ಮಡಿಕೇರಿ, ಆ. ೨೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಈ ಬಾರಿ ದಶವರ್ಷದ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ತಾ. ೨೭ ರಂದು ನಗರದ ಕೆಳಗಿನ ಗೌಡ ಸಮಾಜದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಕಾಡೆಮಿಯ ದಶವರ್ಷ ಸಂಭ್ರಮದ ಕಾರ್ಯಕ್ರಮಕ್ಕೆ ತಾ. ೨೭ ರಂದು ಚಾಲನೆ ದೊರೆಯಲಿದ್ದು, ಅಂದಿನ ಕಾರ್ಯಕ್ರಮವನ್ನು ಬೆಳಿಗ್ಗೆ ೧೦.೩೦ ಗಂಟೆಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿ ದ್ದಾರೆ. ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವ ಎಸ್. ಅಂಗಾರ ಆಶಯನುಡಿಗಳನ್ನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಎನ್.ಎಸ್. ದೇವಿಪ್ರಸಾದ್, ಕೊಲ್ಯದ ಗಿರೀಶ್, ಪಿ.ಸಿ. ಜಯರಾಮ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಪಾಲ್ಗೊಳ್ಳಲಿದ್ದು, ಅಕಾಡೆಮಿ ಅಧ್ಯಕ್ಷ ಲಕ್ಷಿö್ಮ ನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಅರೆಭಾಷೆ ಡಿಜಿಟಲ್ ಪುಸ್ತಕಗಳ ಬಿಡುಗಡೆ ನಡೆಯಲಿದೆ ಎಂದು ಲಕ್ಷಿö್ಮ ನಾರಾಯಣ ಕಜೆಗದ್ದೆ ವಿವರಿಸಿದರು. ಮಡಿಕೇರಿಯ ಅನಿಲ್ ಎಚ್.ಟಿ. ನಿರ್ದೇಶನದ ಕೊಡಗು ಗೌಡ ವಿದ್ಯಾಸಂಘ

(ಮೊದಲ ಪುಟದಿಂದ) ಕುರಿತಾದ ಸಾಕ್ಷö್ಯ ಚಿತ್ರ, ಸುಳ್ಯದ ನಾಯರ್ ಕೆರೆ ದುರ್ಗಾಕುಮಾರ್ ನಿರ್ದೇಶನದ ಎನ್.ಎಸ್. ದೇವಿಪ್ರಸಾದ್ ಸಂಪಾಜೆ ಇವರ ಕುರಿತ ಸಾಕ್ಷö್ಯ ಚಿತ್ರಗಳು ಅಂದೇ ಬಿಡುಗಡೆಯಾಗಲಿದೆ. ಸುಳ್ಯದ ಭಾವನ ಸುಗಮ ಸಂಗೀತ ಬಳಗದ ಕೆ.ಆರ್. ಗೋಪಾಲಕೃಷ್ಣ ರಾಗ ಸಂಯೋಜಿಸಿರುವ ಅರೆಭಾಷೆ ಹಾಡುಗಳ ಸಿಡಿ ಬಿಡುಗಡೆ, ೨೦೧೮-೧೯ನೇ ಸಾಲಿನಲ್ಲಿ ಪೂಜಾರಿರ ಮಾದಪ್ಪ ನಿರ್ದೇಶನದ ಹರಿಸೇವೆ ಸಾಕ್ಷö್ಯ ಚಿತ್ರ, ಲೋಕೇಶ್ ಊರುಬೈಲು ಸಂಗ್ರಹಿಸಿ ನಿರ್ದೇಶಿಸಿದ ಕಥೆಗಳ ಆಡಿಯೋ ಬಿಡುಗಡೆಯೂ ಅದೇ ದಿನ ನಡೆಯಲಿದೆ.

ಅರೆಭಾಷೆ ಅಕಾಡೆಮಿಯ ವೆಬ್‌ಸೈಟ್ hಣಣಠಿ://ತಿತಿತಿ.ಚಿಡಿebಚಿsheಚಿಛಿಚಿಜemಥಿ.ಞಚಿಡಿಟಿಚಿಣಚಿಞಚಿ.gov.iಟಿ/ಗೆ ಅಂದು ಚಾಲನೆ ನೀಡಲಾಗುತ್ತದೆ. ಕಥೆ, ಕವಿತೆ, ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ವಾದ್ಯ ಪರಿಕರವನ್ನು ವಿತರಿಸಲಾಗುತ್ತದೆ ಎಂದು ಲಕ್ಷಿö್ಮ ನಾರಾಯಣ ಕಜೆಗದ್ದೆ ಮಾಹಿತಿ ನೀಡಿದರು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ೨೦೧೧ರ ಡಿಸೆಂಬರ್ ೧೫ ರಂದು ರಚನೆಯಾಗಿದ್ದು, ಇದಕ್ಕೆ ಅರೆಭಾಷೆ ಜನಾಂಗ ಬಾಂಧವರ ಸತತ ಪರಿಶ್ರಮದೊಂದಿಗೆ ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಸ್ಪೀಕರ್ ಆಗಿದ್ದ ಕೆ.ಜಿ. ಬೋಪಯ್ಯ ಅವರ ಕೊಡುಗೆಯೂ ಅಪಾರ ಎಂದು ಅವರು ಸ್ಮರಿಸಿದರು. ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರುಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಧನಂಜಯ ಅಗೋಳಿಕಜೆ, ಡಾ. ಕೂಡಕಂಡಿ ದಯಾನಂದ ಉಪಸ್ಥಿತರಿದ್ದರು.