ಸೋಮವಾರಪೇಟೆ, ಆ. ೨೩: ಇಲ್ಲಿನ ಪ.ಪಂ. ಉಪಚುನಾವಣೆ ಸಂಬAಧ ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಎರಡೂ ವಾರ್ಡ್ಗಳಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆಯ ಅಖಾಡಕ್ಕಿಳಿದಿದ್ದಾರೆ. ಈ ಹಿಂದೆ ೧ನೇ ವಾರ್ಡ್ನಿಂದ ಸದಸ್ಯರಾಗಿದ್ದ ಉದಯಶಂಕರ್ ಹಾಗೂ ೩ನೇ ವಾರ್ಡ್ನಿಂದ ಗೆಲುವು ಸಾಧಿಸಿ ಅಧ್ಯಕ್ಷರೂ ಆಗಿದ್ದ ನಳಿನಿ ಗಣೇಶ್ ಅವರುಗಳ ನಿಧನದಿಂದ ತೆರವಾದ ಸ್ಥಾನಕ್ಕೆ ಸೆ.೩ರಂದು ಉಪ ಚುನಾವಣೆ ನಡೆಯಲಿದೆ.

ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಪ್ರಮುಖ ಮೂರು ರಾಜಕೀಯ ಪಕ್ಷಗಳಿಂದಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಸಿಎಂಬಿ ಮೀಸಲು ಕ್ಷೇತ್ರವಾಗಿರುವ ವಾರ್ಡ್ ೧ ರಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಆರ್. ಮೃತ್ಯುಂಜಯ(ಜಯಣ್ಣ), ಕಾಂಗ್ರೆಸ್ ಅಭ್ಯರ್ಥಿಯಾಗಿ ಭುವನೇಶ್(ಧನು), ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಎಸ್. ಗಿರೀಶ್, ಪಕ್ಷೇತರ ಅಭ್ಯರ್ಥಿಯಾಗಿ ರವಿ ಶಂಕರ್ ಅವರುಗಳು ನಾಮಪತ್ರ ಸಲ್ಲಿಸಿದರು.

ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರವಾಗಿರುವ ೩ನೇ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಮೋಹಿನಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಧ್ಯಾ ಪ್ರಕಾಶ್, ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಂ. ಪುಷ್ಪ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.

ಪ್ರಮುಖ ಮೂರು ರಾಜಕೀಯ ಪಕ್ಷದ ಅಭ್ಯರ್ಥಿಗಳು ತಮ್ಮ ನಾಯಕರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ ಗಿರೀಶ್ ಹಾಗೂ ಪುಷ್ಪ ಅವರುಗಳು ನಾಮಪತ್ರ ಸಲ್ಲಿಸುವ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ನಾಗರಾಜು, ಮುಖಂಡರಾದ ಹೆಚ್.ಆರ್.ಸುರೇಶ್, ಕೆ.ಟಿ. ಪರಮೇಶ್, ಬಗ್ಗನ ಅನಿಲ್, ಭರತ್, ಪ್ರವೀಣ್, ನಗರಾಧ್ಯಕ್ಷ ಜಯಾನಂದ, ಯುವ ಜೆಡಿಎಸ್ ಅಧ್ಯಕ್ಷ ತ್ರಿಶೂಲ್, ಮಹಿಳಾಧ್ಯಕ್ಷೆ ಎಂ.ಎ. ರುಬೀನಾ, ಜಿಲ್ಲಾ ಉಪಾಧ್ಯಕ್ಷ ಸ್ವಾಗತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿಗಳಾದ ಭುವನೇಶ್ ಹಾಗೂ ಸಂಧ್ಯಾ ಪ್ರಕಾಶ್ ಅವರುಗಳು ನಾಮಪತ್ರ ಸಲ್ಲಿಸುವ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಪ.ಪಂ. ಸದಸ್ಯರಾದ ಬಿ. ಸಂಜೀವ, ಶೀಲಾ ಡಿಸೋಜ, ವೆಂಕಟೇಶ್, ಬ್ಲಾಕ್ ಉಪಾಧ್ಯಕ್ಷ ಮಂಜುನಾಥ್, ನಗರಾಧ್ಯಕ್ಷ ನಾಗರಾಜ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕೆ.ಎ. ಯಾಕೂಬ್, ಜೆ.ಎಲ್. ಜನಾರ್ಧನ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಬಿಜೆಪಿ ಅಭ್ಯರ್ಥಿಗಳಾದ ಮೃತ್ಯುಂಜಯ ಹಾಗೂ ಮೋಹಿನಿ ಅವರುಗಳು ನಾಮಪತ್ರ ಸಲ್ಲಿಸುವ ಸಂದರ್ಭ ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ತಾ.ಪಂ. ಮಾಜೀ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಕಾರ್ಯದರ್ಶಿಗಳಾದ ಮೋಕ್ಷಿಕ್, ಗೌತಮ್, ಪ.ಪಂ.ಸದಸ್ಯರಾದ ಪಿ.ಕೆ. ಚಂದ್ರು, ಬಿ.ಆರ್.ಮಹೇಶ್, ಶುಭಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿರುವ ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ್‌ಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ರಾಜೇಶ್ ಅವರುಗಳು ಅಭ್ಯರ್ಥಿಗಳಿಂದ ಉಮೇದುವಾರಿಕೆ ಸ್ವೀಕರಿಸಿದರು.

ತಾ. ೨೪ರಂದು (ಇಂದು) ನಾಮಪತ್ರಗಳ ಪರಿಶೀಲನೆ, ೨೬ರೊಳಗೆ ನಾಮಪತ್ರ ವಾಪಸ್ ಪಡೆಯುವುದು, ಸೆಪ್ಟೆಂಬರ್ ೩ ರಂದು ಚುನಾವಣೆ, ಮರು ಮತದಾನದ ಅವಶ್ಯಕತೆ ಉಂಟಾದಲ್ಲಿ ಸೆ.೫ರಂದು ಮರು ಮತದಾನ, ತಾ. ೬ರಂದು ಮತ ಎಣಿಕೆ ನಡೆಯಲಿದೆ.