ಸೋಮವಾರಪೇಟೆ, ಆ. ೩೧: ಪಟ್ಟಣದ ೧ನೇ ಮತ್ತು ೩ನೇ ವಾರ್ಡ್ನ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳ ಪರವಾಗಿ ಜೆಡಿಎಸ್ ನಾಯಕರು ಮನೆ ಮನೆಗೆ ತೆರಳಿ ಮತಯಾಚಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್, ರಾಜ್ಯ ಉಪಾಧ್ಯಕ್ಷ ಶರೀಫ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ಖಾನ್, ಪಕ್ಷದ ತಾಲೂಕು ಅಧ್ಯಕ್ಷ ಸಿ.ಎಸ್. ನಾಗರಾಜ್, ಮಡಿಕೇರಿ ಕ್ಷೇತ್ರಸಮಿತಿ ಮಹಿಳಾ ಅಧ್ಯಕ್ಷೆ ಎಂ.ಎ. ರುಬೀನಾ, ಪ್ರಮುಖರಾದ ಡೆನ್ನಿ ಬರೋಟ್, ತ್ರಿಶೂಲ್, ಎ.ಜೆ. ವಿಜಯ್, ಸ್ವಾಗತ್ಗೌಡ, ಆದರ್ಶ್ ತಿಮ್ಮಯ್ಯ, ಸುನಿಲ್, ೧ನೇ ವಾರ್ಡ್ನ ಅಭ್ಯರ್ಥಿ ಗಿರೀಶ್, ೩ನೇ ವಾರ್ಡ್ನ ಪುಷ್ಪ ಸತೀಶ್ ಇದ್ದರು.