ಮಡಿಕೇರಿ, ಆ. ೩೦: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಲವು ತಿಂಗಳುಗಳಿAದ ಕೇಳಿಬರುತ್ತಿರುವ ಸೆಲಿಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಮೂಲದ ಪ್ರಸ್ತುತ ಬೆಂಗಳೂರಿನ ಬೆನ್ಷನ್ ಟೌನ್‌ನಲ್ಲಿ ನೆಲೆಸಿರುವ ಡಿ.ಜೆಯಾಗಿರುವ ವಚನ್ ಚಿಣ್ಣಪ್ಪ ಮನೆಗೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.

ವಚನ್ ಚಿಣ್ಣಪ್ಪ ಸೇರಿದಂತೆ ಉದ್ಯಮಿ ಭರತ್, ನಟಿ ಸೋನಿಯ ಅಗರ್‌ವಾಲ್ ಅವರುಗಳ ಮನೆಗಳ ಮೇಲೂ ಪೊಲೀಸರು ಬೆಳ್ಳಂಬೆಳ್ಳಿಗೆ ದಾಳಿ ನಡೆಸಿದ್ದಾರೆ. ಸೆಲಿಬ್ರಿಟಿಗಳಿಗೆ ನೈಜೀರಿಯನ್ ಪ್ರಜೆ ‘ಡ್ರಗ್ಸ್ ಪೆಡ್ಲರ್’ ಥಾಮಸ್ ಡ್ರಗ್ ಪೊರೈಸುತ್ತಿದ್ದ ಎಂದು ತಿಳಿದು ಬಂದಿತ್ತು. ಈ ಹಿನ್ನೆಲೆ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಸೆಲಿಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಪ್ರಕರಣ

(ಮೊದಲ ಪುಟದಿಂದ) ಆತ ನೀಡಿದ ಮಾಹಿತಿ ಹಿನ್ನೆಲೆ ಮೂವರ ಮನೆ ಮೇಲೆ ದಾಳಿಯಾಗಿದೆ ಎನ್ನಲಾಗಿದೆ.

ಪೊಲೀಸರ ವಶದಲ್ಲಿರುವ ಮೂವರು ಕೂಡ ‘ಡ್ರಗ್ಸ್ ಪೆಡ್ಲರ್’ ಥಾಮಸ್ ಸಂಪರ್ಕದಲ್ಲಿದ್ದರು ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಅದಲ್ಲದೆ ವಚನ್ ಮನೆಯಲ್ಲಿ ೫೦ ಗ್ರಾಂ. ನಷ್ಟು ಗಾಂಜಾ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಗೋವಿಂದಪುರ ಠಾಣೆಯಲ್ಲಿ ಪ್ರತ್ಯೇಕವಾಗಿ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಡ್ರಗ್ಸ್ ಸೇವಿಸಿದವರ ಬಗ್ಗೆ ವಚನ್ ಅನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ ಡ್ರಗ್ಸ್ ಸೇವಿಸಿಲ್ಲ ಎಂದು ವರದಿ ಬಂದಿದೆ.