ಹೆಚ್.ಜೆ. ರಾಕೇಶ್
ಮಡಿಕೇರಿ, ಆ. ೩೧: ಅಬಕಾರಿ ಇಲಾಖೆ ಮೂಲಕ ಸರಕಾರಕ್ಕೆ ಅತೀ ಹೆಚ್ಚು ಆದಾಯವನ್ನು ಪುಟ್ಟ ಜಿಲ್ಲೆಯಾಗಿರುವ ಕೊಡಗು ನೀಡುತ್ತಿದೆ. ಆದರೆ, ಅದೇ ಇಲಾಖೆಗೆ ಸ್ವಂತ ಕಟ್ಟಡ ಮರೀಚಿಕೆಯಾಗಿದೆ. ಕೋಟಿ ವೆಚ್ಚದ ಯೋಜನೆ ಇದೀಗ ಕಾಡು ಸೇರಿದೆ. ಅನುದಾನ ಕೊರತೆಯಿಂದ ವಿಶಾಲವಾದ ಕಟ್ಟಡ ಪಾಳು ಬಿದ್ದಿದೆ.
೨೦೦೪-೦೫ರಲ್ಲಿ ಜಿಲ್ಲೆಗೆ ಅಬಕಾರಿ ಭವನ ನಿರ್ಮಿಸುವ ನಿಟ್ಟಿನಲ್ಲಿ ಸರಕಾರ ಯೋಜನೆ ಮಂಜೂರು ಮಾಡಿತು. ಇದಕ್ಕಾಗಿ ಜಿಲ್ಲಾಡಳಿತ ವತಿಯಿಂದ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಟುಹೊಳೆ ಸಮೀಪದಲ್ಲಿ ನಿವೇಶನ ಗುರುತಿಸಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಲಾಯಿತು. ನೆಲಅಂತಸ್ತನ್ನು ಕೂಡ ನಿರ್ಮಿಸಲಾಯಿತು. ಆದರೆ, ಅನುದಾನ ಕೊರತೆಯಿಂದ ಯೋಜನೆ ಹಳ್ಳ ಹಿಡಿದಿದ್ದು, ಹಲವು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡು, ಇರುವ ಕಟ್ಟಡ ಪಾಳುಬಿದ್ದ ಸ್ಥಿತಿಯಲ್ಲಿದೆ.
ರೂ. ೨ ಕೋಟಿಯ ಯೋಜನೆ
ಉದ್ದೇಶಿತ ಅಬಕಾರಿ ಭವನ ನಿರ್ಮಾಣ ಯೋಜನೆಯ ಪ್ರಕ್ರಿಯೆ ೨೦೦೫ರಲ್ಲಿ ಆರಂಭವಾಯಿತು. ಈ ನಿಟ್ಟಿನಲ್ಲಿ ರೂ. ೨ ಕೋಟಿಯ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಪ್ರಥಮ ಹಂತವಾಗಿ ರೂ. ೭೦ ಲಕ್ಷವನ್ನು ಅಬಕಾರಿ ಇಲಾಖೆ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಗೊಳಿಸಿತು.
೨೦೦೯ರಲ್ಲಿ ಇ-ಪ್ರಕ್ಯೂರ್‌ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲಾಯಿತು. ಅದೇ ವರ್ಷ ಪ್ರಥಮ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು. ಬಿಡುಗಡೆಯಾದ ಹಣದಲ್ಲಿ ನೆಲ ಅಂತಸ್ತು ಜೊತೆಗೆ ಬಂಧಿಖಾನೆ, ಅಬಕಾರಿ ಇಲಾಖೆ ವಶಪಡಿಸಿಕೊಂಡ ವಸ್ತುಗಳನ್ನು ದಾಸ್ತಾನಿಡಲು ಗೋದಾಮು, ಶೌಚಾಲಯವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಯಿತು. ಅದಾದ ಬಳಿಕ ಅನುದಾನ ಕೊರತೆಯಿಂದ ಯೋಜನೆ ಸ್ಥಗಿತಗೊಳಿಸಲಾಯಿತು. ೧೨ ವರ್ಷ ಕಳೆದರೂ ಕಟ್ಟಡ ಮೇಲೇಳಲಿಲ್ಲ. ಈ ಬಗ್ಗೆ ಹಲವು ಬಾರಿ ಪತ್ರ ವ್ಯವಹಾರ ಮಾಡಿದರು ಪ್ರಯೋಜನವಾಗಿಲ್ಲ.
ಬೇಕಿದೆ ರೂ. ೪.೯೫ ಕೋಟಿ
ಅಂದು ರೂ. ೨ ಕೋಟಿಯಲ್ಲಿ ಮುಗಿಯುತ್ತದೆ ಎನ್ನಲಾದ ಯೋಜನೆಗೆ ಪ್ರಸ್ತುತ ಹೆಚ್ಚುವರಿಯಾಗಿ ಇನ್ನೂ ರೂ. ೪ ಕೋಟಿ ೯೫ ಲಕ್ಷ ರೂಪಾಯಿ ಬೇಕಾಗಿದೆ. ಕಟ್ಟಡ ಸಾಮಗ್ರಿಗಳ ಬೆಲೆ, ಕಾರ್ಮಿಕರ ಕೂಲಿ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿವೆೆ. ಒಟ್ಟು ಯೋಜನೆಯ ಹಣಕ್ಕಿಂತ ಪ್ರಸ್ತುತ ತಯಾರಿಸಿರುವ ಕ್ರಿಯಾಯೋಜನೆಯ ಮೊತ್ತ ದುಪ್ಪಟ್ಟಾಗಿದೆ.
ಈಗಾಗಲೇ ಈ ಸಂಬAಧ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ನಿರ್ಮಾಣವಾಗಿರುವ ಕಟ್ಟಡ ಹದಗೆಟ್ಟಿದೆ.
(ಮೊದಲ ಪುಟದಿಂದ) ಕಟ್ಟಡವನ್ನು ಮತ್ತೇ ಬಳಸುವ ಉದ್ದೇಶದಿಂದಾಗಿ, ಕಟ್ಟಡವನ್ನು ನವೀಕರಣಗೊಳಿಸುವ ನಿಟ್ಟಿನಲ್ಲಿ, ಮೊದಲ ಮತ್ತು ಎರಡನೇ ಮಹಡಿ ಯನ್ನು ನಿರ್ಮಿಸುವ ಕಾಮಗಾರಿ ಯನ್ನು ಆರಂಭಿಸ ಬೇಕಾದರೆ ರೂ. ೪.೯೫ ಕೋಟಿ ಬೇಕಾಗಿದೆ ಎಂದು ಕ್ರಿಯಾಯೋಜನೆ ತಯಾರು ಮಾಡಿ ಇಲಾಖೆಗೆ ೨೦೧೯ರಲ್ಲಿ ನೀಡಿದೆ.
ಪಿ.ಡಬ್ಲೂö್ಯ.ಡಿ. ಇಲಾಖೆಯ ಮಾಹಿತಿಯಂತೆ ರೂ. ೪.೯೫ ಕೋಟಿ ಬಿಡುಗಡೆಯಾದಲ್ಲಿ ಮೊದಲ ಹಾಗೂ ೨ನೇ ಮಹಡಿ ನಿರ್ಮಾಣ, (ಮೊದಲ ಪುಟದಿಂದ) ಕಟ್ಟಡವನ್ನು ಮತ್ತೇ ಬಳಸುವ ಉದ್ದೇಶದಿಂದಾಗಿ, ಕಟ್ಟಡವನ್ನು ನವೀಕರಣಗೊಳಿಸುವ ನಿಟ್ಟಿನಲ್ಲಿ, ಮೊದಲ ಮತ್ತು ಎರಡನೇ ಮಹಡಿ ಯನ್ನು ನಿರ್ಮಿಸುವ ಕಾಮಗಾರಿ ಯನ್ನು ಆರಂಭಿಸ ಬೇಕಾದರೆ ರೂ. ೪.೯೫ ಕೋಟಿ ಬೇಕಾಗಿದೆ ಎಂದು ಕ್ರಿಯಾಯೋಜನೆ ತಯಾರು ಮಾಡಿ ಇಲಾಖೆಗೆ ೨೦೧೯ರಲ್ಲಿ ನೀಡಿದೆ.
ಪಿ.ಡಬ್ಲೂö್ಯ.ಡಿ. ಇಲಾಖೆಯ ಮಾಹಿತಿಯಂತೆ ರೂ. ೪.೯೫ ಕೋಟಿ ಬಿಡುಗಡೆಯಾದಲ್ಲಿ ಮೊದಲ ಹಾಗೂ ೨ನೇ ಮಹಡಿ ನಿರ್ಮಾಣ, ಗಿಡಗಂಟಿಗಳಿAದ ತುಂಬಿ ಹೋಗಿವೆ.
ಕಟ್ಟಡದೊಳಗೆ ಮಳೆ ನೀರು ಸೋರುತ್ತಿರುವದರಿಂದ ಶಿಥಿಲವಾಗುತ್ತಿದೆ. ಸುತ್ತ ಕಾಡು ಬೆಳೆದು ಕಟ್ಟಡ ಗಿಡಗಂಟಿಗಳ ನಡುವೆ ಕೂಡಿದೆ. ಪ್ರಾಥಮಿಕ ನಿರ್ವಹಣೆಯೂ ಇಲ್ಲದೆ ಕಟ್ಟಡ ಹಾಳಾಗುತ್ತಿದೆ. ಈ ಬಗ್ಗೆ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.
ಬಿಡುಗಡೆಯಾಗದ ಅನುದಾನ
೨೦೧೯ರಲ್ಲಿ ರೂ. ೪.೯೫ ಕೋಟಿ ಬೇಕಾಗುತ್ತದೆ ಎಂದು ಅಂದಾಜು ಪಟ್ಟಿ ತಯಾರಿಸಿದ್ದರು ಇನ್ನೂ ಕೂಡ ಅನುದಾನ ಬಂದಿಲ್ಲ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳು, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಿವೆ. ಇನ್ನೂ ಸಮಯ ಕಳೆದರೆ ಕ್ರಿಯಾ ಯೋಜನೆಯ ಹಣ ಕೂಡ ಹೆಚ್ಚು ಬೇಕಾಗುವುದರಲ್ಲಿ ಅನುಮಾನವಿಲ್ಲ.
ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರಂತರ ಪತ್ರ ವ್ಯವಹಾರ ಮಾಡುತ್ತಿದ್ದಾರೆ. ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.