ವೀರಾಜಪೇಟೆ, ಆ. ೩೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಡಿಕೇರಿಯ ಮದೆನಾಡಿನಲ್ಲಿ ಯಂತ್ರದ ಮೂಲಕ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಯೋಗೀಶ್ ಎ. ಮಾತನಾಡಿ, ಭತ್ತ ಕೃಷಿಯನ್ನು ವೈಜ್ಞಾನಿಕ ಪದ್ಧತಿಯಲ್ಲಿ ಹೇಗೆ ಮಾಡಬಹುದು ಎನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ವಲಯ ಮೇಲ್ವಿಚಾರಕ ಹರೀಶ್, ಸೇವಾಕೇಂದ್ರದ ಪ್ರಬಂಧಕ ಅಕ್ಷಯ್ ಉಪಸ್ಥಿತರಿದ್ದರು.