*ಗೋಣಿಕೊಪ್ಪ, ಆ. ೨೬: ೨೦೨೧-೨೨ನೇ ಸಾಲಿನ ಗೋಣಿಕೊಪ್ಪ ಆಟೋ ಮಾಲೀಕರ ಹಾಗೂ ಚಾಲಕ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್. ಜಿಮ್ಮ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ವಿನು ಆಯ್ಕೆಯಾಗಿದ್ದಾರೆ.

ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಚುನಾವಣೆ ಪ್ರಕ್ರಿಯೆ ಮೂಲಕ ಈ ಆಯ್ಕೆ ನಡೆದಿದೆ.

ಮೂರು ಬಾರಿ ನಿರ್ದೇಶಕರಾಗಿ, ಎಂಟು ವರ್ಷ ಉಪಾಧ್ಯಕ್ಷರಾಗಿ ಹಾಗೂ ಮೂರು ವರ್ಷಗಳು ಅಧ್ಯಕ್ಷರಾಗಿ ಸಂಘದ ಸಾರಥ್ಯ ವಹಿಸಿದ್ದ ಜಿಮ್ಮ ಸುಬ್ಬಯ್ಯ ಅವರು ನಾಲ್ಕನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ವಿ.ಎಸ್. ರಾಜಬಾಬು (ನಿತ್ಯಾನಂದನ್), ಸಹಕಾರ್ಯದರ್ಶಿ ಕೆ.ವಿ. ಸುರೇಶ್, ಕೋಶಾಧಿಕಾರಿ ಪಿ.ಪಿ. ರಂಜು ಹಾಗೂ ನಿರ್ದೇಶಕರುಗಳಾಗಿ ಕೆ.ಡಿ. ರಾಜೀವ, ವೈ.ಬಿ. ಗಣೇಶ, ಎನ್.ಸಿ. ಕುಟ್ಟಪ್ಪ, ಕ್ರಿಸ್ಟೋಫರ್, ಜೆ.ಪಿ. ವಸಂತ, ನಿಸಾರ್ ಅಹಮ್ಮದ್, ಹೆಚ್.ಬಿ. ರಂಜಿತ್, ಹೆಚ್.ಆರ್. ಮೂರ್ತಿ, ಸಿ.ಸಿ. ಕಿರಣ್, ಟಿ.ಎಂ. ಸಂತೋಷ್, ಹೆಚ್.ಈ. ರಾಜ, ಸಿ.ಸಿ. ಚಂದ್ರ, ಜೆ. ರವಿ, ರಂಗ ಇವರುಗಳನ್ನು ಮುಂದಿನ ಆಡಳಿತ ಮಂಡಳಿಯಾಗಿ ಸದಸ್ಯರು ಚುನಾವಣೆಯ ಮೂಲಕ ಆಯ್ಕೆ ಮಾಡಿದ್ದಾರೆ.