ಮಡಿಕೇರಿ,ಆ.೩೧: ಮೈಸೂರು ವಿಭಾಗದ ಪ್ರಥಮ ದರ್ಜೆ ಸಹಾಯಕ, ಪ್ರಥಮ ದರ್ಜೆ ರಾಜಸ್ವ ನಿರೀಕ್ಷಕರು ಮತ್ತು ಶೀಘ್ರ ಲಿಪಿಗಾರರ ವೃಂದದ ನೌಕರರನ್ನು ಉಪ ತಹಶೀಲ್ದಾರರು ಮತ್ತು ಶಿರಸ್ತೆದಾರರ ಹುದ್ದೆಗೆ ಮುಂಬಡ್ತಿ ನೀಡಿ ನಿಯೋಜಿಸಲಾಗಿದೆ. ಜೇಷ್ಠತೆಯಲ್ಲಿ ಹಿರಿಯರಾಗಿದ್ದು, ಮುಂಬಡ್ತಿಗೆ ಅರ್ಹರಾಗಿರುವವರಿಗೆ ಮುಂಬಡ್ತಿ ನೀಡಿ ಮೈಸೂರು ಪ್ರಾದೇಶಿಕ ಆಯುಕ್ತರು ತಾ. ೨೭ರಂದು ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲೆಯ ವಿವಿಧ ಕಂದಾಯ ಕಚೇರಿಗಳಿಗೂ ಉಪ ತಹಶೀಲ್ದಾರ್ ಹಾಗೂ ಶಿರಸ್ತೆದಾರರನ್ನು ನಿಯೋಜನೆ ಮಾಡಲಾಗಿದೆ.
ಉಪ ತಹಶೀಲ್ದಾರರು
ವೀರಾಜಪೇಟೆ ತಾಲೂಕಿನ ಬಾಳೆಲೆ ನಾಡಕಚೇರಿ ಉಪ ತಹಶೀಲ್ದಾರರಾಗಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ರಾಜಸ್ವ ನಿರೀಕ್ಷಕರಾಗಿದ್ದ ಹೆಚ್.ಜೆ. ಮುಕುಂದರಾಜ್, ಶಾಂತಳ್ಳಿ ನಾಡಕಚೇರಿ ಉಪ ತಹಶೀಲ್ದಾರರಾಗಿ ಪುತ್ತೂರು ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ತುಕ್ರಮಪ್ಪ ಮೇರ, ಹುದಿಕೇರಿ ನಾಡಕಚೇರಿ ಉಪ ತಹಶೀಲ್ದಾರರಾಗಿ ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಪ್ರಥÀಮ ದರ್ಜೆ ಸಹಾಯಕರಾಗಿದ್ದ ಸ್ವಾತಿ, ಶನಿವಾರಸಂತೆ ನಾಡಕಚೇರಿ ಉಪ ತಹಶೀಲ್ದಾರರಾಗಿ ಹಾಸನದ ಆಲೂರು ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ನಾಗರೇಶಿ ಶ್ರೀದೇವಿ, ಪೊನ್ನಂಪೇಟೆ ನಾಡ ಕಚೇರಿ ಉಪ ತಹಶೀಲ್ದಾರರಾಗಿ ಅರಕಲಗೂಡು ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಟಿ.ಡಿ.ರವಿಕುಮಾರ್, ನಾಪೋಕ್ಲು ನಾಡ ಕಚೇರಿ ಉಪ ತಹಶೀಲ್ದಾರರಾಗಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಎಂ.ಯು. ಸುನಿಲ್‌ಕುಮಾರ್, ಸಂಪಾಜೆ ನಾಡ ಕಚೇರಿ ಉಪ ತಹಶೀಲ್ದಾರರಾಗಿ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಕೆ. ಗೋಪಾಲ ಅವರುಗಳನ್ನು ನೇಮಕಗೊಳಿಸಲಾಗಿದೆ.
(ಮೊದಲ ಪುಟದಿಂದ)
ಶಿರಸ್ತೆದಾರರು : ಜಿಲ್ಲಾಧಿಕಾರಿಗಳ ಕಚೇರಿ ಆಡಳಿತ ಶಾಖೆ ಶಿರಸ್ತೆದಾರರಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಕೆ.ಜಿ. ಮಧುಕರ, ಮಡಿಕೇರಿ ತಾಲೂಕು ಕಚೇರಿ ಸಾಮಾಜಿಕ ಭದ್ರತೆ ಶಾಖೆ ಶಿರಸ್ತೆದಾರರಾಗಿ ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಪೂಜಾರೀರ ದೇವರಾಜ್, ವೀರಾಜಪೇಟೆ ತಾಲೂಕು ಕಚೇರಿಯ ಸಾಲ ವಸೂಲಾತಿ ಶಾಖಾ ಶಿರಸ್ತೆದಾರರಾಗಿ ಚಾಮರಾಜಪೇಟೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಅಮಿತ ಡಿ ರೈ, ವೀರಾಜಪೇಟೆ ತಾಲೂಕು ಚುನಾವಣಾ ಶಾಖಾ ಶಿರಸ್ತೆದಾರರಾಗಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಎಂ.ಗಣೇಶ್‌ಕುಮಾರ್, ವೀರಾಜಪೇಟೆ ತಾಲೂಕು ಸಾಮಾಜಿಕ ಭದ್ರತಾ ಶಾಖೆ ಶಿರಸ್ತೆದಾರರಾಗಿ ಪಾಣೆ ಮಂಗಳೂರು ಕಂದಾಯ ನಿರೀಕ್ಷಕರಾಗಿದ್ದ ಕೆ.ರಾಮ, ಸೊಮವಾರಪೇಟೆ ತಾಲೂಕು ಆರ್.ಆರ್.ಟಿ.ಶಾಖೆ ಶಿರಸ್ತೆದಾರರಾಗಿ ಮುಲ್ಕಿ ತಾಲೂಕು ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಕೆ.ಎಂ.ನಟರಾಜು, ವೀರಾಜಪೇಟೆ ತಾಲೂಕು ಕಚೇರಿ ಆರ್.ಆರ್.ಟಿ. ಶಾಖೆ ಶಿರಸ್ತೆದಾರರಾಗಿ ಬಂಟ್ವಾಳ ತಾಲೂಕು ಕಚೇರಿಯಲ್ಲಿ ರಾಜಸ್ವ ನಿರೀಕ್ಷಕರಾಗಿದ್ದ ನವೀನ್‌ಕುಮಾರ್ ಅವರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. @ ಸಂತೋಷ್