ಮಡಿಕೇರಿ, ಆ. ೨೬: ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಓಣಂ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಶಾಲಾ ಒಳಾವರಣದಲ್ಲಿ ಆಕರ್ಷಣೀಯ ರಂಗೋಲಿಯನ್ನು ಹೂವುಗಳಿಂದ ಸೃಷ್ಟಿಸಲಾಗಿತ್ತು. ಶಾಲಾ ಸಿಬ್ಬಂದಿ ವರ್ಗದಿಂದ ನೃತ್ಯ ಕಾರ್ಯಕ್ರಮ ಜರುಗಿತು. ಪ್ರಾಂಶುಪಾಲ ಬೆನ್ನಿ ಕುರಿಯಕೋಸ್ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಆನ್‌ಲೈನ್‌ನಲ್ಲಿ ಮಾತನಾಡಿ ಹಬ್ಬದ ಶುಭ ಹಾರೈಕೆ ನೀಡಿದರು.