ಮಡಿಕೇರಿ, ಅ, ೨೧: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ವತ್ಸಲಾ ಶ್ರೀಶ ಅವರ ಭ್ರಾಜಿತ - ಬೆಳಕಿನ ಕಡೆಗೊಂದು ಪಯಣ ಕವನ ಸಂಕಲನ ಬಿಡುಗಡೆ ಸಮಾರಂಭ ಮತ್ತು ಆಯ್ದ ಕವಿಗಳಿಂದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವು ತಾ. ೨೩ ರಂದು (ನಾಳೆ) ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆಯಲಿದೆ.

ಅಪರಾಹ್ನ ೨.೩೦ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಉದ್ಘಾಟಿಸಲಿದ್ದು, ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿ ಅಧ್ಯಕ್ಷತೆಯನ್ನು ಜಿಲ್ಲೆಯ ಹಿರಿಯ ಸಾಹಿತಿ ನಾಗೇಶ್ ಕಾಲೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟಿ ಬಿ.ಎನ್.ಮನುಶೆಣೈ ಭಾಗವಹಿಸಲಿದ್ದಾರೆ.

ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡದಲ್ಲಿ ಕಿಗ್ಗಾಲು ಗಿರೀಶ್, ಕೃಪಾ ದೇವರಾಜ್, ಕೊಡವ ಭಾಷೆಯಲ್ಲಿ ಚಟ್ಟಂಗಡ ರವಿ ಸುಬ್ಬಯ್ಯ, ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ, ಅರೆಭಾಷೆಯಲ್ಲಿ ಬಿ.ಆರ್. ಜೋಯಪ್ಪ, ಕುಡೆಕಲ್ ಸಂತೋಷ್, ತುಳುಭಾಷೆಯಲ್ಲಿ ವಾಸು ರೈ ಮತ್ತು ಕಿಶೋರ್ ರೈ. ಕೊಂಕಣಿಯಲ್ಲಿ ಚಾರ್ಲ್ಸ್ ಡಿಸೋಜಾ, ಸಾವರಿನ್ ಡಿಸೋಜಾ, ಬ್ಯಾರಿ ಭಾಷೆಯಲ್ಲಿ ಎಂ.ಇ. ಮಹಮದ್ ಮತ್ತು ಎಂ.ಎA. ಅಬ್ದುಲ್ಲ ಕವನ ವಾಚಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.