ಗೋಣಿಕೊಪ್ಪ ವರದಿ, ಆ. ೨೮: ಗೋಣಿಕೊಪ್ಪ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದೇಶಿಯ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಸಂಘದ ಅಧ್ಯಕ್ಷ ಕುಪ್ಪಂಡ ವಿಜು ಚಿಟ್ಯಪ್ಪ ಸೋಮವಾರ ಉದ್ಘಾಟಿಸಿದರು.
ಸಂಘದ ಸಿಇಒ ವಿ. ಕೆ. ಪ್ರತಾಪ್ ಮಾತನಾಡಿ, ದೇಶಿ ಉತ್ಪನ್ನಗಳಿಗೆ ಒತ್ತು ನೀಡಲು ಕೇಂದ್ರ ಸ್ಥಾಪಿಸಲಾಗಿದೆ. ಕೃಷಿಗೆ ಸಂಬAಧಿಸಿದ ಗೊಬ್ಬರ, ಆಹಾರ ಉತ್ಪನ್ನ, ಕಾಸ್ಮೆಟಿಕ್ಸ್ ವಸ್ತುಗಳು ಕೂಡ ಲಭ್ಯವಿದೆ. ಆರೋಗ್ಯ ದೃಷ್ಟಿಯಿಂದ ಸಂಘದ ಸದಸ್ಯರು, ಸಾರ್ವಜನಿಕರಿಗೂ ಕೂಡ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ದೇಶಿ ಉತ್ಪನ್ನ ತಲುಪಿಸುವ ಉದ್ದೇಶ ಸಂಘದಿAದ ಸಾಕಾರಗೊಳ್ಳುತ್ತಿದೆ ಎಂದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಜಮ್ಮಡ ಸಿ. ಮೋಹನ್, ಬೆಲ್ಲತಂಡ ಸಿ. ಮಾಚಯ್ಯ, ವಿ. ಬಿ. ಕಿರಣ್, ಕುಲ್ಲಚಂಡ ಗಣಪತಿ, ಪಿ. ವಿ. ಶೋಬಿತ್, ಚೆಪ್ಪುಡೀರ ಗಣಪತಿ, ತೇಜ್‌ಕಿರಣ್, ಬಿ. ಕೆ. ಪ್ರದೀಪ್ ಇದ್ದರು.