ಶನಿವಾರಸಂತೆ, ಆ. ೨೭: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ರೋಟರಿ ಸಂಸ್ಥೆ ಹಾಗೂ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ವಿಶ್ವ ಜೀವವೈವಿಧ್ಯ ದಿನಾಚರಣೆ ಮತ್ತು ವಿಶ್ವ ಆನೆಗಳ ದಿನದ ಪ್ರಯುಕ್ತ ಗಿಡ ನೆಡಲಾಯಿತು.
ರೋಟರಿ ಸಂಸ್ಥೆ ಕಾರ್ಯದರ್ಶಿ ಎಂ.ಎಸ್. ವಂಸತ್ ಮತ್ತು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದನ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಮಾತನಾಡಿ, ಪ್ರಕೃತಿಯಲ್ಲಿ ವೈವಿಧ್ಯಮಯ ಸಸ್ಯರಾಶಿಗಳಿದ್ದು, ಅರಣ್ಯ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಪ್ರತೀಕವಾಗಿ ಜೀವವೈವಿಧ್ಯ ದಿನವನ್ನು ಆಚರಿಸಲಾಗುತ್ತಿದೆ ಎಂದರು. ರೋಟರಿ ಅಧ್ಯಕ್ಷ ಹೆಚ್.ಪಿ. ಮೋಹನ್ ಮಾತನಾಡಿದರು.
ಕಾರ್ಯದರ್ಶಿ ಹೆಚ್.ಎಸ್. ವಸಂತ್, ವಲಯ ಸೇನಾನಿ ಟಿ.ಆರ್. ಪುರುಷೋತ್ತಮ್, ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ಅರಣ್ಯ ರಕ್ಷಕ ಜಯಕುಮಾರ್, ಸಿಬ್ಬಂದಿ ಕಾರ್ತಿಕ್, ಹಿರಿಯ ಆರೋಗ್ಯ ಸಹಾಯಕಿ ಸರಸ್ವತಿ, ಆರೋಗ್ಯ ನಿರೀಕ್ಷಕ ಗಿರೀಶ್, ನಿರ್ದೇಶಕರಾದ ಎ.ಡಿ. ಮೋಹನ್, ಕುಮಾರ್, ವಿಜಯೇಂದ್ರ, ಎಸ್.ಆರ್. ಮಧು, ಶಿವಾನಂದ್ ಹಾಗೂ ಸದಸ್ಯರು ಹಾಜರಿದ್ದರು.