ಮಡಿಕೇರಿ, ಆ. ೩೧: ನಿತ್ಯವು ಇಡೀ ಮಡಿಕೇರಿ ನಗರದಲ್ಲಿ ಸಂಚರಿಸಿ ವಾಹನದಲ್ಲಿ ಕಸವನ್ನು ಹೊತ್ತೊಯ್ಯುವ ನಗರಸಭಾ ಸಿಬ್ಬಂದಿಯೊAದಿಗೆ ಮಡಿಕೇರಿ ನಗರದ ವರ್ತಕರೊಬ್ಬರು ಅನುಚಿತವಾಗಿ ವರ್ತಿಸಿದ ಸನ್ನಿವೇಶದ ವೀಡಿಯೋ ವೈರಲ್ ಆಗಿದೆ.
ಮಡಿಕೇರಿ ನಗರದ ಸಿಟಿಕೋಲ್ಡ್ ಸ್ಟೋರೇಜ್‌ನ ವ್ಯವಸ್ಥಾಪನೆ ನಡೆಸುತ್ತಿರುವ ವ್ಯಕ್ತಿಯೊಬ್ಬರು ಮಹಿಳಾ ಪೌರ ಕಾರ್ಮಿಕರು ನೀಡಿದ ಸಲಹೆಯನ್ನು ಧಿಕ್ಕರಿಸಿ ರಸ್ತೆ ಮಧ್ಯೆ ಹಾಕಿದ್ದ ಕಸವನ್ನು ಒದ್ದು ಅನುಚಿತವಾಗಿ ವರ್ತಿಸಿದ ಚಿತ್ರಣ ವೀಡಿಯೋದಲ್ಲಿದೆ. ವಾಹನದಲ್ಲಿ ಬಂದು ಕಸವನ್ನು ಒಯ್ದ ಮಹಿಳಾ ಸಿಬ್ಬಂದಿಗಳು ಅದನ್ನು ಸರಿಯಾಗಿ ವಿಂಗಡಣೆ ಮಾಡದ ಹಿನ್ನೆಲೆಯಲ್ಲಿ ವಾಪಸ್ ಕೆಳಗಿಳಿಸಿದರು. ಈ ಬಗ್ಗೆ ಪೌರಕಾರ್ಮಿಕರು ಸಲಹೆ ನೀಡಿದಾಗ ಮಾತಿನ ಚಕಮಕಿ ನಡೆದು ವರ್ತಕ ಕಸದ ಚೀಲವನ್ನು ಕಾಲಿನಿಂದ ಒದ್ದು ಜಗಳಕ್ಕಿಳಿದ ಸನ್ನಿವೇಶ ಕಂಡು ಬಂದಿದೆ. ‘ಕಸವನ್ನು ವಿಂಗಡಿಸಿ ಸಮರ್ಪಕವಾಗಿ ಹಾಕಿ; ಹೀಗೆಲ್ಲಾ ಎಸೆಯಬೇಡಿ’ ಎಂದು ಮಹಿಳಾ ಸಿಬ್ಬಂದಿ ಹೇಳಿದ್ದೆ ತಪ್ಪಾಯಿತು ಎನ್ನುವಂತೆ ವರ್ತಿಸಿರುವ ಕುರಿತು ಇದರಲ್ಲಿ ಚಿತ್ರಣ ಕಂಡು ಬಂದಿದೆ.