ನಾಪೋಕ್ಲು, ಆ. ೩೦: ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ನಾಗರಿಕರು ಭಯದಿಂದ ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಪು ಗುಂಪಾಗಿ ನಾಯಿಗಳು ಓಡಾಡುವ ದೃಶ್ಯ ಸಾಮಾನ್ಯವಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ನಾಯಿಗಳ ನಿಗ್ರಹಕ್ಕೆ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಗ್ರಾಮ ಪಂಚಾಯಿತಿಯವರನ್ನು ಒತ್ತಾಯಿಸಿದ್ದಾರೆ.