ಮಡಿಕೇರಿ, ಆ. ೨೩: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿನ ಮೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳನ್ನು ಪುನರ್ ವಿಂಗಡಣೆ ಮಾಡಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಸಂಘÀಟನೆಯ ಹಿತದೃಷ್ಟಿಯಿಂದ ಪುನರ್ ವಿಂಗಡಣೆ ಮಾಡಿರುವದಾಗಿ ಕೊಡಗು ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ತಿಳಿಸಿದ್ದಾರೆ.
ಒಟ್ಟು ೫೧೬೩೧ ಮತದಾರರನ್ನು ಒಳಗೊಂಡಿರುವ ಮಡಿಕೇರಿ ಬಿಸಿಸಿಗೆ ೬೬ ಬೂತ್ಗಳು ಒಳಪಡಲಿದ್ದು, ಮಡಿಕೇರಿ ನಗರ ಸಭೆಯ ೨೮, ಮಕ್ಕಂದೂರು, ಗಾಳಿಬೀಡು, ಕೆ.ನಿಡುಗಣೆ, ಕಡಗದಾಳು, ಮರಗೋಡು, ಹೊಸ್ಕೇರಿ, ಮೂರ್ನಾಡು, ಹೊದ್ದೂರು ಪಂಚಾಯ್ತಿಗಳು ಸೇರಿದಂತೆ ೩೮ ಬೂತ್ಗಳು ಒಳಪಡಲಿವೆ. ೮೧೬೩೨ ಜನಸಂಖ್ಯೆ ಹೊಂದಿರುವ ಸೋಮವಾರಪೇಟೆ ಬಿಸಿಸಿಗೆ ೧೦೬ ಬೂತ್ಗಳು ಒಳಪಡಲಿದ್ದು, ಶಾಂತಳ್ಳಿ ಹೋಬಳಿಯ ೧೨, ಕೊಡ್ಲಿಪೇಟೆ ಹೋಬಳಿಯ ೧೮, ಶನಿವಾರಸಂತೆ ಹೋಬಳಿಯ ೨೪, ಸೋಮವಾರಪೇಟೆ ಹೋಬಳಿಯ ೩೪, ಸುಂಟಿಕೊಪ್ಪ ಹೋಬಳಿಯ ಹರದೂರು, ಮಾದಾಪುರ, ಗರ್ವಾಲೆಗ್ರಾಮ ಪಂಚಾಯ್ತಿಗಳ ೧೪ ಬೂತ್ಗಳು ಒಳಪಡಲಿವೆ. ೭೮೦೭೮ ಜನಸಂಖ್ಯೆ ಹೊಂದಿರುವ ಕುಶಾಲನಗರ ಬಿಸಿಸಿಗೆ ೯೭ ಬೂತ್ಗಳು ಒಳಪಡಲಿದ್ದು, ಕುಶಾಲನಗರ ಹೋಬಳಿಯ ೬೭, ಸುಂಟಿಕೊಪ್ಪ ಹೋಬಳಿಯ ಚೆಟ್ಟಳ್ಳಿ, ಅತ್ತೂರು, ನಲ್ಲೂರು, ೭ನೇ ಹೊಸಕೊಟೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಸುಂಟಿಕೊಪ್ಪ, ಕೆದಕಲ್ ಗ್ರಾಮ ಪಂಚಾಯ್ತಿಗಳ ೩೦ ಬೂತ್ಗಳು ಒಳಪಡಲಿವೆ ಎಂದು ಧರ್ಮಜ ತಿಳಿಸಿದ್ದಾರೆ.