ಕೂಡಿಗೆ, ಆ. ೩೧: ಹಾರಂಗಿಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಭುವನಗಿರಿ ಸಮೀಪದ ಸೋಮವಾರಪೇಟೆ ಏತ ನೀರಾವರಿ ಘಟಕ ಹತ್ತಿರವಿರುವ ಹಾರಂಗಿ ನೀರಾವರಿ ಇಲಾಖೆಗೆ ಸೇರಿದ ವಸತಿ ಗೃಹಗಳ ದುರಸ್ತಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಏತ ನೀರಾವರಿ ಘಟಕದ ಹತ್ತಿರದ ನೀರಾವರಿ ಇಲಾಖೆಗೆ ಸೇರಿದ ೫ ವಸತಿ ಗೃಹಗಳು ಮಳೆಯಿಂದಾಗಿ ಮೇಲ್ಚಾವಣಿ ಹಾಳಾಗಿದ್ದು ನೀರು ಗೋಡೆಯ ಮೇಲೆ ಬೀಳುತ್ತಿರುವುದರಿಂದ ಗೋಡೆಯು ಶಿಥಿಲಗೊಂಡಿದ್ದು, ಬೀಳುವ ಹಂತವನ್ನು ತಲುಪಿವೆ.
ದುರಸ್ತಿಪಡಿಸಿದರೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ವಾಸಿಸಲು ಅನುಕೂಲವಾಗುವುದು. ಈಗಾಗಲೇ ನಾಲ್ಕು ವಸತಿ ಗೃಹಗಳು ತೀರ ಹಾಳಾಗಿರುವ ಹಿನ್ನೆಲೆ ಇಲಾಖೆಯ ವತಿಯಿಂದ ದುರಸ್ತಿಪಡಿಸಬೇಕಿದೆ.