ಹೆಗ್ಗುರುತುಗಳನ್ನು ಪ್ರತಿಪಾದಿಸುವ ಮೂಲಕ ಇಡೀ ದೇಶಕ್ಕೆ ಸಂದೇಶ ನೀಡಬೇಕಿದೆ. ಆ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸಂಸ್ಕೃತಿ ಪರಂಪರೆಗಳ ಆಚರಣೆಗಳನ್ನು ನಡೆಸುತ್ತಿದೆ ಎಂದು ಪ್ರತಿಪಾದಿಸಿದರು.
ನಿರಂತರ ಹೋರಾಟದಿಂದ ಮಾತ್ರವೇ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಪ್ರತಿಪಾದಿಸಿದ ನಾಚಪ್ಪ, ಕೊಡವರ ಪಾಲಿಗೆ ಬಂದೂಕು ಒಂದು ಪೂಜ್ಯ ಭಾವನೆಯ ನಂಟನ್ನು ಹೊಂದಿದೆ ಎಂದರು. ಇದೇ ಸಂದರ್ಭ ಕೊಡವರ ಹಕ್ಕುಗಳು ಮತ್ತು ಬೇಡಿಕೆ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಬಂದೂಕು ಸಹಿತ ಮಂದ್ನಲ್ಲಿ ಮೆರವಣಿಗೆ ನಡೆಯಿತು. ಬಳಿಕ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಗುರಿ ಪ್ರದರ್ಶನ ನಡೆಯಿತು. ಇದೇ ಸಂದರ್ಭ ಗುರು ಕಾರೋಣರಿಗೆ ಮೀದಿ ಇಟ್ಟು ಪ್ರಾರ್ಥಿಸಲಾಯಿತು. ಪರೆಯ ಕಳಿ(ಯುದ್ಧಕಲೆ), ಶಕ್ತಿಕೋಲು ಸ್ಪರ್ಧೆ ಹಾಗೂ ಕೊಡವ ಸಾಂಪ್ರದಾಯಿಕ ವಾಲಗಕ್ಕೆ ಪುರುಷರು ಮತ್ತು ಮಹಿಳೆಯರು ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಪುಲ್ಲೇರ ಸ್ವಾತಿ, ಅಜ್ಜೇಟಿರ ಕವಿತ, ನಂದಿನೆರವAಡ ದಿಶಾ, ಕೊಟ್ಟೇಂಗಡ ಗಿರೀಶ್, ಮೀದೇರಿರ ತಿಮ್ಮಯ್ಯ, ಪುದಿಯೊಕ್ಕಡ ಕಾಶಿ, ಪುದಿಯೊಕ್ಕಡ ಬೆಲ್ಲು ಸೋಮಯ್ಯ, ಕಾಕೇರ ಉತ್ತಯ್ಯ, ಪುಲ್ಲೇರ ಕಾಳಪ್ಪ, ನಂದಿನೆರವAಡ ಪಾರ್ವತಿ, ಚಂಬAಡ ಜನತ್, ಐಲಪಂಡ ಮಿಟ್ಟು ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.