ಸೋಮವಾರಪೇಟೆ, ಆ. ೨೨: ಪ್ರಸಕ್ತ ವರ್ಷ ಸುರಿದ ಭಾರೀ ಮಳೆಯಿಂದಾಗಿ ಸೋಮವಾರಪೇಟೆ ತಾಲೂಕಿನ ಹಲವಷ್ಟು ಗ್ರಾಮಗಳಲ್ಲಿ ಕಾಫಿ, ಕರಿಮೆಣಸು ಫಸಲು ನೆಲಕ್ಕಚ್ಚಿದ್ದು, ಸರ್ಕಾರ ಮಡಿಕೇರಿ ತಾಲೂಕನ್ನು ಮಾತ್ರ ಅತಿವೃಷ್ಟಿ ಪೀಡಿತ ತಾಲೂಕೆಂದು ಪರಿಗಣಿಸಿ ರುವುದು ಸರಿಯಲ್ಲ. ಸೋಮವಾರ ಪೇಟೆ ತಾಲೂಕಿನಲ್ಲೂ ಸಮೀಕ್ಷೆ ನಡೆಸಿ ಅತಿವೃಷ್ಟಿ ಪೀಡಿತ ಪ್ರದೇಶದ ಕೃಷಿಕರಿಗೆ ಪರಿಹಾರ ಒದಗಿಸ ಬೇಕೆಂದು ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಆಗಸ್ಟ್ ೧೫ ರವರೆಗೆ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ, ಮಾದಾಪುರ, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಇದೀಗ ಕಾಫಿ ಮತ್ತು ಕರಿಮೆಣಸು ಫಸಲು ಉದುರುತ್ತಿದೆ. ಕಳೆದ ೨೦೧೮ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಫಸಲು ನಷ್ಟ ವಾಗುತ್ತಿದ್ದು, ಅತಿವೃಷ್ಟಿಗೆ ಬೆಳೆಗಾರರು ಹಾಗೂ ಕೃಷಿಕರು ಹೈರಾಣಾಗಿದ್ದಾರೆ ಎಂದರು. ಆದರೆ ಜಿಲ್ಲೆಯ ಮಡಿಕೇರಿ ಯನ್ನು ಮಾತ್ರ ಅತಿವೃಷ್ಟಿ ಪೀಡಿತ ತಾಲೂಕೆಂದು ಸರ್ಕಾರ ಗುರುತಿಸಿದ್ದು, ಸೋಮವಾರಪೇಟೆ ಯನ್ನು ಕಡೆಗಣಿಸಿದೆ. ತಕ್ಷಣ ಕಂದಾಯ ಇಲಾಖೆಯೊಂದಿಗೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಗಳೂ ಸೇರಿ ವಾಸ್ತವಾಂಶದ ಬಗ್ಗೆ ಸಮೀಕ್ಷೆ ನಡೆಸಬೇಕೆಂದು ಬಿ.ಬಿ. ಸತೀಶ್ ಆಗ್ರಹಿಸಿದರು. ಕಾಫಿ ಬೆಳೆಗಾರರನ್ನು ಉಳಿಸಲು ಶಾಸಕರು ಮುಂದಾಗಬೇಕು. ತಾಲೂಕನ್ನು ಅತಿವೃಷ್ಟಿ ಪೀಡಿತ ಎಂದು ಪರಿಗಣಿಸಿ ಸರ್ಕಾರದಿಂದ ಹೆಚ್ಚಿನ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ ಸತೀಶ್, ಅಧಿಕಾರಿಶಾಹಿ ಆಡಳಿತ ಮಂದುವರೆದರೆ ತಾಲೂಕಿನಾದ್ಯಂತ ಕಾಂಗ್ರೆಸ್‌ನಿAದ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಸಿದರು.

ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ರಸ್ತೆಗಳ ಬದಿ ಕಾಡು ಕಡಿದು ಚರಂಡಿ ದುರಸ್ತಿಗೆ ವಾರ್ಷಿಕ ಲಕ್ಷಾಂತರ ರೂಪಾಯಿ ಅನುದಾನ ಬರುತ್ತಿದ್ದು, ಸಮರ್ಪಕವಾಗಿ ಕಾಮಗಾರಿ ನಿರ್ವಹಿಸುತ್ತಿಲ್ಲ. ತಾಲೂಕಿನ ಎಲ್ಲಾ ರಸ್ತೆಗಳೂ ಹದಗೆಟ್ಟು ಹೋಗಿವೆ. ಚರಂಡಿ ದುರಸ್ತಿ ಮಾಡದೇ ಕೇವಲ ಗಿಡಗಂಟಿ ತೆರವುಗೊಳಿಸುವ ಮೂಲಕ ಗುತ್ತಿಗೆದಾರರಿಗೆ ಹಣ ವರ್ಗಾಯಿಸಿ, ಅವರಿಂದ ಕಮಿಷನ್ ಪಡೆಯು ತ್ತಿದ್ದಾರೆ ಎಂದು ಸತೀಶ್ ದೂರಿದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಂಜುನಾಥ್, ಕಿಸಾನ್ ಘಟಕದ ಅಧ್ಯಕ್ಷ ಬಸವರಾಜು, ಮುಖಂಡರಾದ ಕೆ.ಎ. ಯಾಕೂಬ್, ಡಿ.ಎಸ್. ಪೂವಯ್ಯ, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಚಂದ್ರಶೇಖರ್ ಉಪಸ್ಥಿತರಿದ್ದರು.