ಮಡಿಕೇರಿ, ಆ. ೩೧: ಸುತ್ತ ಹಸಿರು, ಮಂಜಿನ ನಡುವೆ ಹಿತವಾದ ವಾತಾವರಣ, ಪ್ರಕೃತಿ ಪ್ರಿಯರನ್ನು ತನ್ನತ್ತ ಕೈಬೀಸಿ ಕರೆಯುವ ಪ್ರವಾಸಿ ತಾಣ, ಸ್ಥಳೀಯರಿಗೂ ಈ ಪ್ರದೇಶವೆಂದರೆ ಅಷ್ಟೇ ಇಷ್ಟ. ಆದರೆ, ಸೊಜಿಗಲ್ಲಿನಂತೆ ಸೆಳೆಯಬೇಕಾಗಿದ್ದ ಸಂಗೀತ ಕಾರಂಜಿ (ಮ್ಯೂಸಿಕಲ್ ಫೌಂಟೇನ್) ಮಾತ್ರ ಕಳೆದ ಎರಡು ವರ್ಷಗಳಿಂದ ದುರಸ್ತಿಯಾಗಿ ಬಳಕೆಯಾಗುತ್ತಿರಲಿಲ್ಲ. ಕೆಲಸ ಮಾಡದ ಕಾರಂಜಿ ಕಂಡು ಪ್ರವಾಸಿಗರು ನಿರಾಸೆ ಅನುಭವಿಸುತ್ತಿದ್ದರು. ಇದೀಗ ಸಂಗೀತ ಕಾರಂಜಿಗೆ ಮರುಜೀವ ದೊರೆಯುತ್ತಿದೆ.

ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಮಂಜಿನ ನಗರಿ ಮಡಿಕೇರಿಯ ಆಕರ್ಷಣೀಯ ಕೇಂದ್ರಬಿAದು ರಾಜಾಸೀಟ್‌ನಲ್ಲಿರುವ ಸಂಗೀತ ಕಾರಂಜಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದು, ಪೈಪ್‌ಲೈನ್, ಮೋಟರ್ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಕಾರಂಜಿ ಚಿಮ್ಮದೆ ಪ್ರವಾಸಿಗರಿಗೆ ನಿರಾಸೆ ಮೂಡಿಸುತ್ತಿತ್ತು.

ಅಂದಿನ ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಕೊಡಗು ಮೂಲದ ಡಾ.ವಸಂತ್ ಕುಮಾರ್ ಯೋಜನೆಗೆ ರೂ. ೧೮ ಲಕ್ಷ ಅನುದಾನ ಮಂಜೂರು ಮಾಡಿದರು. ಬೆಂಗಳೂರು ಇಂದಿರಾ ಗಾಂಧಿ ಸಂಗೀತ ಕಾರಂಜಿಯನ್ನು ಮೇಲ್ದರ್ಜೆಗೇರಿಸುವ

(ಮೊದಲ ಪುಟದಿಂದ) ಸಂದರ್ಭ ಅಲ್ಲಿ ಬಳಸಿದ ವಸ್ತು ಗಳನ್ನು ತಂದು ೨೦೦೬ರಲ್ಲಿ ರಾಜಾಸೀಟ್‌ನಲ್ಲಿ ಚೆಂದದ ಸಂಗೀತ ಕಾರಂಜಿ ನಿರ್ಮಿಸಲಾಯಿತು. ಕಾರಂಜಿ ಸರಿಯಾಗಿದ್ದ ಸಂದರ್ಭ ಪ್ರವಾಸಕ್ಕೆಂದು ಬರುತ್ತಿದ್ದವರು ಸಂಜೆಯ ವೇಳೆ ಸೂರ್ಯಸ್ತಮ ಕಣ್ತುಂಬಿಕೊAಡು ಬಳಿಕ ವಿವಿಧ ಗೀತೆಗಳಿಗೆ ಚಿಮ್ಮುವ ನೀರಿನ ನೃತ್ಯ ಕಂಡು ಪುಳಕಿತರಾಗುತ್ತಿದ್ದರು. ನೀರಿನ ಏರಿಳಿತದ ದೃಶ್ಯವನ್ನು ಆಸ್ವಾದಿಸಲೆಂದೆ ಪ್ರವಾಸಿಗರು ಸಂಜೆಯ ತನಕ ಕಾಯುತ್ತಿದ್ದರು. ದೇಶಭಕ್ತಿ, ಪ್ರಕೃತಿಯ ವರ್ಣಿಸುವ ಹಾಡುಗಳು, ಕೊಡಗಿನ ಕಾವೇರಿ ಗೀತೆ ಸೇರಿದಂತೆ ನಾನಾ ಗೀತೆಗಳು ಸಂಗೀತ ಕಾರಂಜಿಯಲ್ಲಿ ಮೂಡಿಬರುತ್ತಿತ್ತು. ಕಗ್ಗತ್ತಲ ನಡುವೆ ಚಿಮ್ಮುವ ನೀರು ಹೊಸ ಅನುಭವವನ್ನು ನೀಡುತಿತ್ತು.

ನಿರ್ವಹಣೆ ಸಮಸ್ಯೆ

ಸಂಗೀತ ಕಾರಂಜಿ ಹಲವು ಬಾರಿ ಕೆಟ್ಟುಹೋಗುತ್ತಿತ್ತು. ವಯರಿಂಗ್, ಮೋಟರ್, ಜೆಟ್, ಲೈಟಿಂಗ್‌ನಲ್ಲಿ ಸಮಸ್ಯೆ ಉಂಟಾಗುತಿತ್ತು. ಇದಕ್ಕೆ ಸೂಕ್ತ ನಿರ್ವಹಣೆ ಇಲ್ಲದಿರುವುದು ಕಾರಣ ವಾಗಿತ್ತು. ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಕಾರಂಜಿ ಸರಿಯಾಗಿ ನಿರ್ವಹಣೆ ಆಗದ ಬಗ್ಗೆ ಆಗಮಿಸುತ್ತಿದ್ದವರಲ್ಲಿ ಬೇಸರ ಕೂಡ ಸೃಷ್ಟಿಯಾಗುತ್ತಿತ್ತು.

ವರ್ಷದಲ್ಲಿ ಕೆಲವೇ ತಿಂಗಳು ಮಾತ್ರ ಕಾರಂಜಿ ಕೆಲಸ ಮಾಡುತಿತ್ತು. ಮತ್ತೆ ಹಾಳಾಗುತಿತ್ತು. ಇದೀಗ ಎಲ್ಲವನ್ನೂ ಶಾಶ್ವತವಾಗಿ ಸರಿಪಡಿಸಲು ತೋಟಗಾರಿಕೆ ಇಲಾಖೆ ಕ್ರಮಕೈ ಗೊಂಡಿದ್ದು, ಕಾರಂಜಿಯನ್ನು ನವೀಕರಣದ ಜೊತೆಗೆ ಮೇಲ್ದರ್ಜೆಗೆ ಏರಿಸಲು ಮುಂದಾಗಿದೆ.

ರೂ. ೨೦ ಲಕ್ಷದ ಯೋಜನೆ

ಪೈಪ್‌ಲೈನ್ ಹಾಗೂ ಮೋಟರ್‌ನಲ್ಲಿ ಸಮಸ್ಯೆ ಉಂಟಾಗಿ ಕಾರಂಜಿ ಸೌಂದರ್ಯ ಮಂಕಾ ಯಿತು. ಕಳೆದ ಎರಡು ವರ್ಷಗಳಿಂದ ಹದಗೆಟ್ಟ ಕಾರಂಜಿಯ ಸರಿಪಡಿಸುವ ಗೋಜಿಗೆ ಹೋಗಿರಲಿಲ್ಲ. ಇದೀಗ ಅದನ್ನು ದುರಸ್ತಿಪಡಿಸಲು ತೋಟಗಾರಿಕೆ ಇಲಾಖೆ ಮುಂದಾಗಿದ್ದು, ನಿರ್ಮಿತಿ ಕೇಂದ್ರ ನವೀಕರಣದ ಜವಾಬ್ದಾರಿ ಹೊತ್ತಿದೆ.

ರೂ. ೨೦ ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ಈಗಾಗಲೇ ಆರಂಭಿಸ ಲಾಗಿದೆ. ಪೈಪ್‌ಲೈನ್ ಸರಿಪಡಿಸುವಿಕೆ, ಮೋಟರ್ ಬದಲಾವಣೆ, ಜೆಟ್‌ಗಳ ಸರಿಪಡಿಸುವಿಕೆ, ನೀರು ಸೋರಿಕೆಗೆ ಕ್ರಮ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಲಾಗುತ್ತಿದೆ. ಇನ್ನೂ ಒಂದು ತಿಂಗಳಿನಲ್ಲಿ ಸಂಗೀತ ಕಾರಂಜಿ ಮತ್ತೇ ರಾಜಾಸೀಟ್‌ನಲ್ಲಿ ವೈಭವ ತೋರಲಿದೆ ಎಂಬ ನಿರೀಕ್ಷೆ ಸೃಷ್ಟಿಯಾಗಿದೆ. ಕೊಯ ಮತ್ತೂರು ಮೂಲದ ಗುತ್ತಿಗೆ ದಾರರು ಸಂಗೀತ ಕಾರಂಜಿ ದುರಸ್ತಿ ಕಾರ್ಯ ವನ್ನು ಕೈಗೊಂಡಿದ್ದಾರೆ.