ಮಡಿಕೇರಿ, ಸೆ.೨: ಹನಗೋಡು ಪೊನ್ನಂಪೇಟೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು ನಿರ್ವಹಿಸ ಬೇಕಿರುವುದರಿಂದ ಕ.ವಿ.ಪ್ರ.ನಿ.ನಿ ಅವರ ಕೋರಿಕೆಯಂತೆ ಸೆಪ್ಟೆಂಬರ್, ೦೪ ರಂದು ಬೆಳಗ್ಗೆ ೬ ರಿಂದ ೮ ಗಂಟೆಯವರೆಗೆ ೬೬/೧೧ ಕೆ.ವಿ ಪೊನ್ನಂಪೇಟೆ, ೬೬/೧೧ ಕೆ.ವಿ ವೀರಾಜಪೇಟೆ ೩೩/೧೧ ಕೆ.ವಿ, ಶ್ರೀಮಂಗಲ ೩೩/೧೧ ಕೆ.ವಿ, ಸಿದ್ದಾಪುರ ೩೩/೧೧ ಕೆ.ವಿ, ಮೂರ್ನಾಡು ಹಾಗೂ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ.

ಆದ್ದರಿಂದ ಪೊನ್ನಂಪೇಟೆ, ಗೋಣಿಕೊಪ್ಪಲು, ನಲ್ಲೂರು, ಹುದಿಕೇರಿ, ತಿತಿಮತಿ, ಆತೂರು, ಪಾಲಿಬೆಟ್ಟ, ಶ್ರೀಮಂಗಲ, ಬಾಳೆಲೆ, ಕಾನೂರು, ಬಿರುನಾಣಿ, ಕುಟ್ಟ, ವೀರಾಜಪೇಟೆ, ಬಿ.ಶೆಟ್ಟಿಗೇರಿ, ಬೇತ್ರಿ ಕಡಂಗಮರೂರು, ಕಾಕೋಟುಪರಂಬು, ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಮೂರ್ನಾಡು, ಮರಗೋಡು, ನಾಪೋಕ್ಲು, ಕಕ್ಕಬ್ಬೆ, ಅರೆಕಾಡು, ಅಯ್ಯಂಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.

ಹಾಗೆಯೇ ೬೬/೧೧ ಕೆ.ವಿ ಪೊನ್ನಂಪೇಟೆ ವಿದ್ಯುತ್ ವಿತರಣಾ ಕೇಂದ್ರದಿAದ ಶ್ರೀಮಂಗಲ ೩೩/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸರಬರಾಜಾಗುತ್ತಿರುವ ೧*೮ ಎಂವಿಎ ಪರಿವರ್ತಕರನ್ನು ಉನ್ನತೀಕರಿಸಿ ೧*೧೨.೫ ಎಂವಿಎ ಪರಿವರ್ತಕ ಅಳವಡಿಸಲು ಕೆಪಿಟಿಸಿ ರವರು ದಿನದ ಮಾರ್ಗ ಮುಕ್ತತೆ ನೀಡುವಂತೆ ಕೋರಿದ್ದು, ಸದರಿ ಕಾಮಗಾರಿಯನ್ನು ನಿರ್ವಹಿಸಲು ತಾ. ೪ ರಂದು ಬೆಳಗ್ಗೆ ೬ ರಿಂದ ೮ ಗಂಟೆಯವರೆಗೆ ವಿದ್ಯುತ್ ಸ್ಥಗಿತಗೊಳ್ಳುವುದು.

ತಾ. ೫ ಮತ್ತು ೦೬ ರಂದು ಪರ್ಯಾಯವಾಗಿ ಪ್ರತಿ ೨ ಗಂಟೆಗಳಿಗೆ ೩೩/೧೧ ಕೆ.ವಿ ಶ್ರೀಮಂಗಲ ವಿದ್ಯುತ್ ಉಪ ಕೇಂದ್ರದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗ ಲಿರುವುದರಿಂದ ಕಾನೂರು, ಬಿರುನಾಣಿ, ಕುಟ್ಟ, ಶ್ರೀಮಂಗಲ, ಕೂತ್ತೂರು, ತೆರಾಲು ಪರಕಟಕೇರಿ, ಮುಗುಟಗೇರಿ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು. ಪರ್ಯಾಯವಾಗಿ ೨ ಗಂಟೆಗಳಿಗೊಮ್ಮೆ ವಿದ್ಯುತ್ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ಸೆಸ್ಕ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರು ಕೋರಿದ್ದಾರೆ.