ಮಡಿಕೇರಿ, ಆ. ೩೧: ೨೦೨೧ನೇ ಸಾಲಿನ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದ ಎಂ.ಎಸ್ಸಿ. ವಿದ್ಯಾರ್ಥಿನಿ ರಮ್ಯಾ ನೆಕ್ಕರೆಕಾಡು ಅವರ ‘ಒಪ್ಪಿ’ ಕಥೆಗೆ ಪ್ರಥಮ ಸ್ಥಾನ ಬಂದಿದೆ.
ಪೆರಡಾಲ ಬದಿಯಡ್ಕದ ಅಭಿಜ್ಞಾ ಬೊಳುಂಬು ಅವರ ‘ಕಾಫಿ ಕುಡಿದ ಜರ್ನಲಿಸ್ಟ್’ ಕಥೆಗೆ ದ್ವಿತೀಯ, ಕಲ್ಮಡ್ಕದ ರಜನಿ ಭಟ್ ‘ಮುದುಡಿದ ತಾವರೆ ಅರಳಿತು’ ಕಥೆ ತೃತೀಯ ಬಹುಮಾನ ಪಡೆದುಕೊಂಡಿತು.
ವಿ.ಬಿ. ಕುಳಮರ್ವ, ನಾರಾಯಣ ಹೆಗ್ಡೆ, ಶೀಲಾಲಕ್ಷಿö್ಮ ಕಾಸರಗೋಡು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು ಎಂದು ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ ಸಂಚಾಲಕಿ ವಿಜಯಾ ಸುಬ್ರಮಣ್ಯ ಕುಂಬಳೆ ತಿಳಿಸಿದ್ದಾರೆ.