ಮಡಿಕೇರಿ, ಆ. ೨೬: ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ೨೦೧೯-೨೦ನೇ ಸಾಲಿನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರಿಗೆ ಕೊಡಗು ಕಾವೇರಿ ಕೋಳಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಎನ್.ಎ. ರವಿ ಬಸಪ್ಪರವರು ಕೋಳಿ ಸಾಕಾಣಿಕೆ ಮಾಡುತ್ತಿರುವವರಿಗೆ ತಲಾ ೫ ಕೋಳಿಗಳನ್ನು ವಿತರಣೆ ಮಾಡಿದರು. ಮಡಿಕೇರಿ ತಾಲೂಕಿಗೆ ೧೭೦, ವೀರಾಜಪೇಟೆ ತಾಲೂಕಿಗೆ ೨೬೦ ಮತ್ತು ಸೋಮವಾರಪೇಟೆ ತಾಲೂಕಿಗೆ ೨೫೩ರಂತೆ ಕೋಳಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಪಶು ವೈದ್ಯಾಧಿಕಾರಿಗಳಾದ ಪ್ರಸನ್ನ ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.