ಮಡಿಕೇರಿ, ಆ. ೨೧: ಕೊಡಗು ಜಿಲ್ಲಾ ಬ್ರಾಹ್ಮಣ ಅರ್ಚಕರ ಸಂಘವನ್ನು ರಚಿಸಲಾಗಿದ್ದು, ಇದರ ಉದ್ಘಾಟನೆ ಇತ್ತೀಚೆಗೆ ಪೊನ್ನಂಪೇಟೆಯ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಪೊನ್ನಂಪೇಟೆ ಅಯ್ಯಪ್ಪ ದೇವಸ್ಥಾನದ ಅರ್ಚಕರಾದ ಶಿವಪ್ರಸಾದ್ ಕೇಕುಣ್ಣಾಯ, ಉಪಾಧ್ಯಕ್ಷರಾಗಿ ಕಿರುಗೂರು ಮಹಾದೇವರ ದೇವಸ್ಥಾನದ ಅರ್ಚಕರಾದ ಸುದರ್ಶನ ಕೆದಿಲಾಯ, ಕಾರ್ಯದರ್ಶಿಯಾಗಿ ತೂಚಮಕೇರಿ ಮಹಾದೇವರ ದೇವಸ್ಥಾನದ ಅರ್ಚಕರಾದ ನಾಗೇಶ್ ಭಾರದ್ವಾಜ್ ಹಾಗೂ ಇತರ ೨೩ ದೇವಸ್ಥಾನದ ಅರ್ಚಕರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಬೆಳಗ್ಗೆ ಗಣಪತಿ ಹೋಮ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.