ಮಡಿಕೇರಿ, ಆ. ೩೧: ನವಜಾತ ಶಿಶುವಿನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು, ಚಿಕಿತ್ಸೆಗೆ ನೆರವು ನೀಡಲು ಪೋಷಕರು ಕೋರಿದ್ದಾರೆ.

ಪೆರಾಜೆಯ ಸುಗಂಧ ಕುಮಾರ್ ಹಾಗೂ ಸುಂದರಿ ದಂಪತಿಗೆ ತಾ. ೧೮ ರಂದು ಗಂಡು ಮಗು ಜನಿಸಿದೆ. ಹುಟ್ಟಿದ ಮಗು ‘ಇಕೋನಿಯಂ’ ರೋಗದಿಂದ ಬಳಲುತ್ತಿದ್ದು, ಮಗು ಐ.ಸಿ.ಯು.ವಿನಲ್ಲಿದೆ. ಚಿಕಿತ್ಸೆಗೆ ರೂ. ೫ ರಿಂದ ೬ ಲಕ್ಷ ವೆಚ್ಚವಾಗುತ್ತದೆ. ಈಗಾಗಲೇ ಆಯುಷ್ಮಾನ್ ಮೂಲಕ ಈ ಹಣ ಸಂದಾಯವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ, ರಕ್ತ ಸೇರಿದಂತೆ ಇನ್ನಿತರ ಪರೀಕ್ಷೆಗಳಿಗೆ ರೂ. ೧೦ ಸಾವಿರ ವೆಚ್ಚ ತಗುಲುತ್ತದೆ. ಮಗುವಿನ ತಂದೆ ಕೂಲಿ ಕಾರ್ಮಿಕನಾಗಿದ್ದು, ಕೊರೊನಾದಿಂದ ಕೆಲಸ ಇಲ್ಲದೆ ಆರ್ಥಿಕವಾಗಿ ಕಂಗೆಟ್ಟಿದ್ದಾರೆ. ಕುಟುಂಬ ಕೂಡ ಆರ್ಥಿಕವಾಗಿ ಹಿಂದುಳಿದಿದೆ. ಮಗುವಿನ ತಾಯಿಗೆ ವಯಸ್ಸಾಗಿರುವ ಹಿನ್ನೆಲೆ ಮುಂದೆ ಮಕ್ಕಳಾಗುವುದು ಕಷ್ಟ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಜನಿಸಿದ ಮಗುವನ್ನು ಉಳಿಸಿಕೊಳ್ಳಲು ಪೋಷಕರು ಪರದಾಡುತ್ತಿದ್ದು, ನೆರವು ನೀಡಲು ಬಯಸಿದ್ದಲ್ಲಿ ಮೊಬೈಲ್ ಸಂಖ್ಯೆ ೯೫೩೫೪೯೧೨೪೧ಗೆ ಸಂಪರ್ಕಿಸಬಹುದು.