ಕಾವೇರಿ ಸೇನೆಯ ರವಿ ಚಂಗಪ್ಪ ಎಂಬ ವ್ಯಕ್ತಿ ಪತ್ರಿಕಾಗೋಷ್ಠಿಯಲ್ಲಿ ನನ್ನ ಮತ್ತು ನನ್ನ ಸಹೋದರರಾದ ಬಿ.ಜಿ.ಅನಂತಶಯನ ಹಾಗೂ ಜಿ.ಚಿದ್ವಿಲಾಸ್ ಅವರ ಮೇಲೆ ತಲಕಾವೇರಿ ಕ್ಷೇತ್ರದಲ್ಲಿ ಹಸ್ತಕ್ಷೇಪ ಕುರಿತು ಆರೋಪ ಹೊರಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿಯೂ ಅಪಪ್ರಚಾರ ನಡೆಸಿದ್ದಾರೆ. ಕೊಡಗಿನ ಜನತೆಗೆ ತಪ್ಪು ಸಂದೇಶ ರವಾನೆಯಾಗಬಾರದೆಂದು ಈ ಕೆಳಗಿನ ಸತ್ಯ ಮಾಹಿತಿಯನ್ನು ಈ ಮೂಲಕ ನೀಡುತ್ತಿದ್ದೇನೆ.
ಜೀರ್ಣೋದ್ಧಾರದ ಹಿನ್ನೆಲೆ
ತಲಕಾವೇರಿ ಕ್ಷೇತ್ರದಲ್ಲಿನ ಮಹಾಗಣಪತಿ, ಅಗಸ್ತೆö್ಯÃಶ್ವರ ದೇವಾಲಯಗಳು ಶಿಥಿಲಗೊಂಡಿದ್ದವು. ಪವಿತ್ರ ಕುಂಡಿಕೆಯ ಶಿಲೆಗಳು ಶಿಥಿಲಗೊಂಡಿದ್ದವು. ಆ ಸಂದರ್ಭ ಭಕ್ತಾದಿಗಳು ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರ ವಾಗುವ ಅನಿವಾರ್ಯತೆಯಿದೆ ಎಂದು ದನಿ ಎತ್ತಿದ್ದರು. ಏಕೆಂದರೆ, ಯಾವದೇ ಮಹಾನ್ ಕ್ಷೇತ್ರಗಳ ದೇವಾಲಯಗಳಲ್ಲಿ ಕಾವೇರಿ ಸೇನೆಯ ರವಿ ಚಂಗಪ್ಪ ಎಂಬ ವ್ಯಕ್ತಿ ಪತ್ರಿಕಾಗೋಷ್ಠಿಯಲ್ಲಿ ನನ್ನ ಮತ್ತು ನನ್ನ ಸಹೋದರರಾದ ಬಿ.ಜಿ.ಅನಂತಶಯನ ಹಾಗೂ ಜಿ.ಚಿದ್ವಿಲಾಸ್ ಅವರ ಮೇಲೆ ತಲಕಾವೇರಿ ಕ್ಷೇತ್ರದಲ್ಲಿ ಹಸ್ತಕ್ಷೇಪ ಕುರಿತು ಆರೋಪ ಹೊರಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿಯೂ ಅಪಪ್ರಚಾರ ನಡೆಸಿದ್ದಾರೆ. ಕೊಡಗಿನ ಜನತೆಗೆ ತಪ್ಪು ಸಂದೇಶ ರವಾನೆಯಾಗಬಾರದೆಂದು ಈ ಕೆಳಗಿನ ಸತ್ಯ ಮಾಹಿತಿಯನ್ನು ಈ ಮೂಲಕ ನೀಡುತ್ತಿದ್ದೇನೆ.
ಜೀರ್ಣೋದ್ಧಾರದ ಹಿನ್ನೆಲೆ
ತಲಕಾವೇರಿ ಕ್ಷೇತ್ರದಲ್ಲಿನ ಮಹಾಗಣಪತಿ, ಅಗಸ್ತೆö್ಯÃಶ್ವರ ದೇವಾಲಯಗಳು ಶಿಥಿಲಗೊಂಡಿದ್ದವು. ಪವಿತ್ರ ಕುಂಡಿಕೆಯ ಶಿಲೆಗಳು ಶಿಥಿಲಗೊಂಡಿದ್ದವು. ಆ ಸಂದರ್ಭ ಭಕ್ತಾದಿಗಳು ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರ ವಾಗುವ ಅನಿವಾರ್ಯತೆಯಿದೆ ಎಂದು ದನಿ ಎತ್ತಿದ್ದರು. ಏಕೆಂದರೆ, ಯಾವದೇ ಮಹಾನ್ ಕ್ಷೇತ್ರಗಳ ದೇವಾಲಯಗಳಲ್ಲಿ ಮಟ್ಟದಲ್ಲಿ ರಾಜ್ಯ ಮುಜರಾಯಿ ಇಲಾಖೆ ನೇಮಕಗೊಳಿಸುತ್ತಿತ್ತು. ಆ ಪೈಕಿ ಒಬ್ಬರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗುತ್ತಿತ್ತು. ಅದರಂತೆ ಒಮ್ಮೆ ಹಿರಿಯರಾದ ಮಿಟ್ಟು ಚಂಗಪ್ಪ ಅವರು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೊಡಗು ಜಿಲ್ಲೆಯ ಮುಜರಾಯಿ ಸಮಿತಿಯಲ್ಲಿ ಓರ್ವ ಸದಸ್ಯನಾಗಿ ನನ್ನನ್ನು ಸೇರಿಸಿದರು. ಮಣವಟ್ಟೀರ ಮಂದಣ್ಣ (ಈಗ ದಿವಂಗತರು) ಅವರು ಉಪಾಧ್ಯಕ್ಷರಾದರು. ಆಗ ರಾಮಚಂದ್ರ ಅವರು ಜಿಲ್ಲಾಧಿಕಾರಿಯಾಗಿದ್ದರು. ಆ ಸಂದರ್ಭ ಜಿಲ್ಲಾ ಮುಜರಾಯಿ ಸಮಿತಿಯಲ್ಲಿ ತಲಕಾವೇರಿ ಜೀರ್ಣೋದ್ಧಾರದ ಕುರಿತು ಚರ್ಚೆಯಾಯಿತು. ಆಗ ದೇವಾಲಯಗಳಲ್ಲಿ ಬಹು ಕಡಿಮೆ ಆದಾಯವಿದ್ದುದರಿಂದ ಹಾಗೂ ಈ ಬಗ್ಗೆ ಜಿಲ್ಲೆಯ ಪ್ರಮುಖರನ್ನು ಸೇರಿಸಿ ಹೊಸ ಸಮಿತಿಯೊಂದನ್ನು ರಚಿಸಿ ಬಳಿಕ ಈ ಕಾರ್ಯಕ್ಕೆ ಇಳಿಯುವದು ಒಳಿತು ಎಂದು ಅಭಿಪ್ರಾಯಕ್ಕೆ ಬರಲಾಯಿತು. ಆದರೆ, ಅಷ್ಟರಲ್ಲಿ ಜಿಲ್ಲಾ ಮುಜರಾಯಿ ಸಮಿತಿಗಳು ವಿಸರ್ಜನೆಗೊಂಡು ಸರಕಾರವು
ಆಯಾ ದೇವಾಲಯಗಳಿಗೆ ಪ್ರತ್ಯೇಕ ಸಮಿತಿಗಳನ್ನು ರಚಿಸುವ ಕಾನೂನು ಜಾರಿಗೊಳಿಸಿದುದರಿಂದ ಕೊಡಗು
ಜಿಲ್ಲಾ ಮುಜರಾಯಿ ಸಮಿತಿಯೂ ವಿಸರ್ಜನೆಗೊಂಡಿತು.
ಕೊಡಗು ಏಕೀಕರಣ ರಂಗದ ಪಾತ್ರ
ಅಷ್ಟರಲ್ಲಾಗಲೇ ಕೊಡಗಿನ ಅನೇಕ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸುತ್ತಿದ್ದ ಕೊಡಗು ಏಕೀಕರಣ ರಂಗವು ಕಣಕ್ಕಿಳಿಯಿತು. ಪ್ರಮುಖರುಗಳಾದ ಮಾತಂಡ ಮೊಣ್ಣಪ್ಪ, ತೇಲಪಂಡ ಪ್ರಮೋದ್ ಸೋಮಯ್ಯ, ಸುಗುಣ ಮುತ್ತಣ್ಣ, ಅಜ್ಜಿನಂಡ ತಮ್ಮು ಪೂವಯ್ಯ, ಜಿ. ಚಿದ್ವಿಲಾಸ್, ಶ್ರೀಧರ್ ನೆಲ್ಲಿತ್ತಾಯ, ಮಂದಪAಡ ಸತೀಶ್, ಬಿದ್ದಾಟಂಡ ಎಸ್. ತಮ್ಮಯ್ಯ ಮೊದಲಾದವರು ಸೇರಿ ಈ ಬಗ್ಗೆ ನಿರ್ಧಾರ ತಾಳಿದರು. ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಭೇಟಿಯಾಗಲು ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ
ಕೆ. ಪಿ.ಚಂದ್ರಕಲಾ
(ಮೊದಲ ಪುಟದಿಂದ) ಜವಾಬ್ದಾರಿಕೆ ವಹಿಸಿಕೊಂಡರು. ಕೊಡಗು ಏಕೀಕರಣ ರಂಗದ ನಿಯೋಗವು ಮುಖ್ಯಮಂತ್ರಿಯಾಗಿದ್ದ ಎಸ್. ಎಂ.ಕೃಷ್ಣ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ತಲಕಾವೇರಿ-ಭಾಗಮಂಡಲ ಜೀರ್ಣೋದ್ಧಾರದ ಅವಶ್ಯಕತೆ ಕುರಿತು ಮನದಟ್ಟು ಮಾಡಿತು. ಪ್ರಾರಂಭಿಕವಾಗಿ ರೂ. ೧೦ ಕೋಟಿ ಅಗತ್ಯದ ಕುರಿತು ಚಂದ್ರಕಲಾ ನೇತೃತ್ವದ ನಿಯೋಗ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿಯವರು ಅದಕ್ಕೆ ಸಮ್ಮತಿಯಿತ್ತರು.
ಸಾರ್ವಜನಿಕ ಸಮಿತಿ ರಚನೆ
ಇದಾದ ಬಳಿಕ ಸುಮಾರು ೨೦೦೨ ರಲ್ಲಿ ಸರಕಾರವು ಭಾಗಮಂಡಲ-ತಲಕಾವೇರಿ ಸಾರ್ವಜನಿಕ ಜೀರ್ಣೋದ್ಧಾರ ಸಮಿತಿಯೊಂದನ್ನು ರಚಿಸಿತು. ಆಗ ಮುಜರಾಯಿ ಸಚಿವರಾಗಿ ಕೊಡಗಿನ ಸುಮಾ ವಸಂತ್, ಅಬಕಾರಿ ಸಚಿವರಾಗಿ ಎಂ.ಎA. ನಾಣಯ್ಯ, ಮೂಲ ಸೌಕಾರ್ಯಾಭಿವೃದ್ಧಿ ಸಚಿವರಾಗಿ ಟಿ.ಜಾನ್ ಇದ್ದರು. ರಾಜ್ಯ ಮುಜರಾಯಿ ಖಾತೆ ಸಚಿವರಾಗಿದ್ದ ಸುಮಾ ವಸಂತ್ ಅವರ ಆಸಕ್ತಿಯಿಂದ ಈ ಸಮಿತಿಯ ಅಧ್ಯಕ್ಷರನ್ನಾಗಿ ಮಾತಂಡ ಮೊಣ್ಣಪ್ಪ ಅವರನ್ನು ನೇಮಿಸಲಾಯಿತು. ಅಲ್ಲದೆ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಯಾಗಿ ಜಿಲ್ಲಾ ಉಪವಿಭಾಗಾಧಿಕಾರಿಯನ್ನು (ಆಗ ಟೇಕ್ರಾಜ್ ಅವರಿದ್ದರು) ಪದನಿಮಿತ್ತ ಕ್ರಮದಲ್ಲಿ ನೇಮಿಸಿತು. ಅಲ್ಲದೆ, ಜಿಲ್ಲೆಯ ಅನೇಕ ಸಾರ್ವಜನಿಕ ಪ್ರಮುಖರನ್ನು ಪದಾಧಿಕಾರಿಗಳು ಹಾಗೂ ಸದಸ್ಯರುಗಳನ್ನಾಗಿ ನೇಮಿಸಲಾಯಿತು. ಆ ಸಮಿತಿಯಲ್ಲಿ ನಾನೂ ಓರ್ವ ಸದಸ್ಯನಾಗಿದ್ದೆ. ಈ ಸಮಿತಿಯು ಹಲವು ಬಾರಿ ಸಭೆ ನಡೆಸಿ ಪ್ರಾರಂಭಿಕವಾಗಿ ಸಾರ್ವಜನಿಕ ಉದಾರ ದಾನಿ ಭಕ್ತಾದಿಗಳಿಂದ ಹಣ ಸಂಗ್ರಹಿಸಿ ಜೀರ್ಣೋದ್ಧಾರ ನಡೆಸಲು ತೀರ್ಮಾನಿಸಿ ಖ್ಯಾತ ಜ್ಯೋತಿಶ್ಶಾಸ್ತçಜ್ಞ ಕೇರಳದ ವಾರಿಯರ್ ಎಂಬವರ ಮೂಲಕ ಅಷ್ಟಮಂಗಲ ಪ್ರಶ್ನೆ ಕೇಳಲಾಯಿತು. ಈ ಹಿಂದೆ ಕ್ಷೇತ್ರದಲ್ಲಿ ಅನೇಕ ಬಾರಿ ಪ್ರಶ್ನೆಗಳನ್ನು ಹಲವು ಸಮಿತಿಯವರು ಕೇಳಿದ್ದರೂ ಯಾವದೇ ಪರಿಹಾರ ಕಾರ್ಯಗಳನ್ನು ನಡೆಸದೆ ಕ್ಷೇತ್ರವು ಅತ್ಯಂತ ಕ್ಲಿಷ್ಟಸ್ಥಿತಿಯಲ್ಲಿತ್ತು. ಉದಾಹರಣೆಗೆ ಭಾರೀ ವಾಹನವೊಂದು ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣದಲ್ಲಿ ಚಲಿಸುವಾಗ ತಲಕಾವೇರಿಯಲ್ಲಿ ಕೆಲವು ಹಸುಗಳು ಸಾವಿಗೀಡಾಗಿದ್ದವು. ಉತ್ತರ ಭಾರತದಿಂದ ಬಂದಿದ್ದ ಸಾಧು ಸನ್ಯಾಸಿಯೊಬ್ಬರಿಗೆ ಸ್ಥಳೀಯರೊಬ್ಬರು ಕಿರುಕುಳ ನೀಡಿ ಅವರು ಇದರ ವಿರುದ್ಧ ಕಾವೇರಿ ಸನ್ನಿಧಿಯಲ್ಲಿ ನೊಂದು ನೋವು ತೋಡಿಕೊಂಡು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ, ತಲಕಾವೇರಿಯಲ್ಲಿ ವಾಸಿಸುತ್ತಿದ್ದ ವಿಶೇಷ ನಾಗವೊಂದನ್ನು ಯಾರೋ ಕೊಂದಿದ್ದು ಅದರ ದೋಷ ತೀವ್ರ ದುಷ್ಪರಿಣಾಮವುಂಟುಮಾಡಿತ್ತು. ಹೀಗೆ ಅನೇಕ ದೋಷಗಳು ಕ್ಷೇತ್ರದ ಧಾರ್ಮಿಕ ಮ್ಲಾನತೆಗೆ ಕಾರಣವಾಗಿದ್ದವು.
ಈ ಎಲ್ಲ ಅನೇಕ ಪ್ರಾರಂಭಿಕ ದೋಷಗಳಿದ್ದು, ಮಾತಂಡ ಮೊಣ್ಣಪ್ಪ ಅವರ ನೇತೃತ್ವದಲ್ಲಿ ವಿಘ್ನ ಪರಿಹಾರ ಉಪ ಸಮಿತಿಗೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದರು. ಎಲ್ಲರ ಸಹಕಾರದಿಂದ ಪರಿಹಾರ ಕಾರ್ಯವನ್ನು ಸುಸೂತ್ರವಾಗಿ ಆಗ ನೆರವೇರಿಸಲು ನನಗೆ ಸಾಧ್ಯವಾಗಿತ್ತು. ನನ್ನೊಂದಿಗೆ ಕಂಬೀರAಡ ನಂಜಪ್ಪ, (ದಿವಂಗತರು) ಎಸ್. ಎಸ್. ಸಂಪತ್ ಕುಮಾರ್, ಪ್ರಶಾಂತಾಚಾರ್, ಎದುರ್ಕುಳ ಶಂಕರ ನಾರಾಯಣ ಭಟ್ (ದಿವಂಗತರು), ಪಿ.ಜಿ.ರಾಧಾಕೃಷ್ಣ, ಟಿ.ಎಸ್. ನಾರಾಯಣಾಚಾರ್(ದಿವಂಗತರು), ಶ್ರೀಮತಿ ಪೊನ್ನೇಟಿ ಶಾಂತಿ, ಹೆಚ್. ಡಿ. ಜೋಯಪ್ಪ (ದಿವಂಗತರು),
ಹೆಚ್. ಜೆ. ಸತೀಶ್ ಕುಮಾರ್, ರವೀಂದ್ರ ಹೆಬ್ಬಾರ್, ಕೆ.ಟಿ. ರಮೇಶ್, ಟಿ.ಆರ್. ವಿಠಲಾಚಾರ್, ಅನಂತ್ ಭಟ್ ಮೊದಲಾದವರು ಕೈ ಜೋಡಿಸಿದರು. ಇವರೆಲ್ಲರ ಸಹಕಾರದಿಂದ ಸುಬ್ರಹ್ಮಣ್ಯ, ಉಡುಪಿ, ಕೊಡಚಾದ್ರಿ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ತೆರಳಿ ಪರಿಹಾರ ನಡೆಸಲು ಸಾಧ್ಯವಾಯಿತು. ಕ್ಷೇತ್ರ ತಂತ್ರಿಯವರಾದ ನೀಲೇಶ್ವರ ಪದ್ಮನಾಭ ತಂತ್ರಿಯವರು (ಹಿರಿಯರು- ಈಗ ದಿವಂಗತರು) ತಲಕಾವೇರಿಯಲ್ಲಿ ಅನೇಕ ಹೋಮ ಹವನಾದಿ ಪರಿಹಾರ ಕಾರ್ಯಗಳನ್ನು ನೆರವೇರಿಸಿದ್ದು ಪುತ್ತೂರಿನ ಜ್ಯೋತಿಷಿ ಗೋಪಾಲಕೃಷ್ಣ ಅವರೂ ಸಹಕರಿಸಿದ್ದರು. ಮಂಗಳೂರು ಸನಿಹ ಮರಕಡದಲ್ಲಿರುವ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಹಾಗೂ ಬೆಂಗಳೂರು ಶ್ರೀ ರಾಜರಾಜೇಶ್ವರಿ ಸಂಸ್ಥಾನದ ಶ್ರೀ ಜಯೇಂದ್ರ ಮಹಾಸ್ವಾಮೀಜಿ ಮೊದಲಾದ ಅನೇಕ ಗುರುಪೀಠಗಳ ಸಹಕಾರ, ಮಾರ್ಗದರ್ಶನವೂ ದೊರಕಿತ್ತು.
ಮುಖ್ಯಮಂತ್ರಿ ಭೇಟಿ-ನಿಗಮದ ಪ್ರವೇಶ
ಈ ನಡುವೆ ದಕ್ಷಿಣ ಕನ್ನಡದ ಖ್ಯಾತ ಶಿಲ್ಪಿ ಮುನಿಯಂಗಳ ಪ್ರಸಾದ್ ಅವರ ಮೂಲಕ ಮೊಣ್ಣಪ್ಪ ಅವರ ನೇತೃತ್ವದ ಜೀರ್ಣೋದ್ಧಾರ ಸಮಿತಿಯು ಆದ್ಯತೆಯಲ್ಲಿ ನೂತನ ಶಿಲಾ ಗರ್ಭಗುಡಿ ನಿರ್ಮಾಣದ ಮೂಲಕ ಕಾರ್ಯಾರಂಭ ಮಾಡುವ ಮುನ್ನ ಬಾಲಾಲಯ ಸ್ಥಾಪನೆಯಾಯಿತು. ಸಿಮೆಂಟ್ ರಹಿತ ಶಿಲಾ ಗರ್ಭಗುಡಿಯ ನಿರ್ಮಾಣಕ್ಕೆ ತಯಾರಾಯಿತು. ಆದರೆ, ಅಂದಿನ ಸ್ಥಿತಿಯಲ್ಲಿ ಕೊಡಗಿನಲ್ಲಿ ಭಾರೀ ಮೊತ್ತದ ಹಣ ಸಂಗ್ರಹಿಸಿ ಜೀರ್ಣೋದ್ಧಾರ ಕಾರ್ಯ ನಡೆಸುವದು ಅತ್ಯಂತ ಕಠಿಣಕರವಾದುದು ಎಂದು ಸಮಿತಿಗೆ ಮನವರಿಕೆಯಾಯಿತು. ಹೇಗಿದ್ದರೂ ಕೊಡಗು ಏಕೀಕರಣ ರಂಗದ ವತಿಯಿಂದ ಮುಖ್ಯಮಂತ್ರಿಯವರಿಗೆ ಜೀರ್ಣೋದ್ಧಾರದ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಸಮಿತಿಯು ಸಭೆಯೊಂದನ್ನು ನಡೆಸಿ ಸರಕಾರವೇ ಜೀರ್ಣೊದ್ಧಾರ ಕಾರ್ಯ ನಡೆಸಲು ಕೋರುವಂತೆ ನಿರ್ಧರಿಸಲಾಯಿತು. ಸಾಮಾನ್ಯವಾಗಿ ಸರಕಾರದ ಮುಜರಾಯಿ ಸಮಿತಿ ಅಧೀನದ ದೇವಾಲಯಗಳನ್ನು ಸರಕಾರವೇ ಜೀರ್ಣೋದ್ಧಾರ ಮಾಡುವದರಿಂದ ಹಾಗೂ ಸಾರ್ವಜನಿಕವಾಗಿ ಭಾರೀ ಮೊತ್ತದ ಹಣ ಸಂಗ್ರಹಾತಿ ಕಷ್ಟಸಾಧ್ಯವಾದುದರಿಂದ ಮೊಣ್ಣಪ್ಪ್ಪ ಅವರ ನೇತೃತ್ವದ ಜೀರ್ಣೋದ್ಧಾರ ಸಮಿತಿಯು ಆಗ ಮುಜರಾಯಿ ಸಚಿವರೂ ಆಗಿದ್ದ ಸುಮಾ ವಸಂತ್ ಅವರಲ್ಲಿ ಮನವಿ ಮಾಡಿ ಸರಕಾರವೇ ಜೀರ್ಣೋದ್ಧಾರ ಮಾಡುವ ಬಗ್ಗೆ ಕೋರಿಕೆಯಿಟ್ಟಿತು. ಆಗ ಎಂ.ಎA. ನಾಣಯ್ಯ ಹಾಗೂ ಟಿ. ಜಾನ್ ಅವರುಗಳೂ ಸಚಿವರುಗಳಾಗಿದ್ದರು. ಈ ಮೂವರು ಸಚಿವರ ನೇತೃತ್ವದಲ್ಲಿ ಹಾಗೂ ಸಚಿವೆ ಸುಮಾ ವಸಂತ್ ಅವರ ಕೋರಿಕೆ ಮೇರೆಗೆ ಮಾಜಿ ಸಚಿವರಾಗಿದ್ದ ಎಂ.ಸಿ. ನಾಣಯ್ಯ ಅವರ ಮುಂದಾಳತ್ವದಲ್ಲಿ ಜೀರ್ಣೋದ್ಧಾರ ಸಮಿತಿಯ ನಿಯೋಗವು ಬೆಂಗಳೂರಿಗೆ ತೆರಳಿ ಆಗಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿತು. ಆ ಸಂದರ್ಭ ಸಮಿತಿಯ ಪರವಾಗಿ
ಎಂ. ಸಿ. ನಾಣಯ್ಯ ಅವರು ಕರ್ನಾಟಕ ಮತ್ತು ದೇಶದಲ್ಲಿ ಕಾವೇರಿಯ ಮಹತ್ವದ ಕುರಿತು ವಿವರವಾಗಿ ಮಾತನಾಡಿದರು. ಮಳೆಗಾಲದಲ್ಲಿ ಕೊಡಗಿನ ಜನರು ಸಂಕಷ್ಟ ಅನಭವಿಸುತ್ತಾರೆ. ಆದರೆ, ಕಾವೇರಿ ಮೂಲಕ ರಾಜ್ಯಕ್ಕೆ, ಇತರ ರಾಜ್ಯಗಳಿಗೆ ಅತ್ಯಧಿಕ ಪ್ರಯೋಜನವಿದೆ. ಕಾವೇರಿಯ ಉಗಮ ಸ್ಥಾನ ಹಾಗೂ ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರವನ್ನು ಸರಕಾರವೇ ಮಾಡಬೇಕಾದ ಜವಾಬ್ದಾರಿಕೆ ಕುರಿತು ಗಮನಕ್ಕೆ ತಂದರು. ತಕ್ಷಣವೇ ಮುಖ್ಯಮಂತ್ರಿ ಕೃಷ್ಣ ಅವರು ಅಂದಾಜು ರೂ. ೧೭ ಕೋಟಿ ಯೋಜನೆಗೆ ಸಮ್ಮತಿ ನೀಡಿ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವನ್ನು ರಾಜ್ಯದ ಕಾವೇರಿ ನೀರಾವರಿ ನಿಗಮಕ್ಕೆ ಒಪ್ಪಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ತಿಮ್ಮೇಗೌಡ ಅವರು ತಕ್ಷಣವೇ ಪ್ರತಿಕ್ರಿಯಿಸಿ ಆ ಕಾವೇರಿ ಮಾತೆ ಕರ್ನಾಟಕದ ಜನತೆಯ ಜೀವ ನಾಡಿಯಾಗಿದ್ದು ಈ ಯೋಜನೆಗೆ ಸರ್ವ ರೀತಿಯ ಸಹಕಾರದ ಭರವಸೆ ನೀಡಿದರು.
ಆಗ ಕೊಡಗಿನ ತಲಕಾವೇರಿಯವರೇ ಆದ ರಾಜ್ಯ ಲೋಕೋಪಯೋಗಿ ನಿವೃತ್ತ ಇಂಜಿನಿಯರ್ ಟಿ.ಡಿ. ಮನಮೋಹನ್ ಅವರಿಗೆ ಜೀರ್ಣೋದ್ಧಾರ ಕಾರ್ಯದ ಮೇಲುಸ್ತುವಾರಿ ಮಾಡುವ ಜವಾಬ್ದಾರಿಕೆಯನ್ನು ಸರಕಾರ ನೀಡಿತು. ಲೋಕೋಪಯೋಗಿ ಇಲಾಖೆಯ ಮುಖ್ಯ ವಾಸ್ತು ಶಿಲ್ಪಿ ಉದಯ ಅವರಿಗೆ ಯೋಜನಾ ತಯಾರಿಕೆಯ ಹೊಣೆ ನೀಡಲಾಯಿತು. ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳ ಹಳೆ ದೇವಾಲಯಗಳಲ್ಲಿನ ವಿಗ್ರಹಗಳ ನಿರ್ವಹಣಾ ಜವಾಬ್ದಾರಿಕೆಯನ್ನು ಮುಜರಾಯಿ ಸಮಿತಿಗೆ ಈಗ ದಿವಂಗತರಾಗಿರುವ ಪದ್ಮನಾಭ ನೀಲೇಶ್ವರ ಹಿರಿಯ ತಂತ್ರಿಯವರ ಮೂಲಕ ನಿರ್ವಹಿಸುವ ಹೊಣೆ ನೀಡಲಾಯಿತು. ಈ ಸಂದರ್ಭ ಮೊಣ್ಣಪ್ಪ ನೇತೃತ್ವದ ಸಾರ್ವಜನಿಕ ಜೀರ್ಣೋದ್ಧಾರ ಸಮಿತಿಯನ್ನು ವಿಸರ್ಜಿಸಲಾಯಿತು. ಆದರೆ, ಅಧ್ಯಕ್ಷರಾಗಿದ್ದ ಮೊಣ್ಣಪ್ಪ ಅವರೊಂದಿಗೆ ಜೀರ್ಣೋದ್ಧಾರ ಸಂದರ್ಭ ನಿಗಮದ ಪ್ರಮುಖರು ಚರ್ಚಿಸುತ್ತಿರುವಂತೆಯೂ ಸೂಚಿಸಲಾಗಿತ್ತು. ಜೀರ್ಣೋದ್ಧಾರದ ಗುತ್ತಿಗೆಯನ್ನು ಮೂಲತ: ಕುಶಾಲನಗರದವರಾದ ಸೋಮಶೇಖರ್ ಅವರಿಗೆ ಟೆಂಡರ್ ಮೂಲಕ ರಾಜ್ಯ ಕಾವೇರಿ ನೀರಾವರಿ ನಿಗಮವು ನೀಡಿತು.
ಪುನರ್ ಪ್ರತಿಷ್ಠಾಪನಾ ಸಮಿತಿ ರಚನೆ
ಮುಖ್ಯಮಂತ್ರಿ ಕೃಷ್ಣ ಅವರ ಬಳಿಕ ನೂತನ ಮುಖ್ಯಮಂತ್ರಿಯಾಗಿ ಧರಂಸಿAಗ್ ಅವರು ಅಧಿಕಾರ ವಹಿಸಿಕೊಂಡಾಗಲೂ ಜೀರ್ಣೋದ್ಧಾರ ಕಾರ್ಯ ಎಂದಿನAತೆ ಮುಂದುವರಿಯಿತು. ಅಲ್ಲಿಂದ ಪ್ರಾಥಮಿಕ ಹಂತದಲ್ಲಿ ೨೦೦೬ ರಲ್ಲಿ ತಲಕಾವೇರಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಬಹುತೇಕ ಮುಕ್ತಾಯಗೊಂಡಿತು. ಭಾಗಮಂಡಲದ ಜೀರ್ಣೋದ್ಧಾರ ಕಾರ್ಯಕ್ಕೂ ಮುನ್ನ ತಲಕಾವೇರಿಯ ಎಲ್ಲ ದೇವಾಲಯಗಳಲ್ಲಿ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ-ಬ್ರಹ್ಮಕಲಶವನ್ನು ನಡೆಸುವಂತೆಯೂ ಕಾವೇರಿ ಕುಂಡಿಕೆಯಲ್ಲಿಯೂ ಜೀರ್ಣೋದ್ಧಾರವಾಗಿದ್ದುದರಿಂದ ಕುಂಡಿಕೆಯಲ್ಲಿ ಶುದ್ಧ ಕಲಶ ನಡೆಸುವಂತೆಯೂ ಸರಕಾರ ನಿರ್ಧರಿಸಿತು. ಆಗ ರಾಜ್ಯ ಮುಜರಾಯಿ ಇಲಾಖೆಯು ಪುನರ್ ಪ್ರತಿಷ್ಠಾಪನೆಗೆ ಸರಕಾರದಿಂದ ಖರ್ಚು ಮಾಡಲು ಅವಕಾಶವಿಲ್ಲವೆಂದೂ, ಭಕ್ತಾದಿಗಳ ಮೂಲಕ ಹಣ ಸಂಗ್ರಹಿಸಿ ಆ ಕಾರ್ಯ ನಿರ್ವಹಿಸಬೇಕೆನ್ನುವ ಧೋರಣೆ ವ್ಯಕ್ತಪಡಿಸಿ ಅದಕ್ಕಾಗಿ ತಲಕಾವೇರಿ-ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿಯನ್ನು ರಚಿಸಿತು. ಅದರ ಅಧ್ಯಕ್ಷರಾಗಿ ಮತ್ತೆ ಮಾತಂಡ ಮೊಣ್ಣಪ್ಪ ಅವರನ್ನು ಸರಕಾರ ನೇಮಿಸಿತು. ಕಾರ್ಯದರ್ಶಿಯಾಗಿ ನನ್ನನ್ನು ಹಾಗೂ ಖಚಾಂಚಿಯಾಗಿ ಮಾತಂಡ ಸುರೇಶ್ ಚಂಗಪ್ಪ ಅವರನ್ನು ಹಾಗೂ ಇನ್ನಿತರ ಪದಾಧಿಕಾರಿಗಳನ್ನು ನೇಮಿಸಿತು.
ಹಳೆ ಶಿವ ಲಿಂಗವನ್ನು ಭೂಗತ ಮಾಡಲಾಗಿತ್ತು
ನಾವು ಧಾರ್ಮಿಕ ಕಾರ್ಯಗಳಿಗೆ ಕೈಹಾಕುವ ಮುನ್ನವೇ ಸರಕಾರದಿಂದ ಜೀರ್ಣೋದ್ಧಾರ ಕೆಲಸಗಳ ನಡುವೆಯೇ ಹಳೆಯ ಅಗಸ್ತೆö್ಯÃಶ್ವರ ಶಿವಲಿಂಗವನ್ನು ನೂತನವಾಗಿ ನಿರ್ಮಿಸಿದ ಅಗಸ್ತೆö್ಯÃಶ್ವರ ಗರ್ಭಗುಡಿಯ ಕೆಳಗೆ ಭೂಗತ ಮಾಡಲಾಗಿತ್ತು. ಅದರ ಮೇಲೆ “ಫ್ಲೋರಿಂಗ್” ಮಾಡಿ ಮುಚ್ಚಲಾಗಿದೆ ಎನ್ನುವ ಮಾಹಿತಿ ದೊರಕಿತು. ಈ ಬಗ್ಗೆ ನಾನು ಸಂಬAಧಿತ ಎಲ್ಲ ಇಲಾಖೆಗಳ ಪ್ರಮುಖರು, ಗುತ್ತಿಗೆದಾರರನ್ನು ಪ್ರಶ್ನಿಸಿದಾಗ ಅವರೆಲ್ಲರ ಉತ್ತರ ಒಂದೇ ಆಗಿತ್ತು “ಜ್ಯೋತಿಷಿಗಳ ಮಾರ್ಗದರ್ಶನ ಪಡೆದು, ಕ್ಷೇತ್ರ ತಂತ್ರಿಗಳ ಸಲಹೆ ಪಡೆದು ಶಿವಲಿಂಗವನ್ನು ಗರ್ಭಗುಡಿಯ ತಳಹದಿಯಲ್ಲಿ ಇರಿಸಲಾಗಿದೆ. ಏಕೆಂದರೆ, ಆ ಹಳೆಯ ಶಿವಲಿಂಗ ಭಿನ್ನವಾಗಿದ್ದು ಅದನ್ನು ಪ್ರತಿಷ್ಠೆ ಮಾಡುವಂತಿರಲಿಲ್ಲ. ಆದರೆ, ಅದರ ಶಕ್ತಿ ಅಲ್ಲಿಯೇ ಇರುವಂತೆಯೂ ತಳಭಾಗದಲ್ಲಿ ಇರಿಸಲಾಗಿದೆ. ಪೂಜೆಗೋಸ್ಕರ ಪ್ರತ್ಯೇಕ ನೂತನ ಶಿವಲಿಂಗವನ್ನು ತಯಾರಿಸಲಾಗಿದ್ದು ಅಷ್ಟಬಂಧ, ಬ್ರಹ್ಮಕಲಶ ಸಹಿತ ನೂತನ ಶಿವಲಿಂಗವನ್ನು ಪ್ರತಿಷ್ಠಾಪಿಸುವ ಕಾರ್ಯವನ್ನು ಮಾಡಿ” ಎಂದು ಮೊಣ್ಣಪ್ಪ ಅವರ ನೇತೃತ್ವದ ನಮ್ಮ ಪುನರ್ ಪ್ರತಿಷ್ಠಾಪನಾ ಸಮಿತಿಗೆ ಮುಜರಾಯಿ ಮತ್ತು ಕಾವೇರಿ ನಿಗಮದಿಂದ ತಿಳಿಸಲಾಯಿತು. ಸರಕಾರ, ಕಾವೇರಿ ನೀರಾವರಿ ನಿಗಮ, ಮುಜರಾಯಿ ಸಮಿತಿ, ಆಗಿನ ಕ್ಷೇತ್ರ ತಂತ್ರಿಯವರು, ಭಗ್ನಗೊಂಡಿದ್ದೆನ್ನಲಾದ ಶಿವಲಿಂಗವನ್ನು ಅಗಸ್ತೆö್ಯÃಶ್ವರ ಗರ್ಭಗುಡಿಯಲ್ಲಿ ಭೂಗತ ಮಾಡಿದ್ದಾರೆ ಎಂದು ನನಗೆ ತಿಳಿದುದು ನಾನು ಪುನರ್ ಪ್ರತಿಷ್ಠಾಪನಾ ಸಮಿತಿಯ ಕಾರ್ಯದರ್ಶಿಯಾದ ಬಳಿಕ.
ಮೊಣ್ಣಪ್ಪ ಅವರ ನೇತೃತ್ವದ ಸಮಿತಿಯು ಸದಸ್ಯರುಗಳ ಸಹಕಾರದಿಂದ ತಲಕಾವೇರಿಯಲ್ಲಿ ೨೦೦೬ ರ ಮೇ.೧೫ ರಿಂದ ೨೦ ರವರೆಗೆ ಅಷ್ಟಬಂಧ, ಬ್ರಹ್ಮ ಕಲಶ ಧಾರ್ಮಿಕ ವಿಧಿವಿಧಾನಗಳನ್ನು ವಿಧ್ಯುಕ್ತವಾಗಿ ನೆರವೇರಿಸಿತು. ಎಲ್ಲ ಧಾರ್ಮಿಕ ಪ್ರಕ್ರಿಯೆಗಳನ್ನು ಕ್ಷೇತ್ರ ತಂತ್ರಿಯವರಾದ ಹಿರಿಯ ನೀಲೇಶ್ವರ ಪದ್ಮನಾಭ ತಂತ್ರಿ (ಈಗ ದಿವಂಗತರು) ನಡೆಸಿಕೊಟ್ಟರು.
ಭಾಗಮಂಡಲದಲ್ಲಿ ಪ್ರತಿಷ್ಠಾಪನೆ
ಅದಾದ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತು ಬಳಿಕ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಭಾಗಮಂಡಲದಲ್ಲಿ ಜೀರ್ಣೋದ್ಧಾರ ಕಾರ್ಯ ಮುಂದುವರಿಯಿತು. ೨೦೦೯ ರ ಏಪ್ರಿಲ್ ೨ ರಿಂದ ಏಪ್ರಿಲ್ ೧೫ ರವರೆಗೆ ಇದೇ ಪುನರ್ ಪ್ರತಿಷ್ಠಾಪನಾ ಸಮಿತಿಯಿಂದ ಭಾಗಮಂಡಲದ ಎಲ್ಲ ದೇವಾಲಯಗಳಲ್ಲಿ ಅಷ್ಟಬಂಧ, ಬ್ರಹ್ಮ ಕಲಶ ಮತು ಪುನರ್ ಪ್ರತಿಷ್ಠಾಪನಾ ಕಾರ್ಯ ನೆರವೇರಿತು. ನಮ್ಮ ಸಮಿತಿ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಲ್ಲಿ ಈ ಧಾರ್ಮಿಕ ಕಾರ್ಯಗಳಿಗೆ ವಿನಿಯೋಗವಾಗಿಯೂ ರೂ. ೨೩ ಲಕ್ಷಗಳಷ್ಟು ಉಳಿಕೆಯಾಗಿ ನಾವು ಆ ಹಣವನ್ನು ಆಗಿನ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಜಿಲ್ಲಾಧಿಕಾರಿಗಳ ಮೂಲಕ ಅನ್ನ ಛತ್ರ ನಿರ್ಮಾಣಕ್ಕೆಂದು ಹಸ್ತಾಂತರಿಸಿದೆವು. ಇಷ್ಟೊಂದು ಹಣ ಸಂಗ್ರಹಾತಿಗೆ ನಮಗೆ ಮುಖ್ಯವಾಗಿ ಸಹಕರಿಸಿದವರ ಪೈಕಿ ಶಾಸಕರುಗಳಾದ ಹಾಗೂ ಪುನರ್ ಪ್ರತಿಷ್ಠಾಪನಾ ಸಮಿತಿಯ ಗೌರವಾಧ್ಯಕ್ಷರುಗಳಾಗಿದ್ದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಕೂಡ ಸೇರಿದ್ದಾರೆ. ನಮ್ಮ ಜೊತೆಯಲ್ಲಿ ತಾವೂ ಹೆಜ್ಜೆಯಿರಿಸಿ ಹಣ ಸಂಗ್ರಹಾತಿಯಲ್ಲಿ ಕೈ ಜೋಡಿಸಿದ್ದಾರೆ. ನಮ್ಮ ಸಮಿತಿಯಲ್ಲಿದ್ದ ಡಾ. ಸಣ್ಣುವಂಡ ಎಂ. ಕಾವೇರಪ್ಪ, ಕೆ.ಜೆ. ಭರತ್ ಹಾಗೂ ರಾಬಿನ್ ದೇವಯ್ಯ ಅವರುಗಳೂ ಹಣ ಸಂಗ್ರಹಾತಿಗೆ ಸಹಕರಿಸಿದ್ದಾರೆ. ಕೊಡಗು ಏಕೀಕರಣ ರಂಗದಿAದ ತಮ್ಮು ಪೂವಯ್ಯ ಅವರು ಆರ್ಥಿಕ ನೆರವು ಕಲ್ಪಿಸಿದ್ದಾರೆ. ಮತ್ತೋರ್ವ ಸಮಿತಿ ಪ್ರಮುಖರಾದ ಮಂಡೀರ ದೇವಿ ಪೂಣಚ್ಚ ಅವರು ಪವಿತ್ರ ಕುಂಡಿಕೆಯ ಶುದ್ಧ ಕಲಶ ವಿಧಿವಿಧಾನಗಳನ್ನು ನೆರವೇರಿಸಲು ತಮ್ಮ ಕುಟುಂಬ ಸಹಿತ ಸಹಕರಿಸಿದ್ದಾರೆ. ಅಲ್ಲದೆ, ಭಾಗಮಂಡಲ ದೇವಾಲಯ ಮಹಾದ್ವಾರಕ್ಕೆ ಅತ್ಯಂತ ವರ್ಣಾತ್ಮಕ ಬಾಗಿಲುಗಳನ್ನು ಸಿದ್ಧಪಡಿಸಿ ನೀಡಿದ್ದಾರೆ. ಬೆಂಗಳೂರು ಕೊಡವ ಸಮಾಜದ ಎಲ್ಲ ಸದಸ್ಯರುಗಳ ಸಹಕಾರ ದೊರಕಿದ್ದು ಆಗ ಕಾರ್ಯದರ್ಶಿಯಾಗಿದ್ದ ಮಂಡೇಡ ರವಿ ಉತ್ತಪ್ಪ ಅವರು ತಮ್ಮ ಸದಸ್ಯರ ಉದಾರ ಧನ ಸಂಗ್ರಹಿಸಿ ನೀಡಿದ್ದರು. ಅಲ್ಲದೆ, ಬೆಂಗಳೂರಿನ ಬೇರೆರ ಶಂಭು ಅಯ್ಯಣ್ಣ (ಈಗ ದಿವಂಗತರು), ಮಲ್ಲೇಂಗಡ ಬೆಳ್ಯಪ್ಪ, ಸಜನ್ ಪೂವಯ್ಯ, ಕೊಡಂದೇರ ಪೂವಯ್ಯ, ಗೌಡ ಸಮಾಜದ ಅಮ್ಮವ್ವನ ವಾಸು ಮೊದಲಾದವರ ಸಹಕಾರ ಮರೆಯಲಾಗದುದು. ಸಮಿತಿಯ ಇನ್ನಿತರ ಗೌರವಾಧ್ಯಕ್ಷರುಗಳಾಗಿದ್ದ ಎಂ.ಸಿ.ನಾಣಯ್ಯ, ಎಸ್. ಜಿ. ಮೇದಪ್ಪ, ಹಾಗೂ ಕಾರ್ಯದರ್ಶಿಗಳಾಗಿದ್ದ ಎಂ.ಪಿ.ಸುನಿಲ್ ಸುಬ್ರಮಣಿ, ಎ.ಪಿ. ವೀರರಾಜು, ಸಿ. ರಾಜಾ ನಂಜಪ್ಪ ಇವರುಗಳ ಸೇವೆಯೂ ಅವಿಸ್ಮರಣೀಯ.
ನಮ್ಮ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಇನ್ನಿತರ ಪ್ರಮುಖರುಗಳೆಂದರೆ ಸುಗುಣ ಮುತ್ತಣ್ಣ, ಕೆ.ಎಸ್. ದೇವಯ್ಯ, ಟಿ.ಪಿ. ರಮೇಶ್,
ಬಿ.ಎಸ್. ತಮ್ಮಯ್ಯ, ಅನಿಲ್ ಹೆಚ್.ಟಿ., ರಾಜೀವ್, ಕಳ್ಳಿಚಂಡ ವಿಷ್ಣು ಹಾಗೂ ಮತ್ತಿತರರು ನಮ್ಮೊಂದಿಗೆ ಕೈಜೋಡಿಸಿದ ಎಲ್ಲ ಮಹನೀಯರ ಹೆಸರು ಉಲ್ಲೇಖಿಸಲಾಗುತ್ತಿಲ್ಲ; ಕ್ಷಮೆ ಇರಲಿ.
ಶಿವಲಿಂಗ ಹೊರ ತೆಗೆದರು
೨೦೦೯ ರಲ್ಲಿ ಪುನರ್ ಪ್ರತಿಷ್ಠಾಪನಾ ಸಮಿತಿಯ ಕೆಲಸ ಮುಗಿದ ಬಳಿಕ ಸಮಿತಿಯು ವಿಸರ್ಜಿಸಲ್ಪಟ್ಟಿತು. ಆ ನಂತರ ದೇವಾಲಯಗಳ ಆಡಳಿತ ವ್ಯವಸ್ಥೆ ಮುಂದುವರಿಕೆಗೆ ನೂತನ ವ್ಯವಸ್ಥಾಪನಾ ಸಮಿತಿ ನೇಮಕಗೊಂಡಿತು. ಸಮಿತಿಯ ಅಧ್ಯಕ್ಷರಾಗಿ ಅಪ್ಪಚ್ಚಟ್ಟೋಳಂಡ ಮನು ಮುತ್ತಪ್ಪ ನೇಮಕಗೊ