ಮಡಿಕೇರಿ, ಆ. ೨೮: ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗವು ವಿದ್ಯಾರ್ಥಿಗಳಲ್ಲಿ ಇಂಟರ್ನ್ಶಿಪ್ ಅನುಭವವನ್ನು ಇಂಡಸ್ಟಿç ಮತ್ತು ಸಂಶೋಧನ ವಿಭಾಗಗಳಲ್ಲಿ ಪಡೆಯುವುದಕ್ಕಾಗಿ ಕಾಲೇಜಿನಲ್ಲಿ ‘ಶೀಟ್ ಮೆಟಲ್ ಪ್ರಾಡಕ್ಟ್ಡಿಸೈನ್’ ಎಂಬ ವಿಷಯದಲ್ಲಿ ಐದು ದಿನಗಳ ಕಾರ್ಯಾಗಾರ ವಿಭಾಗದ ಕ್ಯಾಡ್ ಸೆಂಟರ್‌ನಲ್ಲಿ ನಡೆಯಿತು.

ಈ ಕಾರ್ಯಾಗಾರವು ಮುಂದಿನ ಒಂದು ತಿಂಗಳ ಕಾಲ ಪ್ರಾಯೋಗಿಕ ತರಗತಿಗಳೊಂದಿಗೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಪ್ರಸ್ತುತ ವರ್ಕ್ ಫ್ರಂ ಹೋಂನAತಹ ಅನುಭವವನ್ನು ನೀಡುವುದರ ಜೊತೆಗೆ ಕ್ರಿಯಾಶೀಲತೆ ಮತ್ತು ಆವಿಷ್ಕಾರಗಳನ್ನು ಹುಟ್ಟು ಹಾಕಲಿದೆ ಎಂದು ವಿಭಾಗದ ಮುಖ್ಯಸ್ಥ ಡಾ. ಉಮಾಶಂಕರ್ ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ. ಭರತ್. ಪಿ. ನಡೆಸಿಕೊಟ್ಟರು.ಈ ಕಾರ್ಯಾಗಾರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ೫೦ ವಿದ್ಯಾರ್ಥಿಗಳು ಭಾಗವಹಿಸಿ ನೈಪುಣ್ಯತೆಯನ್ನು ಪಡೆದರು.