*ಗೋಣಿಕೊಪ್ಪ, ಆ. ೨೬: ಕೊರೊನಾ ಸಂಕಷ್ಟದಿAದ ಪ್ರತಿ ಯೊಬ್ಬರು ಬಹಳಷ್ಟು ಕುಟುಂಬಗಳು ಇಂದಿಗೂ ಆರ್ಥಿಕ ಸ್ಥಿತಿಯಿಂದ ಬಳಲುತ್ತಿದ್ದಾರೆ ಎಂಬುವುದನ್ನು ಪರಿಗಣಿಸಿದ ಕಾರ್ಮಿಕ ಇಲಾಖೆ ೨೫೦೦ಕ್ಕೂ ಹೆಚ್ಚು ಅಸಂಘಟಿತ ವರ್ಗದವರಿಗೆ ಕಿಟ್ ವಿತರಿಸಲು ಮುಂದಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ತಿಳಿಸಿದರು.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆದ ತಾಲೂಕಿನ ನೋಂದಾಯಿತ ಅಸಂಘಟಿತ ೧೧ ವಲಯದ ಕಾರ್ಮಿಕರಿಗೆ ಆಹಾರ ದಾನ್ಯಗಳ ಕಿಟ್‌ಗಳನ್ನು ವಿತರಿಸಿದರು. ಪ್ರತಿಯೊಬ್ಬರು ಕೊರೊನಾ ದಿನಗಳಲ್ಲಿ ಕೆಲಸ ಕಾರ್ಯಗಳಿಲ್ಲದೇ ಕಂಗೆಟ್ಟಿದ್ದ ಪರಿಸ್ಥಿತಿ ಎದುರಿಸಿದ್ದಾರೆ. ಇಂತಹ ಸಮುದಾಯವನ್ನು ಗಣನೆಗೆ ತೆಗೆದುಕೊಂಡು ಕಾರ್ಮಿಕ ಇಲಾಖೆಯ ವತಿಯಿಂದ ಆಹಾರ ಧಾನ್ಯಗಳನ್ನು ವಿತರಿಸಿ ಅಲ್ಪಮಟ್ಟಿಗೆ ಚೇತರಿಕೆಗೆ ಕಾರಣವಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸುವ ಮೂಲಕ ಕೊರೊನಾ ನಿಯಮ ಪಾಲನೆಯನ್ನು ಮಾಡಬೇಕಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ ಮಾತನಾಡಿ, ಈಗಾಗಲೇ ಎದುರಾಗಿರುವ ಸಂಕಷ್ಟಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವುದು ಪ್ರತಿಯೊಬ್ಬರ ಕಾಳಜಿ ಮತ್ತು ಕರ್ತವ್ಯವಾಗಿದೆ ಎಂದು ಹೇಳಿದರು.

ತಾಲೂಕು ಬಗರ್‌ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಚೇತನ್, ಸದಸ್ಯರುಗಳಾದ ಸೌಮ್ಯಬಾಲು, ರತಿ ಅಚ್ಚಪ್ಪ, ಗೀತಾ, ಹಕೀಂ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಕಾರ್ಮಿಕ ಅಧಿಕಾರಿ ಅನಿಲ್ ಸೇರಿದಂತೆ ಅಸಂಘಟಿತ ಕಾರ್ಮಿಕರು ಹಾಜರಿದ್ದರು.