ವೀರಾಜಪೇಟೆ, ಆ. ೨೩: ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ಅಪ್ಪ, ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ನೆಹರುನಗರದ ನಿವಾಸಿ ಗಫೂರ್ (೬೦) ಮತ್ತು ನವಾಬ್ (೩೫) ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ಅಪ್ಪ, ಮಗ. ನಗರದ ಗೋಣಿಕೊಪ್ಪಲು ರಸ್ತೆಯ ಮಾಂಸ ಮಾರುಕಟ್ಟೆ ಬಳಿ ಲಾಟರಿ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಗರÀ ಪೊಲೀಸರು ಆರೋಪಿತರಿಂದ ಒಟ್ಟು ೫,೮೦೦ ರೂ ಸೇರಿದಂತೆ ಕೇರಳ ರಾಜ್ಯದ ಲಾಟರಿ ಟಿಕೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಮೇಲೆ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಠಾಣೆಯ ಪಿ.ಎಸ್.ಐ. ಜಗಧೀಶ್ ಧೂಳ್ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಾಜನ್, ಕುಮಾರ್, ಸಂತೋಷ್, ಮಧು ಕುಮಾರ್ ಮತ್ತು ಖಾದರ್ ಇದ್ದರು.
-ಕೆ.ಕೆ.ಎಸ್