ನಾಪೋಕ್ಲು, ಆ. ೨೮: ಕೊಟ್ಟಮುಡಿ ಸರಕಾರಿ ಸಸ್ಯ ಕ್ಷೇತ್ರದಲ್ಲಿ ಸೆ.೨೦ ರಿಂದ ಗಿಡಗಳ ವಿತರಣೆ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಸ್ಯ ಕ್ಷೇತ್ರದಲ್ಲಿ ಸುಮಾರು ೧.೭೫ ಲಕ್ಷ ಒಳ್ಳೆಮೆಣಸು ಬಳ್ಳಿ ಮತ್ತು ಸುಮಾರು ೨೦ ಸಾವಿರ ಕಿತ್ತಳೆ ಗಿಡಗಳನ್ನು ಬೆಳೆಸಲಾಗಿವೆೆ. ಸೆ. ೧೬ ರಿಂದ ರೈತರಿಗೆ ಗಿಡಗಳನ್ನು ವಿತರಣೆ ಮಾಡಲಾಗುವುದು. ರೈತರು ಇದನ್ನು ಪಡೆಯಲು ಆರ್.ಟಿ.ಸಿ. ಮತ್ತು ಆಧಾರ್ ಕಾರ್ಡ್ ಹೊಂದಿ ಸಂಬAಧಿಸಿದ ಇಲಾಖೆಯಿಂದ ಅನುಮತಿಯ ಪತ್ರದೊಂದಿಗೆ ಆಗಮಿಸಿ ಗಿಡಗಳನ್ನು ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತಮ ತಳಿಯ ಗಿಡಗಳಾಗಿದ್ದು, ಇದರಿಂದ ಬೆಳೆಗಾರರು ಉತ್ತಮ ಫಸಲನ್ನು ಪಡೆಯಲು ಸಹಕಾರಿ. ಅದರಂತೆ ಉತ್ತಮ ಬೀಜದಿಂದ ಕಿತ್ತಳೆ ಗಿಡಗಳನ್ನು ಬೆಳೆಸಲಾಗಿದ್ದು, ರೈತರು ಇದನ್ನು ಪಡೆದುಕೊಳ್ಳಬಹುದಾಗಿದೆ. ಸಸ್ಯ ಕ್ಷೇತ್ರದಲ್ಲಿ ಗಿಡಗಳನ್ನು ಖಾಸಗಿಯಾಗಿಯು ಮಾರಾಟ ಮಾಡಲಾಗುತ್ತಿದ್ದು, ಒಳ್ಳೆಮೆಣಸು ಬಳ್ಳಿಗಳು ಒಂದು ಕಟಿಂಗ್ಸ್ಗೆ ೫.೫೦ ರೂ ಮತ್ತು ಕಿತ್ತಳೆ ಗಿಡವೊಂದಕ್ಕೆ ೧೦ ರೂ.ಗಳನ್ನು ಪಾವತಿಸಿ ಗಿಡಗಳನ್ನು ಪಡೆಯಬಹುದಾಗಿದೆ ಎಂದು ಸಸ್ಯಕ್ಷೇತ್ರದ ಉಪನಿರ್ದೇಶಕ ಪ್ರಮೋದ್ ತಿಳಿಸಿದ್ದಾರೆ.