ಗುಡ್ಡೆಹೊಸೂರು, ಆ. ೨೧: ಗುಡ್ಡೆಹೊಸೂರು ಗ್ರಾಮ ವ್ಯಾಪ್ತಿಯ ಸುಣ್ಣದಕೆರೆ ಸುತ್ತ್ತಮುತ್ತಲಿನಲ್ಲಿ ರೈತರ ಬೆಳೆಗಳನ್ನು ಆನೆಗಳು ದಾಳಿ ನಡೆಸಿ ನಷ್ಟ ಪಡಿಸುತ್ತಿದೆ ಇದಲ್ಲದೆ ಅಲ್ಲಿನ ನಿವಾಸಿ ರಂಜಿತ್ ಹಾಗೂ ಶಿವ ಎಂಬವರು ಪ್ರತ್ಯಕ್ಷವಾಗಿ ಹುಲಿಯನ್ನು ವೀಕ್ಷಿಸಿರುವುದಾಗಿಯೂ ಮಾಹಿತಿ ನೀಡಿದ್ದಾರೆ. ಸುಮಾರು ಒಂದು ವಾರದಿಂದ ನಿರಂತರವಾಗಿ ಆನೆಯು ರೈತರ ಜೋಳ, ಬಾಳೆ, ಮರಗೆಣಸು, ಅಡಿಕೆ, ತೆಂಗು ಅಲ್ಲದೆ ವಿವಿಧ ಬೆಳೆಗಳನ್ನು ತಿಂದು ನಾಶಪಡಿಸುತ್ತಿವೆ ಎಂದು ಈ ಭಾಗದ ರೈತರು ದೂರಿ ಕೊಂಡಿದ್ದಾರೆ. ಅರಣ್ಯ ಇಲಾಖೆಯ ವರಿಗೆ ಮಾಹಿತಿ ನೀಡಿದರು ಸ್ಪಂದಿ ಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಅರಣ್ಯದಂಚಿನ ಸುಣ್ಣದಕೆರೆ ಗ್ರಾಮದ ನಿವಾಸಿಗಳು ಆನೆ, ಹುಲಿ ಹಾವಳಿಯಿಂದ ಭಯಭೀತರಾಗಿ ದ್ದಾರೆ. ಸಂಜೆಯಾಗುತ್ತಿದ್ದAತೆ ರೈತರು ತಮ್ಮ ತೋಟಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. ಅಲ್ಲಿನ ನಿವಾಸಿಗಳಾದ ಪಾರ್ವತಿ, ರಂಜಿತ್, ರಾಜಪ್ಪ, ಜಯಪ್ರಕಾಶ್ ಮುಂತಾ ದವರ ಬೆಳೆಗಳು ನಾಸವಾಗಿದೆ. ಅರಣ್ಯ ಇಲಾಖೆಯವರು ಸೂಕ್ತಕ್ರಮ ವಹಿಸುವಂತೆ ರೈತರು ಒತ್ತಾಯಿಸಿದ್ದಾರೆ. ಆನೆಕಂದಕ ನಿರ್ಮಾಣವಾಗಿದ್ದರೂ ಪಡುತ್ತಿದ್ದಾರೆ. ಅಲ್ಲಿನ ನಿವಾಸಿಗಳಾದ ಪಾರ್ವತಿ, ರಂಜಿತ್, ರಾಜಪ್ಪ, ಜಯಪ್ರಕಾಶ್ ಮುಂತಾ ದವರ ಬೆಳೆಗಳು ನಾಸವಾಗಿದೆ. ಅರಣ್ಯ ಇಲಾಖೆಯವರು ಸೂಕ್ತಕ್ರಮ ವಹಿಸುವಂತೆ ರೈತರು ಒತ್ತಾಯಿಸಿದ್ದಾರೆ.