ಶನಿವಾರಸಂತೆ, ಆ. ೨೧: ಕೊಡಗು ಜಿಲ್ಲೆಯ ಮತದಾರರನ್ನು ಬಿಜೆಪಿ ಸರಕಾರ ವಂಚಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಿಕಲಚೇತನರ ವಿಭಾಗದ ಅಧ್ಯಕ್ಷ ಡಿ.ಕೆ. ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೊಡಗಿನಲ್ಲಿ ಮೂವರು ಸಚಿವರಿದ್ದರು. ಈ ಬಾರಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬದಂದಾಗಿನಿAದಲೂ ಕೊಡಗು ಜಿಲ್ಲೆಗೆ ಸಚಿವ ಸ್ಥಾನವನ್ನೇ ನೀಡದೇ ಮೂಲೆಗುಂಪು ಮಾಡಲಾಗಿದೆ. ಅತೃಪ್ತರು, ಅನರ್ಹರಿಗೆ ಮಣೆ ಹಾಕುವ ನೆಪದಲ್ಲಿ ದಶಕಗಳಿಂದ ಪಕ್ಷವನ್ನು ನಂಬಿಕೆಯಿAದ ಬೆಂಬಲಿಸಿದ ಕೊಡಗಿನ ಮತದಾರರಿಗೆ ಅನ್ಯಾಯವಾಗಿದೆ ಎಂದವರು ದೂರಿದ್ದಾರೆ.
ಕೊರೊನಾ ಸಮಸ್ಯೆ ಕಾಫಿ ಬೆಳೆಗಾರರ ಸಮಸ್ಯೆ ಹಾಗೂ ಅತಿವೃಷ್ಟಿ ಹಾನಿ ಮುಂತಾದ ಗುರುತರ ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿರುವ ಜಿಲ್ಲೆಗೆ ಸಚಿವರೊಬ್ಬರು ಇದ್ದಲ್ಲಿ ಸರಕಾರದಿಂದ ಸಹಕಾರ ನೀಡಲು ಸಹಾಯವಾಗುತ್ತಿತ್ತು. ಈ ಮೂಲಕ ಸಾಮಾಜಿಕ ನ್ಯಾಯ ಪಾಲನೆಗೂ ಅವಕಾಶವಾಗುತ್ತಿತ್ತು. ಆದರೆ ಗಡಿ ಜಿಲ್ಲೆಯವರಾಗಿರುವ ಕೊಡಗನ್ನು ಬಿಜೆಪಿ ಸರಕಾರ ಕಡೆಗಣಿಸುತ್ತಾ ಬಂದಿರುವುದು ಸರಿಯಲ್ಲ ಎಂದವರು ಹೇಳಿದ್ದಾರೆ.