ಮಡಿಕೇರಿ, ಆ. ೩೧: ಕರ್ತವ್ಯಕ್ಕೆ ತಡವಾಗಿ ಬಂದುದಕ್ಕೆ ಕಾರಣ ಕೇಳಿದ ಶಿರಸ್ತೇದಾರರನ್ನು ನಿಂದಿಸಿದ ಆರೋಪದಡಿ ಸಂಪಾಜೆ ಹೋಬಳಿಯ ಕಂದಾಯ ನಿರೀಕ್ಷಕ ರವಿಚಂದ್ರ ಎಂಬವರನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕೆಲದಿನಗಳ ಕರ್ತವ್ಯಕ್ಕೆ ತಡವಾಗಿ ಬಂದ ರವಿಚಂದ್ರ ಅವರ ಬಳಿ ಶಿರಸ್ತೇದಾರ್ ಗುರುರಾಜ್ ಕಾರಣ ಕೇಳಿದ ಸಂದರ್ಭ ರವಿಚಂದ್ರ ಶಿರಸ್ತೇದಾರ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು.